ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರಿನಿಂದ ಹಲ್ಲೆ
ಉಳ್ಳಾಲದ ರಹಮಾನಿಯಾ ಮಸೀದಿ ಬಳಿ ನಿಂತಿದ್ದ 23 ವರ್ಷದ ನೌಷದ್ ಎಂಬುವವರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಮಂಗಳೂರು, ಮಾರ್ಚ್ 27: ಯುವಕನ ಮೇಲೆ ತಲವಾರಿನಿಂದ ದಾಳಿ ಮಾಡಿ, ದುಷ್ಕರ್ಮಿಗಳು ಪರಾರಿಯಾದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.
ಮಾರ್ಚ್ 26 ಭಾನುವಾರದಂದು ಉಳ್ಳಾಲದ ರಹಮಾನಿಯಾ ಮಸೀದಿ ಬಳಿ ನಿಂತಿದ್ದ 23 ವರ್ಷದ ನೌಷದ್ ಎಂಬುವವರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.[ಕೋಣ ತಿವಿದು ಕೂಲಿ ಕಾರ್ಮಿಕ ಸಾವು, ಮಾಲೀಕರ ನಿರ್ಲಕ್ಷ್ಯ ಆರೋಪ]

ಬೈಕಿನಲ್ಲಿದ್ದವರಲ್ಲಿ ಒಬ್ಬ ರಮಿತ್ ಎಂಬ ಯುವಕ ಎಂದು ಗುರತಿಸಲಾಗಿದೆ. ಸದ್ಯಕ್ಕೆ ನೌಷದ್ ಉಳ್ಳಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.












Click it and Unblock the Notifications