ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿನ ಬಗ್ಗೆ ತನಿಖೆಗೆ ಆಗ್ರಹ

|
Google Oneindia Kannada News

ಮಂಗಳೂರು, ಮೇ 07:ಇತ್ತೀಚೆಗೆ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಸಾವಿನ ಕುರಿತು ಮತ್ತೆ ಸಂಶಯ ವ್ಯಕ್ತವಾಗಿದೆ.ದಕ್ಷ ಅಧಿಕಾರಿಯೆಂದೇ ಗುರುತಿಸಿಕೊಂಡಿದ್ದ ಮಧುಕರ್ ಶೆಟ್ಟಿ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.

ಆಪರೇಷನ್ ಬಳಿಕ ರಕ್ತಸ್ರಾವ, ಮಧುಕರ್ ಶೆಟ್ಟಿ ಆರೋಗ್ಯ ಸ್ಥಿತಿ ಗಂಭೀರಆಪರೇಷನ್ ಬಳಿಕ ರಕ್ತಸ್ರಾವ, ಮಧುಕರ್ ಶೆಟ್ಟಿ ಆರೋಗ್ಯ ಸ್ಥಿತಿ ಗಂಭೀರ

ಮಧುಕರ್ ಶೆಟ್ಟಿ ಅವರ ಸಾವಿನ ವಿಚಾರದಲ್ಲಿ ರಾಜ್ಯ ಸರಕಾರ ದೇವಿ ಶೆಟ್ಟಿ ನೇತೃತ್ವದಲ್ಲಿ ನಾಲ್ವರ ತಜ್ಞರ ತಂಡ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿ ಲೋಪ ಆಗಿದ್ದಲ್ಲಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ ಚೆಂಗಪ್ಪ ಆಗ್ರಹಿಸಿದ್ದಾರೆ.

 ಸರ್ಕಾರದ ಉಡುಗೊರೆಯನ್ನೇ ನಿರಾಕರಿಸಿದ್ದ ಪ್ರಾಮಾಣಿಕ ಮಧುಕರ್ ಶೆಟ್ಟಿ ಸರ್ಕಾರದ ಉಡುಗೊರೆಯನ್ನೇ ನಿರಾಕರಿಸಿದ್ದ ಪ್ರಾಮಾಣಿಕ ಮಧುಕರ್ ಶೆಟ್ಟಿ

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚೆಂಗಪ್ಪ, ಮಧುಕರ್ ಶೆಟ್ಟಿ ಅವರಿಗೆ ಆರಂಭದಲ್ಲಿ ಎಚ್1 ಎನ್ 1 ರೋಗವೆಂದು ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ನೆಗೆಟಿವ್ ಬಂದ ಕಾರಣ ಚಿಕಿತ್ಸೆ ಬದಲಿಸಲಾಗಿತ್ತು. ಕೊನೆಗೆ ಶ್ವಾಸಕೋಶದ ಇನ್ಫೆಕ್ಷನ್ ಎಂದು ಹೈದರಾಬಾದ್ ಕಾಂಟಿನೆಂಟಲ್ ಆಸ್ಪತ್ರೆಯ ವೈದ್ಯರು ಹೇಳಿದ್ದರು. ಕೊನೆಗೆ ಸಾವು ಯಾಕಾಯ್ತು ಎನ್ನುವುದನ್ನು ವೈದ್ಯರು ಖಚಿತಪಡಿಸಿಲ್ಲ ಎಂದು ಹೇಳಿದರು.

There should be CBI investigation on death of IPS officer Madhukar Shetty:SP Changappa

ಈ ಬಗ್ಗೆ ತನಿಖೆ ನಡೆಸಿ, ತಜ್ಞರ ಸಮಿತಿ ಖಚಿತ ಅಭಿಪ್ರಾಯ ನೀಡಬೇಕೆಂದು ಒತ್ತಾಯಿಸಿದ ಅವರು ಮಧುಕರ್ ಶೆಟ್ಟಿ ಹೈದರಾಬಾದಿನ ಪೊಲೀಸ್ ಅಕಾಡೆಮಿಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿದ್ದರು. ಆಗ ಜ್ವರದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಮಧುಕರ್ ಶೆಟ್ಟಿ 2018ರ ಡಿಸೆಂಬರ್ 28ರಂದು ಸಾವನ್ನಪ್ಪಿದ್ದರು. ಲೋಕಾಯುಕ್ತ ಎಸ್ಪಿ ಆಗಿದ್ದಾಗ ಜನಾರ್ದನ ರೆಡ್ಡಿಯ ಗಣಿ ಹಗರಣದ ಬಗ್ಗೆ ತನಿಖೆ ನಡೆಸಿ, ನಿಷ್ಪಕ್ಷಪಾತ ವರದಿ ನೀಡಿದ್ದು ಸಿಬಿಐ ಅಧಿಕಾರಿಗಳು ರೆಡ್ಡಿಯನ್ನು ಬಂಧಿಸುವಂತಾಗಿತ್ತು. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಮಧುಕರ್ ಸಾವಿನ ಬಗ್ಗೆ ಈ ಹಿಂದೆ ಕುಟುಂಬಸ್ಥರು ಮತ್ತು ಅಭಿಮಾನಿಗಳು ಸಂಶಯ ವ್ಯಕ್ತಪಡಿಸಿದ್ದರು ಎಂದರು.

English summary
In Mangaluru, District president of Bar association SP Changappa urged that there should be CBI investigation on death of IPS officer Madhuakar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X