ಚಿನ್ನಕ್ಕಾಗಿ ಇಬ್ಬರ ಕೊಂದಿದ್ದ ಪಾತಕಿಗಳ ಬಂಧನ
ಮಂಗಳೂರು, ಜು.7: ಇಬ್ಬರು ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಮೂಲದ ಮೂವರು ಯುವಕರನ್ನು ಪಾಂಡೇಶ್ವರ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಮಹಮ್ಮದ್ ಸನಾಫ್(25), ಮಹಮ್ಮದ್ ಇರ್ಷಾದ್(24), ಮಹಮ್ಮದ್ ಸಫಾನ್(24) ಬಂಧಿತರು. ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಕೋಝಿಕ್ಕೊಡ್ ಮೂಲದ ಇಬ್ಬರ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದು, ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಫಹೀರ್ ಮತ್ತು ನಫೀರ್‌ನ್ನು ಮಂಗಳೂರಿನ ನಿವಾಸವೊಂದರಲ್ಲಿ ಕೊಲೆ ಮಾಡಲಾಗಿತ್ತು. ಬಳಿಕ ಶವವನ್ನು ಕಾಸರಗೋಡು ಸಮೀಪದ ಬೆದಕಂನಲ್ಲಿ ಹೂಳಲಾಗಿತ್ತು.[ಅತ್ಯಾಚಾರ ಪ್ರಕರಣ : 14 ಮಕ್ಕಳ ತಂದೆ ಬಂಧನ]
ಕೊಲೆಯಾದ ಫಹೀರ್ ಒಂದು ವರ್ಷದಿಂದ ನಾಪತ್ತೆಯಾಗಿದ್ದು, ಆತನ ಪೋಷಕರು ಕೋಝಿಕ್ಕೊಡ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ನಫೀರ್ ಎಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದ್ದು ಮತ್ತಷ್ಟು ಮಾಹಿತಿಗಳು ತಿಳಿಯಬೇಕಿದೆ.












Click it and Unblock the Notifications