ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ 3 ಮಹಿಳೆಯರ ರಕ್ಷಣೆ
ಮಂಗಳೂರು, ಅಕ್ಟೋಬರ್, 16 : ಸಮುದ್ರ ಪಾಲಾಗಿ ಮುಳುಗಿ ಹೋಗುತ್ತಿದ್ದ ಮೂವರು ಮಹಿಳೆಯರನ್ನು ರಕ್ಷಿಸಿದ ಸಾಹಸಮಯ ಘಟನೆ ಅಕ್ಟೋಬರ್ 16ರ ಶುಕ್ರವಾರದಂದು ಉಳ್ಳಾಲದ ಕಡಲ ಕಿನಾರೆಯಲ್ಲಿ ನಡೆದಿದ್ದು, ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೂರ್ ಜಹಾನ್ (35), ನಾಫಿಯಾ (30), ಮಡಿಕೇರಿಯ ಖೈರುನ್ನಿಸಾ (28) ಎಂಬುವರು ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ಮೂರು ಮಹಿಳೆಯರು. ಇವರು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಇದೀಗ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.[ಉಡುಪಿ : ಈಜಲು ಹೋಗಿ ಇಬ್ಬರು ಯುವಕರು ನದಿ ಪಾಲು]

ದೇವರ ಕಾರ್ಯದ ನಿಮಿತ್ತ ಈ ಮೂವರು ಮಹಿಳೆಯರು ಕುಟುಂಬದ ಸಮೇತ ಉಳ್ಳಾಲ ದರ್ಗಾಕ್ಕೆ ಹೋಗಿದ್ದರು. ದೇವರ ಪೂಜಾ ವಿಧಿಗಳು ಮುಗಿದ ಬಳಿಕ ಸಮುದ್ರದಲ್ಲಿ ಆಟ ಆಡಲು ತೆರಳಿದ್ದಾರೆ. ಅಲೆಗಳ ಅಬ್ಬರವನ್ನು ಕಡೆಗಣಿಸಿದ ಇವರು ಸಮುದ್ರಕ್ಕಿಳಿದ ಇವರು ತೆರೆಗಳಿಗೆ ಸಿಲುಕಿ ಕೊಚ್ಚಿಹೋಗುತ್ತಿದ್ದರು.
ಮಹಿಳೆಯರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಉಳ್ಳಾಲ ಶಿವಾಜಿ ಈಜು ರಕ್ಷಕ ದಳದವರು ಸಮಯಪ್ರಜ್ಞೆ ಮೆರೆದಿದ್ದು, ತಕ್ಷಣ ಸಮುದ್ರಕ್ಕೆ ಧುಮುಕಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಉಸಿರಾಟ ಸಮಸ್ಯೆಗೆ ಸಿಲುಕಿದ ಕಾರಣ ಸಮೀಪದ ತೊಕ್ಕೋಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.












Click it and Unblock the Notifications