ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂವರ ಮೇಲೆ ಎರಗಿ ಬಂತು ಉರುಳಿಗೆ ಬಿದ್ದಿದ್ದ ಚಿರತೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಸುಬ್ರಹ್ಮಣ್ಯ, ಜನವರಿ 03: ಬಳ್ಪ ಗ್ರಾಮದ ಆಲ್ಕಬೆ ಬಳಿ ಉರುಳಿಗೆ ಬಿದ್ದು ಗಾಯಗೊಂಡಿದ್ದ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಮೂವರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳ್ಪ ಗ್ರಾಮದ ಆಲ್ಕಬೆ ಸಮೀಪ ಯಾರೋ ಇಟ್ಟ ಉರುಳಿಗೆ ಚಿರತೆ ಬಿದ್ದು ಗಾಯಗೊಂಡಿತ್ತು. ಬಾಲಕೃಷ್ಣ ಅವರು ದನಕರುಗಳಿಗೆಂದು ಹುಲ್ಲು ತರಲು ಹೋಗಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿ ಮುಖದ ಭಾಗಕ್ಕೆ ಗಂಭೀರ ಗಾಯ ಮಾಡಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ

ವಿಷಯ ತಿಳಿದ ಅರಣ್ಯ ಇಲಾಖೆಯವರು ಚಿರತೆಯನ್ನು ಬಂಧಿಸುವ ಕಾರ್ಯಾಚರಣೆಯನ್ನು ನಿನ್ನೆ ಮಧ್ಯಾಹ್ನದಿಂದಲೇ ಕೈಗೊಂಡಿದ್ದರು. ಸಂಜೆ ವೇಳೆಗೆ ಸುಬ್ರಹ್ಮಣ್ಯ ದಿಂದ ಡ್ರೋನ್ ತರಿಸಿ 20 ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ಸಂದರ್ಭ ಅವಿತು ಕುಳಿತಿದ್ದ ಚಿರತೆ ಇಬ್ಬರ ಮೇಲೆ ಎರಗಿದೆ. ನಂತರ ತಪ್ಪಿಸಿಕೊಂಡು ಕಾಡಿಗೆ ಓಡಿದೆ. ನಿನ್ನೆ ರಾತ್ರಿ ಕಾರ್ಯಾಚರಣೆ ನಿಲ್ಲಿಸಿದ ಅರಣ್ಯ ಅಧಿಕಾರಿಗಳು ಇಂದು ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.

Three People Injured By Leopard Attack In Mangaluru

ಎ.ಸಿ.ಎಫ್.ಆಸ್ಟಿನ್ ಸೋನ್ಸ್ ಹಾಗೂ ಇನ್ನೋರ್ವ ಅರಣ್ಯಾಧಿಕಾರಿ ದಿವೀಶ್ ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
A leopard attacked on three people including forest department staff in mangaluru. All three were injured and hospitalized,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X