'ದೇವಿ' ಪಾತ್ರ ಖ್ಯಾತಿಯ ಯಕ್ಷಪಟು ರಮೇಶ್ ವಿಧಿವಶ
ಮಂಗಳೂರು, ಜ.13: ತೆಂಕುತಿಟ್ಟಿನ ಯಕ್ಷಗಾನ ರಂಗ ಉದಯೋನ್ಮುಖ ಯಕ್ಷಗಾನ ಕಲಾವಿದನೋರ್ವನನ್ನು ಕಳೆದುಕೊಂಡಿದೆ. ಖ್ಯಾತ ಯಕ್ಷಗಾನ ಕಲಾವಿದ ಬೆಳಾಲು ರಮೇಶ್ ಗೌಡ ನಿಧನರಾಗಿದ್ದಾರೆ.
ಯಕ್ಷಗಾನದಲ್ಲಿ ಪ್ರಮುಖವಾಗಿ ಸ್ತ್ರೀವೇಷಗಳನ್ನು ನಿರ್ವಹಿಸುತ್ತಿದ್ದ ರಮೇಶ್ ಅವರ ದೇವಿ ಪಾತ್ರ ವಿಶ್ವವಿಖ್ಯಾತಿಯನ್ನು ಗಳಿಸಿತ್ತು. ದೇವಿಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ದೇವಿಯ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ರಮೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ವೇಳೆಗೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ರಂಗದ ಪ್ರಮುಖ ಕಲಾವಿದರು, ಹಿತೈಷಿಗಳು ಕಂಬನಿ ಮಿಡಿದಿದ್ದಾರೆ
ರಮೇಶ್ ಗೌಡ ಅವರ ನಟನೆಯ ವಿಡಿಯೋ ಇಲ್ಲಿದೆ:
ಮಾಯ ಪೂತನಿ ಪಾತ್ರದಲ್ಲಿ ರಮೇಶ್ ಗೌಡ
ಊರ್ವಶಿ ಪಾತ್ರದಲ್ಲಿ ರಮೇಶ್ ಗೌಡ ಬೆಳಾಲು












Click it and Unblock the Notifications