ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿ ಬಳಿ ಭೀಕರ ಅಪಫಾತ, ಮೂರು ಸಾವು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂನ್ 3 : ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪದ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ. ಗ್ಯಾಸ್ ಟ್ಯಾಂಕರ್ ಮತ್ತು ತೂಫಾನ್ ನಡುವೆ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ದಾವಣಗೆರೆಯ ನಿವಾಸಿಗಳು ಎಂದು ಗುರುತಿಸಲಾಗಿದೆ.

ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದಾಗ, ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಸೋಮವಾರ ತೂಫಾನ್‌ ವಾಹನಕ್ಕೆ ಗ್ಯಾಸ್ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಇದರಿಂದ ತೂಫಾನ್‌ ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Road Accident

ಮೃತಪಟ್ಟವರನ್ನು ತೂಫಾನ್ ಚಾಲಕ ದಾವಣಗೆರೆ ಜಿಲ್ಲೆಯ ತುರುಚಿಘಟ್ಟ ನಿವಾಸಿ ತಿಪ್ಪೇಶ (30), ಶ್ವೇತಾ (26) ಹಾಗೂ ಶ್ವೇತಾ ಅವರ ಪುತ್ರ ಗಣೇಶ್‌ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಗಾಯಾಳಯಗಳಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತೀರ್ಥಯಾತ್ರೆ ಮುಗಿಸಿ ಬರುತ್ತಿದ್ದರು : ದಾವಣಗೆರೆ ಜಿಲ್ಲೆಯ ಒಂದೇ ಕುಟುಂಬದ 17 ಮಂದಿಯ ತಂಡ ಜೂ. 1ರಂದು ತಮ್ಮ ಊರಿನಿಂದ ಖಾಸಗಿ ಟೂರಿಸ್ಟ್‌ ಸಂಸ್ಥೆಯ ವಾಹನದ ಮೂಲಕ ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಉಡುಪಿಗೆ ತೀರ್ಥಯಾತ್ರೆಗಾಗಿ ಆಗಮಿಸಿದ್ದರು. ಸೋಮವಾರ ಧರ್ಮಸ್ಥಳ, ಸುಬ್ರಮಣ್ಯ ಪ್ರವಾಸ ಮುಗಿಸಿ, ಗುಂಡ್ಯ ಮಾರ್ಗವಾಗಿ ಉಡುಪಿಯತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ವಿರುದ್ಧ ದಿಕ್ಕಿನಿಂದ ವೇಗವಾಗಿ ಟ್ಯಾಂಕರ್ ಆಗಮಿಸುತ್ತಿರುವುದನ್ನು ಕಂಡ ತೂಫಾನ್ ಚಾಲಕ, ಹೆದ್ದಾರಿಯ ಡಾಂಬರು ರಸ್ತೆ ಬಿಟ್ಟು ಕೆಳಗಿಳಿದರೂ ಟ್ಯಾಂಕರ್ ತೂಫಾನ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಸಂಚಾರ ಠಾಣೆ ಪೊಲೀಸರು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ.

English summary
Three persons died and 13 others were injured in an accident involving a jeep and a tanker at Shiradi Ghat along the Bangalore-Mangalore National Highway on Monday, June 2 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X