ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಉಂಗುರವನ್ನೇ ನುಂಗಿದ ಕಳ್ಳ!
ಮಂಗಳೂರು, ಮೇ 31: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ 35 ಗ್ರಾಂ ಚಿನ್ನವನ್ನೇ ನುಂಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಶಿಬು ಎಂಬುವವನ್ನೇ ಚಿನ್ನ ನುಂಗಿರುವ ಆರೋಪಿ. ಜುವೆಲ್ಲರಿ ಶಾಪ್ನಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ 35 ಗ್ರಾಂ ಚಿನ್ನವನ್ನು ಶಿಬು ನುಂಗಿ ಎಲ್ಲರೂ ದಂಗಾಗುವಂತೆ ಮಾಡಿದ್ದಾನೆ.

ಸುಳ್ಯದ ಜುವೆಲ್ಲರಿ ಅಂಗಡಿಯೊಂದರಲ್ಲಿ ಮಾರ್ಚ್ 31ರಂದು ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಮೇ 28 ರಂದು ಬಂಧಿಸಿದ್ದರು. ಅವರಲ್ಲೊಬ್ಬ ಆರೋಪಿ ಶಿಬು. ಇವನಿಗೆ ಮೇ 29ರಂದು ರಾತ್ರಿ 9ರ ವೇಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿದೆ. ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಎಕ್ಸ್ರೇ ಮಾಡಿದಾಗ ಆರೋಪಿ ಶಿಬು ಚಿನ್ನಾಭರಣಗಳನ್ನು ನುಂಗಿರುವುದು ಬೆಳಕಿಗೆ ಬಂದಿದೆ. ಮೇ 30ರ ಬೆಳಗ್ಗೆ ಶಿಬು ಹೊಟ್ಟೆಯಿಂದ ಆತ ನುಂಗಿರುವ ಚಿನ್ನಾಭರಣಗಳು ಹೊರಬಂದಿದೆ. ಈ ಮೂಲಕ ಆತನ ಹೊಟ್ಟೆಯಿಂದ ಬರೋಬ್ಬರಿ 35 ಗ್ರಾಂ ಉಂಗುರಗಳು, ಕಿವಿಯೋಲೆ ಸೇರಿ ಹಲವಾರು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಶಿಬು ಪೊಲೀಸರ ಕಣ್ತಪ್ಪಿಸಲು ಐಸ್ಕ್ರೀಂ ಜೊತೆಯಲ್ಲಿ ಈ ಚಿನ್ನಾಭರಣಗಳನ್ನು ನುಂಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಶಿಬು ಆರೋಗ್ಯವಾಗಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡೆಸಿದ್ದಾರೆ.
-
Gold Price: ಸತತ 2ನೇ ದಿನವು ಬಂಗಾರದ ಬೆಲೆ ಭಾರೀ ಏರಿಕೆ, ದಾಖಲೆ ಬರೆದ ಬೆಳ್ಳಿ -
Gold: ಹಟ್ಟಿ ಚಿನ್ನದ ಗಣಿ ಐತಿಹಾಸಿಕ ಸಾಧನೆ, ದಾಖಲೆ ಮಟ್ಟದ ಚಿನ್ನ ಉತ್ಪಾದನೆ -
Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ ಮಾಲಿನ್ಯದ ಥಡ್ಕಾ: ರಾಜಾರಾಂ ತಲ್ಲೂರು ಬರಹ -
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ












Click it and Unblock the Notifications