ಸಕಲೇಶಪುರ ಕಾಡ್ಗಿಚ್ಚು ನಂದಿಸುವ ಹೊಣೆ ರೈಲ್ವೆ ಇಲಾಖೆಗೆ

ಕಾಡ್ಗಿಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು-ವಿಜಯಪುರ ನಡುವೆ ಸಂಚರಿಸುತ್ತಿದ್ದ ರೈಲನ್ನು ಶನಿವಾರ ಸುಬ್ರಹ್ಮಣ್ಯ ರಸ್ತೆಯಲ್ಲಿ ಕೆಲ ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು.

ಮಂಗಳೂರು, ಮಾರ್ಚ್‌ 13: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರಸ್ತೆ ಮತ್ತು ಸಕಲೇಶಪುರ ನಡುವೆ ವರದಿಯಾಗಿರುವ ಕಾಡ್ಗಿಚ್ಚಿನ ಮೇಲೆ ನಿಗಾ ವಹಿಸಲು ಮತ್ತು ನಂದಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಕಾಡ್ಗಿಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು-ವಿಜಯಪುರ ನಡುವೆ ಸಂಚರಿಸುತ್ತಿದ್ದ ರೈಲನ್ನು ಶನಿವಾರ ಸುಬ್ರಹ್ಮಣ್ಯ ರಸ್ತೆಯಲ್ಲಿ ಕೆಲ ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಕಳೆದ ಮೂರು ದಿನಗಳಲ್ಲಿ ಆರು ಕಾಡ್ಗಿಚ್ಚಿನ ಘಟನೆಗಳು ಇಲ್ಲಿ ವರದಿಯಾಗಿವೆ. ಹಳಿ ಬಳಿ ಬೆಂಕಿ ಕಾಣಿಸಿಕೊಂಡಾಗ ರೈಲುಗಳ ಚಲನೆಯನ್ನು ನಿಲ್ಲಿಸಲಾಗಿತ್ತು. ಬೆಂಕಿಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರೈಲ್ವೆ ಸಿಬ್ಬಂದಿಯನ್ನು ನಿಯೋಜಿಸಿಸಲಾಗಿದೆ.

The Railway Department is responsible for extinguishing Sakaleshpur forest fire

ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆಯವರೆಗಿನ ಎಲ್ಲಾ ಸೂಕ್ಷ್ಮ ಪ್ರದೇಶಗಳಿಗೆ ಕಾವಲುಗಾರರನ್ನು ನಿಯೋಜಿಸಲಾಗಿದೆ. ಟ್ರ್ಯಾಕ್ ಬಳಿ ಬೆಂಕಿ ಕಾಣಿಸಿಕೊಂಡಾಗ ಹತ್ತಿರದ ಸ್ಟೇಷನ್ ಮಾಸ್ಟರ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಬೆಂಕಿಯನ್ನು ನಂದಿಸಲು ತಕ್ಷಣವೇ 10,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಹೊಂದಿರುವ ಬಿಎಫ್‌ಆರ್ ವ್ಯಾಗನ್ ಸ್ಥಳಕ್ಕೆ ತೆರಳುತ್ತದೆ.

ಮಾರ್ಚ್ 8ರಂದು ರೈಲ್ವೇ ಅಧಿಕಾರಿಗಳೊಂದಿಗೆ ಸಿರಿಬಾಗಿಲು ಮತ್ತು ಯಡೆಕುಮೇರಿ ಸಮೀಪದ ಅರಣ್ಯ ಪ್ರದೇಶಗಳನ್ನು ಪರಿಶೀಲಿಸಿದಾಗ ರೈಲ್ವೇ ಅಧಿಕಾರಿಗಳು ಸಿರಿಬಾಗಿಲು ಕಾಡ್ಗಿಚ್ಚನ್ನು ಪತ್ತೆಹಚ್ಚಿದ್ದು, ಇದು ರೈಲುಗಳ ಸಂಚಾರಕ್ಕೆ ಪರಿಣಾಮ ಬೀರುವ ಸಾಧ್ಯತೆಯಿದೆ. ತಪಾಸಣೆಯ ಸಮಯದಲ್ಲಿ ಬೆಂಕಿಯನ್ನು ನಂದಿಸಲು ಜೆಟ್ ಪೈಪ್‌ಗಳನ್ನು ಬಳಸಲು ನಾನು ಸಲಹೆ ನೀಡಿದ್ದೇನೆ ಎಂದು ಡಿಸಿಎಫ್ ಮಂಗಳೂರು ವಿಭಾಗದ ಡಾ.ದಿನೇಶ್ ಕುಮಾರ್ ವೈ.ಕೆ ತಿಳಿಸಿದ್ದಾರೆ.

ರೈಲ್ವೇ ಸಿಬ್ಬಂದಿ ಕಾಡ್ಗಿಚ್ಚಿನ ಮೇಲೆ ನಿಗಾ ಇಡುತ್ತಿದ್ದು, ಬೆಂಕಿ ಅವಘಡ ಸಂಭವಿಸಿದರೆ ಹಳಿ ಉದ್ದಕ್ಕೂ ಹರಡದಂತೆ ನೀರು ಸಿಂಪಡಿಸುತ್ತಾರೆ. ಜಿಲ್ಲೆಯ ಇತರ ಭಾಗಗಳಲ್ಲಿ ಕಾಡ್ಗಿಚ್ಚು ನಿಯಂತ್ರಣದಲ್ಲಿದೆ ಎಂದು ಡಿಸಿಎಫ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+