ಮಂಗಳೂರು ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್‌; ವೇಳಾಪಟ್ಟಿ

ಮಂಗಳೂರು, ನವೆಂಬರ್‌ 1: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಮೂರು ವೋಲ್ವೋ ಬಸ್‌ಗಳಿಗೆ ಮಂಗಳವಾರ ಚಾಲನೆ ನೀಡಿದೆ.

'ಕರಾವಳಿ ಕನ್ನಡ ತೇರು' ಹೆಸರಿನ ಬಸ್‌ಗಳಿಗೆ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಬಸ್ಸುಗಳು ಮಂಗಳೂರು ರೈಲು ನಿಲ್ದಾಣ ಮತ್ತು ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲಿವೆ.

ನಗರದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸೇವೆಯನ್ನು ಪರಿಚಯಿಸುವುದು ಬಹುಕಾಲದ ಬೇಡಿಕೆಯಾಗಿತ್ತು. ವಿಮಾನ ನಿಲ್ದಾಣಕ್ಕೆ 2011ರಲ್ಲಿ ಬಸ್ ಸೇವೆಯನ್ನು ಪರಿಚಯಿಸಲಾಗಿತ್ತು. ಆದರೆ ಪ್ರಯಾಣಿಕರ ಕೊರತೆ ಕಾರಣ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ವಿಮಾನ ನಿಲ್ದಾಣದಿಂದ ನಗರಕ್ಕೆ ಬಸ್ ಸಂಚಾರ ಇರಲಿಲ್ಲ.

Three KSRTC Volvo Bus Service Start For Mangaluru Airport

ಮಂಗಳೂರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ದರ 100 ರೂ. ಆಗಿದ್ದು, ಬಸ್ ರೈಲು ನಿಲ್ದಾಣದಿಂದ ಬೆಳಗ್ಗೆ 6.30, 8.45, 11.10, ಮಧ್ಯಾಹ್ನ 3, ಸಂಜೆ 5.15 ಮತ್ತು ಸಂಜೆ 7.30 ಕ್ಕೆ ತನ್ನ ಸಂಚಾರ ಪ್ರಾರಂಭಿಸುತ್ತದೆ. ಹಿಂದಿರುಗುವ ಪ್ರಯಾಣ ಸಮಯದಲ್ಲಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.40, 10, 12.20, 4.05, ಸಂಜೆ 6.25 ಮತ್ತು ರಾತ್ರಿ 8.45 ಕ್ಕೆ ಪ್ರಾರಂಭವಾಗಲಿದೆ. ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬಸ್ ದರ 300 ರೂ. ಮಣಿಪಾಲದಿಂದ ಬೆಳಗ್ಗೆ 7.15, 8.45, ಸಂಜೆ 5.15ಕ್ಕೆ ಬಸ್ ಪ್ರಯಾಣ ಆರಂಭಿಸಲಿದೆ. ವಿಮಾನ ನಿಲ್ದಾಣದಿಂದ ಮಣಿಪಾಲ್‌ಗೆ ಬಸ್ ಬೆಳಿಗ್ಗೆ 10.45, ಮಧ್ಯಾಹ್ನ 12.30 ಮತ್ತು ರಾತ್ರಿ 9.15 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.

Three KSRTC Volvo Bus Service Start For Mangaluru Airport

ಬಸ್ ಸಂಚಾರಕ್ಕೆ ಚಾಲನೆ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಹಾರಾಟದ ಸಮಯವನ್ನು ಅವಲಂಬಿಸಿ ಕೆಎಸ್‌ಆರ್‌ಟಿಸಿ ತನ್ನ ಬಸ್‌ಗಳನ್ನು ನಿರ್ವಹಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+