ಧರ್ಮಸ್ಥಳದಲ್ಲಿ ಕುಸಿದು ಬಿತ್ತು ಪಂಚ ಮಹಾವೈಭವದ ಮುಖ್ಯ ವೇದಿಕೆ
Recommended Video

ಧರ್ಮಸ್ಥಳದಲ್ಲಿ ಕುಸಿದು ಬಿತ್ತು ಪಂಚ ಮಹಾವೈಭವದ ಮುಖ್ಯ ವೇದಿಕೆ
ಮಂಗಳೂರು, ಫೆಬ್ರವರಿ 14:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪಂಚ ಮಹಾವೈಭವದ ಮುಖ್ಯ ವೇದಿಕೆ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಅನಾಹುತ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಪಂಚ ಮಹಾವೈಭವದ ಮುಖ್ಯವೇದಿಕೆ ಇಂದು ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಊಟದ ಸಮಯವಾಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಇಂದು ಬೆಳಗ್ಗೆ ಪಂಚ ಮಹಾವೈಭವದ ಮುಖ್ಯವೇದಿಕೆಯಲ್ಲಿ ಬಾಹುಬಲಿಯ ಆಸ್ಥಾನಕ್ಕೆ ಶರಣಗಾತಿಯ ಸನ್ನಿವೇಶ ನಡೆದಿತ್ತು. ನಂತರ ಸಭಾ ಕಾರ್ಯಕ್ರಮ 12.30ರ ಸುಮಾರಿಗೆ ಮುಗಿದಿದೆ. ಈ ಸಂದರ್ಭದಲ್ಲಿ ವಿಶಾಲವಾದ ವೇದಿಕೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಕಾರ್ಯಕ್ರಮ ಮುಗಿದ ನಂತರ ಜನರು ಊಟಕ್ಕೆ ತೆರಳಿದ ಸಂದರ್ಭದಲ್ಲಿ ಈ ಮುಖ್ಯ ವೇದಿಕೆ ಸಂಪೂರ್ಣ ಕುಸಿದಿದೆ.

ವೇದಿಕೆ ಕುಸಿದಿದ್ದರಿಂದ ಪಂಚ ಮಹಾವೈಭವದ ಸೆಟ್ ಸಂಪೂರ್ಣ ಹಾಳಾಗಿದ್ದು, ಶೇ.80 ರಷ್ಟು ಹಾನಿಯಾಗಿದೆ ಎಂದು ಹೇಳಲಾಗಿದೆ. ವೇದಿಕೆ ಕುಸಿತದಿಂದ ಗಾಯಗಳಾದ ಬಗ್ಗೆ ಈವರೆಗೆ ಯಾವುದೇ ವರದಿಯಾಗಿಲ್ಲ.












Click it and Unblock the Notifications