'ಸೀಲ್ ಮಾಡಿದ ಕವರ್‌ನಲ್ಲಿ ಏನಿದೆ ಹೇಳಿ'- ಜ್ಯೋತಿಷಿಗಳಿಗೆ ವಿಚಾರವಾದಿ ನರೇಂದ್ರ ನಾಯಕ್ ಸವಾಲು
ಮಂಗಳೂರು, ಮೇ 30: ನಗರದ ಹೊರವಲಯದಲ್ಲಿರುವ ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.. ಮಳಲಿ ತಾಂಬೂಲ ಪ್ರಶ್ನೆಗೆ ರಾಜಕೀಯ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದರೆ, ಇತ್ತ ತಾಂಬೂಲ ಪ್ರಶ್ನೆ ಅಂದರೇನು ಅಂತಾ ತಿಳಿಯದ ಜನರು ತಾಂಬೂಲ ಪ್ರಶ್ನೆಯ ಬಗ್ಗೆ ಉತ್ಸುಕರಾಗಿದ್ದಾರೆ. ಇನ್ನೂ ಹಲವು ಮಂದಿ ಈ ತಾಂಬೂಲ ಪ್ರಶ್ನೆ ಎಂಬುವುದು ಸುಳ್ಳು ಅಂತಾ ವಾದಿಸುತ್ತಿದ್ದಾರೆ.
ಮಂಗಳೂರಿನ ವಿಚಾರವಾದಿ ಫ್ರೊ. ನರೇಂದ್ರ ನಾಯಕ್ ಕೂಡಾ ಜ್ಯೋತಿಷ್ಯಕ್ಕೆ ಸವಾಲೊಡ್ಡಿದ್ದಾರೆ. ತಾವು ಸೀಲ್ ಮಾಡಿರುವ ಕವರ್ ನಲ್ಲಿ ಏನಿದೆ ಎಂದು ಹೇಳಿದ 50 ಮಂದಿಗೆ ತಲಾ 1ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಜೋತಿಷ್ಯಕ್ಕೆ ಸವಾಲ ಹಾಕಿದ ವಿಚಾರವಾದಿ
ಮಳಲಿಯಲ್ಲಿನ ಮಂದಿರ - ಮಸೀದಿ ವಿವಾದದ ತಾಂಬೂಲ ಪ್ರಶ್ನೆಯು ಹೊಸ ಹೊಸ ಆಯಾಮವನ್ನು ಹುಟ್ಟುಹಾಕುತ್ತಿದೆ. ಇದೀಗ ಮಂಗಳೂರಿನ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಜೋತಿಷ್ಯಕ್ಕೆ ಸವಾಲೆಸೆದಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ 11.33 ಗಂಟೆಗೆ ಏಳು ಲಕೋಟೆಗಳನ್ನು ಸೀಲ್ ಮಾಡಿ ಇಟ್ಟಿದ್ದಾರೆ. ಅದರಲ್ಲಿ ಕರೆನ್ಸಿ, ಕಾಗದಗಳನ್ನು ಇಟ್ಟಿದ್ದಾರೆ. ಸವಾಲು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.

ಆ ಕವರ್ ನೊಳಗಡೆ ಕರೆನ್ಸಿ ಇದೆಯೆಂದಾದರೆ ಅದು ಯಾವ ದೇಶದ್ದು, ಸೀರಿಯಲ್ ನಂಬರ್, ಎಷ್ಟು ರೂ. ನೋಟು ಹೀಗೆ ಖಚಿತವಾಗಿ ಹೇಳಬೇಕು. ಅದೇ ರೀತಿ ಕಾಗದವಾದಲ್ಲಿ ಅದು ಖಾಲಿ ಕಾಗದವೇ ಅಥವಾ ಏನು ಬರೆದಿದೆ ಎಂದು ಹೇಳಬೇಕು. ಈ ಸವಾಲಿಗೆ ಉತ್ತರ ನೀಡಲು ಮೇ 30ರ ಮಧ್ಯರಾತ್ರಿಯವರೆಗೆ ಅವಕಾಶವಿದೆ. ಆ ಬಳಿಕ ಬರುವ ಉತ್ತರವನ್ನು ಮಾನ್ಯತೆ ಆಗೋದಿಲ್ಲ. ಸವಾಲೆಸೆದ ಲಕೋಟೆಯನ್ನು ಜೂನ್ ಒಂದರಂದು ಬೆಳಗ್ಗೆ 10.30ಕ್ಕೆ ಲೇಡಿಹಿಲ್ ನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಎಲ್ಲರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಸವಾಲು ಸ್ವೀಕರಿಸುವವರು ಉತ್ತರವನ್ನು ನರೇಂದ್ರ ನಾಯಕ್ ಅವರ ವಾಟ್ಸ್ಆ್ಯಪ್ 9448216343 ಹಾಗೂ ಇಮೈಲ್ [email protected] ಗೆ ಕಳುಹಿಸಬಹುದು.

ಒಟ್ಟಿನಲ್ಲಿ ಮಳಲಿ ದರ್ಗಾ ವಿವಾದದ ವಿಚಾರವಾಗಿ ಹಿಂದೂ ಸಂಘಟನೆಗಳು ಮತ್ತು ಎಸ್ ಡಿಪಿಐ ಮತ್ತು ಬಿಜೆಪಿ ನಡುವೆ ವಾಗ್ವಾದ ತಾರಕಕ್ಕೇರುತ್ತಿದೆ. ಇನ್ನೊಂದೆಡೆ ಜೋತಿಷ್ಯ ಹಾಗೂ ವೈಚಾರಿಕತೆಯ ನಡುವಿನ ಸವಾಲು ಜವಾಬಿನಲ್ಲಿ ಯಾವುದು ಗೆಲುವು ಸಾಧಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
(ಒನ್ಇಂಡಿಯಾ ಸುದ್ದಿ)
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications