• search
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ಆರಂಭವಾಗಿದೆ ಹೆಲ್ಮೆಟ್ ನ ಹೊಸ ಟ್ರೆಂಡ್

|

ಮಂಗಳೂರು, ಜುಲೈ 02: ದ್ವಿಚಕ್ರ ವಾಹನದಲ್ಲಿ ಓಡಾಡುವವರೆಲ್ಲರಿಗೂ ಹೆಲ್ಮೆಟ್ ಕಡ್ಡಾಯ ಮಾಡಿರುವುದು ಅದರಲ್ಲೂ ನಗರದ ಯುವ ಮನಸ್ಸುಗಳಿಗೆ ಕಿರಿ ಕಿರಿ ಉಂಡುಮಾಡುತ್ತಿದೆ. ಮುಂದೆ ಡ್ರೈವ್ ಮಾಡುವವರೂ ಹೆಲ್ಮೆಟ್ ಧರಿಸಬೇಕು, ಹಿಂದೆ ಕೂತಿರುವವರೂ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸಿದರೆ ಎಲ್ಲಿ ತಮ್ಮ ಹೇರ್ ಸ್ಟೈಲ್ ಹಾಳಾಗುತ್ತೋ ಎನ್ನುವ ಅತಂಕ ಒಂದೆಡೆಯಾದರೆ ತಮ್ಮ ಇಮೇಜ್ ಗೆ ಹೆಲ್ಮೆಟ್ ಸರಿಹೊಂದುವುದಿಲ್ಲ ಅನ್ನುವುದು ಕೆಲವರ ಮಾತು.

ಆದರೆ ತಮ್ಮ ಜೀವ ರಕ್ಷಣೆಗೆ ಸುಪ್ರೀಂ ಕಾರ್ಟ್ ಆದೇಶದಂತೆ ಹೆಲ್ಮೆಟ್ ಧರಿಸಲೇ ಬೇಕು. ಬೇರೆ ವಿಧಿ ಇಲ್ಲ. ಧರಿಸದಿದೇ ಇದ್ದರೆ ರಸ್ತೆ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟಲೇಬೇಕಾಗುತ್ತದೆ. ಆದರೆ, ಈ ಹೆಲ್ಮೆಟ್ ಗೇ ಹೊಸ ರೂಪ ನೀಡಿದರೆ ಹೇಗೆ?

ಹೈದರಾಬಾದ್ : ಬಂತು ಬಿಸಿಲ ಬೇಗೆ ತಣಿಸುವ ಎ.ಸಿ ಹೆಲ್ಮೆಟ್

ತಮ್ಮ ಇಮೇಜ್ ಗೆ ಹೊಂದುವಂತೆ , ತಮ್ಮ ಸ್ಟೈಲ್ ಗೆ ಅನುಗುಣವಾಗಿ ಹೆಲ್ಮೆಟ್ ವಿಸ್ಯಾಸ ಗೊಳ್ಳುತ್ತಿದೆ. ವಿವಿಧ ಪ್ರಕಾರದ, ವಿವಿಧ ರೂಪದ , ವಿವಿಧ ಆಕೃತಿಯ ಹೆಲ್ಮೆಟ್ ಮಾರ್ಪಾಡು ಮಾಡಲಾಗುತ್ತಿದೆ.

ಹೆಲ್ಮೆಟ್ ರೂಪಾಂತರ

ಹೆಲ್ಮೆಟ್ ರೂಪಾಂತರ

ಈಗ ಹೆಲ್ಮೆಟ್ ಗಳನ್ನು ಮಾರ್ಪಾಡು ಮಾಡುವ ಕ್ರೇಜ್ ಆರಂಭವಾಗಿದೆ. ಕೆಲವರಿಗೆ ಕಾರುಗಳ ಕ್ರೇಜಿ ಇದ್ದರೆ, ಇನ್ನೊಬ್ಬನಿಗೆ ಬೈಕ್ ಗಳ ಕ್ರೇಜ್. ಮಂಗಳೂರಿನ ಈ ಯುವಕನಿಗೆ ಹೆಲ್ಮೆಟ್ ನ ಕ್ರೇಜ್.

ತನ್ನ ಡಿಫರೆಂಟ್ ಹೆಲ್ಮೆಟ್ ಕ್ರೇಜ್ ಮೂಲಕ ಈತ ಎಲ್ಲರ ಮನೆ ಮಾತಾಗಿದ್ದಾನೆ. ನಗರದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದಾನೆ ಈ ಯುವಕ.

ಟ್ರೆಂಡ್ ಸೆಟ್ಟರ್ ಆಕಾಂಕ್ಷ್

ಟ್ರೆಂಡ್ ಸೆಟ್ಟರ್ ಆಕಾಂಕ್ಷ್

ಮಂಗಳೂರಿನ ಆಕಾಂಕ್ಷ್ ಕುತ್ತಾರ್ ಈಗ ನಗರದಲ್ಲಿ ಹೊಸದೊಂದು ಕ್ರೇಜ್ ಗೆ ನಾಂದಿ ಹಾಡಿದ್ದಾನೆ. ಹೆಲ್ಮೆಟ್ ಗೆ ವಿಚಿತ್ರ ವಿನ್ಯಾಸ ನೀಡಿ, ಈ ರೀತಿಯಲ್ಲೂ ಹೆಲ್ಮೆಟ್ ಧರಿಸಬಹುದು ಎಂದು ತೋರಿಸಿದ್ದಾನೆ. ಈತನಿಂದಾಗಿ ಹೆಲ್ಮೆಟ್ ಧರಿಸಲು ಹಿಂದೇಟು ಹಾಕುತ್ತಿದ್ದವರು ಈಗ ಹೆಲ್ಮೆಟ್ ಧರಿಸಿ ಬೈಕ್ ರೈಡ್ ಮಾಡಲು ಖುಷಿ ಪಡುತ್ತಿದ್ದಾರೆ.

ಹೆಲ್ಮೆಟ್ ಮೇಲೆ ವ್ಯಾಗ್ರ

ಹೆಲ್ಮೆಟ್ ಮೇಲೆ ವ್ಯಾಗ್ರ

ಮಂಗಳೂರಿನ ಆಕಾಂಕ್ಷ್ ಗೆ ಡಿಫರೆಂಟ್ ಹೆಲ್ಮೆಟ್ ಧರಿಸಬೇಕೆಂದು ಕ್ರೇಜ್. ವಿದೇಶಗಳಲ್ಲಿ ಹ್ಯಾವೆಂಜರ್ಸ್ ಹೆಲ್ಮಟ್ ಗಳನ್ನು ಧರಿಸಿ ಬೈಕ್ ರೈಡ್ ಮಾಡುವುದನ್ನು ನೋಡಿದ್ದ ಈತನಿಗೆ ವಿಭಿನ್ನ ಶೈಲಿಯ ಹೆಲ್ಮೆಟ್ ಧರಿಸಬೇಕೆಂಬ ಇಚ್ಛೆ ಇತ್ತು. ಅದಕ್ಕಾಗಿ ಈತ ತುಳುನಾಡಿನ ಸಂಸ್ಕೃತಿ, ಜನಪದ ಕುಣಿತವಾದ ಹುಲಿವೇಷ ಕುಣಿತದ ಹುಲಿಯ ತಲೆಯಂತಹ ಹೆಲ್ಮೆಟ್ ರೂಪಿಸಿದ್ದಾರೆ.

ತುಳುನಾಡಿನ ಸೊಗಡಿಗೆ ತಕ್ಕಂತೆ ತಮ್ಮ ಹೆಲ್ಮೆಟ್ ಇರಬೇಕು ಎನ್ನುವ ಮನದಾಳವನ್ನು ಸ್ನೇಹಿತ ಕಲಾವಿದರೊಬ್ಬರಲ್ಲಿ ತಿಳಿಸಿದಾಗ ಕಲಾವಿದರೂ ಇದಕ್ಕೆ ಒಪ್ಪಿ, ಆಕಾಂಕ್ಷ್ ತಲೆಗೆ ಒಪ್ಪುವಂತಹ ಹೆಲ್ಮೆಟ್ ಸಿದ್ಧಪಡಿಸಿದ್ದಾರೆ. ಸಾಮಾನ್ಯ ಹೆಲ್ಮೆಟ್ ಗೆ ಹುಲಿಯ ತಲೆಯಂತೆ ವಿನ್ಯಾಸ್ ಗೊಳಿಸಿ, ಈ ಹೆಲ್ಮೆಟ್ ತಯಾರಿಸಿದ್ದಾರೆ.

ಕಣ್ಸೆಳವ ರೈಡ್

ಕಣ್ಸೆಳವ ರೈಡ್

ಮಂಗಳೂರಿನ ಬ್ಯುಸಿ ಟ್ರಾಫಿಕ್ ನಲ್ಲಿ ಆಕಾಂಕ್ಷ್ ಬೈಕ್ ಏರಿ ಬಂದರೆ ಎಲ್ಲರೂ ಈತನತ್ತಲೇ ನೋಡುತ್ತಾರೆ. ಕೆಲವರು ಈತನನ್ನು ನಿಲ್ಲಿಸಿ ಹೆಲ್ಮೆಟ್ ಪಡೆದು ಅವರ ವಿನ್ಯಾಸವನ್ನು ನೋಡಿ ಖುಷಿಪಟ್ಟರೆ, ಇನ್ನು ಕೆಲವರು ಯಾಕಣ್ಣ ನವರಾತ್ರಿ ಈಗಲೇ ಬಂತೇ ಎಂದು ತಮಾಷೆ ಮಾಡಿದ್ದಿದೆ.

ವಿದೇಶಗಳ ಜನ ಎಲ್ಲಾ ವಿಚಾರದಲ್ಲೂ ತಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವಾಗ ತಾನ್ಯಾಕೆ ತುಳುನಾಡಿನ ಜನಪದ ಕುಣಿತವಾದ ಹುಲಿವೇಷವನ್ನು ಹೆಲ್ಮೆಟ್ ಮೂಲಕ ಬಿಂಬಿಸಬಾರದು ಎನ್ನುವುದು ಆಕಾಂಕ್ಷ್ ಅಭಿಪ್ರಾಯ.

ದಕ್ಷಿಣ ಕನ್ನಡ ರಣಕಣ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New trend in helmet introduced in Mangaluru. Akanksh native of Kuttar modified his Helmet as tiger head. Now it is very popular in Mangaluru as ‘tiger helmet’.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more