ಮಂಗಳೂರಿನ ತೊಕ್ಕೊಟ್ಟು, ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ದಿನಾಂಕ ನಿಗದಿ
ಮಂಗಳೂರು, ಮಾರ್ಚ್ 01: ರಾಜಕೀಯ ವಾಗ್ವಾದಕ್ಕೆ ಗುರಿಯಾಗಿದ್ದ ಮಂಗಳೂರಿನ ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ನವಯುಗಕ್ಕೆ ಗಡುವು ನೀಡಲಾಗಿದೆ.
ಈ ಮೂಲಕ ಸರ್ವಿಸ್ ರಸ್ತೆ ಹಾಗೂ ಜಂಕ್ಷನ್ ಸುಧಾರಣೆಗೆ ಮಾರ್ಚ್ 15, ತೊಕ್ಕೊಟ್ಟು ಫ್ಲೈಓವರ್ ಹಾಗೂ ಉಜ್ಜೋಡಿ ಅಂಡರ್‌ಪಾಸ್ ಪೂರ್ಣ ಮಾಡಲು ಏಪ್ರಿಲ್ 10, ಪಂಪ್ ವೆಲ್ ಮೇಲ್ಸೇತುವೆ ಮುಗಿಸಲು ಮೇ 31ಕ್ಕೆ ಅಂತಿಮ ದಿನ ಗಡುವು ನೀಲಾಗಿದೆ.
ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ನಿರ್ಮಾಣ ಮಾಡಲಾಗದೆ ಹೆಣಗಾಡುತ್ತಿರುವ ನವಯುಗ ಟೋಲ್ ವೇ ಗುತ್ತಿಗೆದಾರ ಸಂಸ್ಥೆಗೆ ಖಾಸಗಿ ಬ್ಯಾಂಕ್‌ನಿಂದ 55 ಕೋಟಿ ರೂಪಾಯಿ ಸಾಲ ಹಾಗೂ 7 ಕೋಟಿ ರೂಪಾಯಿ ಕೇಂದ್ರ ಸರ್ಕಾರದಿಂದ ನೆರವು ನೀಡುವ ಮೂಲಕ ಕೆಲಸ ಚುರುಕುಗೊಳಿಸಲು ಕ್ರಮ ವಹಿಸಲಾಗಿದೆ.

ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ , ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ನಿರ್ಮಾಣ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ ದಾಂಗೆ ಮತ್ತು ನವಯುಗ ಕಂಪನಿ ವ್ಯವಸ್ಥಾಪಕ ನಿರ್ದೇಶಕರ ಸಮಕ್ಷಮದಲ್ಲೇ ಗಡುವು ನಿಗದಿಗೊಳಿಸಲಾಗಿದೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದರು.
ತೊಕ್ಕೊಟ್ಟು ಮತ್ತು ಪಂಪ್ ವೆಲ್ ಫ್ಲೈಓವರ್ ಗಳನ್ನು ಕ್ರಮವಾಗಿ ಏಪ್ರಿಲ್ 10 ಮತ್ತು ಮೇ 31 ರಂದು ಉದ್ಘಾಟಿಸಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಈ ಮೊದಲು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ ದಾಂಘೆ ನೇತೃತ್ವದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭಾರತ್ ವೈ ಶೆಟ್ಟಿ , ರಾಜೇಶ್ ನಾಯಕ್ ಮತ್ತು ಎನ್ಎಚ್ಎಐ ಅಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications