ಕತ್ತೆಗೊಂದು ಕಾಲ; ಕತ್ತೆ ಹಾಲಿಗೆ ಭಾರೀ ಡಿಮಾಂಡ್!
ಮಂಗಳೂರು, ಜೂ 9: 'ಅತ್ತೆ ಗೊಂದು ಕಾಲ..ಕತ್ತೆಗೊಂದು ಕಾಲ' ಎನ್ನುವುದು ಗಾದೆ. ಈಗ ಕತ್ತೆಗೂ ಕಾಲ ಬಂದಿದೆ. ಎಲ್ಲರ ಬೈಗುಳ ಕೇಳುತ್ತಿದ್ದ ಕತ್ತೆಗಳಿಗೆ ಫಾರಂ ಆರಂಭಿಸಲಾಗಿದೆ. ಕತ್ತೆ ಹಾಲಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಕತ್ತೆಯ ಹಾಲು ಮತ್ತು ಕತ್ತೆಯ ಮೂತ್ರ ಹಲವು ರೋಗಗಳಿಗೆ ರಾಮಬಾಣವಾಗಿದ್ದು, ಮಂಗಳೂರಿನಲ್ಲಿ ರಾಜ್ಯದ ಮೊದಲ ಕತ್ತೆಯ ಸಾಕಾಣಿಕಾ ಕೇಂದ್ರ ಆರಂಭವಾಗಿದೆ.
ಮಂಗಳೂರು ಹೊರವಲಯದ ಕೊಣಾಜೆ ಬಳಿಯ ಇರಾದಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಕತ್ತೆ ಸಾಕಾಣಿಕಾ ಕೇಂದ್ರ ಆರಂಭವಾಗಿದೆ. ದೇಶದಲ್ಲಿ ಎರಡನೇ ಕತ್ತೆ ಫಾರ್ಮ್ ಇದಾಗಿದ್ದು, ಅಳಿವಿನಂಚಿನಲ್ಲಿರುವ ಕತ್ತೆಗಳನ್ನು ಮತ್ತೆ ಬದುಕಿಸಬೇಕು ಮತ್ತು ಅದರ ಭರಪೂರ ಪ್ರಯೋಜನಗಳನ್ನು ಜನರು ತಿಳಿದುಕೊಳ್ಳಬೇಕು ಅನ್ನುವ ಉದ್ದೇಶದಿಂದ ಕೃಷಿ ವಿವಿಯ ಡಾ. ಶ್ರೀನಿವಾಸ ಗೌಡ ಗರಡಿಯಲ್ಲಿ ಐದು ಮಂದಿ ಉತ್ಸಾಹಿ ಐಟಿ ಉದ್ಯೋಗಿಗಳು ಕೊಣಾಜೆ ಬಳಿಯ ಇರಾದಲ್ಲಿ ಕತ್ತೆ ಸಾಕಾಣಿಕಾ ಕೇಂದ್ರ ಸಿದ್ಧಗೊಳಿಸಿದ್ದಾರೆ.

ಕೃಷಿ ಕಾರ್ಯಕ್ಕೆ ಧುಮುಕಿದ ಶ್ರೀನಿವಾಸ ಗೌಡ
ಕೊರೋನಾ ಕಾಲದಲ್ಲಿ ತನ್ನ ಐಟಿ ಉದ್ಯೋಗಕ್ಕೆ ಕತ್ತರಿ ಬಿದ್ದಾಗ ಬೆಂಗಳೂರಿನ ಜೆಪಿ ನಗರದಲ್ಲಿ ನೆಲೆಸಿದ್ದ ಶ್ರೀನಿವಾಸ ಗೌಡರು ತಡ ಮಾಡಲಿಲ್ಲ. ಏನಾದರು ಕೃಷಿ ಮಾಡಬೇಕು ಎಂಬ ಆಸಕ್ತಿ, ಯೋಚನೆ ಹೊಂದಿದ್ದ ಗೌಡರು, ತನ್ನ ಐವರು ಸ್ನೇಹಿತರ ಜೊತೆ ಸೇರಿ ನೇರವಾಗಿ ಕೃಷಿ ಕಾರ್ಯಕ್ಕೆ ಧುಮುಕಿದ್ದರು. ಸ್ನೇಹಿತರ ಸಲಹೆಯಂತೆ ಕೊಣಾಜೆ ಬಳಿಯ ಇರಾದಲ್ಲಿ 2.35 ಎಕರೆ ಜಾಗವನ್ನು ಲೀಸ್ ಪಡೆದು ಕುರಿ ಮತ್ತು ಆಡು ಸಾಕಣೆ ಆರಂಭಿಸಿದ್ದರು. ಎರಡು ವರ್ಷಗಳ ದುಡಿಮೆಯ ಬಳಿಕ ಇದೀಗ ಅಪರೂಪದ ಕೆಲಸಕ್ಕೆ ಕೈಹಾಕಿದ್ದಾರೆ.
ಆಕಳು, ಮೇಕೆ ಮತ್ತು ಎಮ್ಮೆಯ ಹಾಲು ಸೇರಿದಂತೆ ಕೆಲವು ಸಾರಿ ಒಂಟೆಯ ಹಾಲು ಸಿಗುವುದು ಸಾಮಾನ್ಯ ಮಾತಾಗಿದೆ. ಆದರೆ ಮಂಗಳೂರಿನಲ್ಲಿ ಇದೀಗ ಕತ್ತೆಯ ಹಾಲು ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತಿದೆ. ಹಾಲಿನ ಮಾರಾಟದ ಜೊತೆಗೆ ಅದರಲ್ಲಿ ಅಡಗಿರುವ ಔಷಧೀಯ ಗುಣಗಳು, ಪೌಷ್ಠಿಕಾಂಶ ಮತ್ತು ಸೌಂದರ್ಯ ವರ್ಧಕದ ಬಗ್ಗೆ ಅರಿವು ಮೂಡಿಸುವ ಯತ್ನ ನಡೆಸಲಾಗುತ್ತಿದೆ ಎಂದು ಕತ್ತೆ ಮಾಲೀಕ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಮಧುಮೇಹ, ರಕ್ತಹೀನತೆ, ಅಲರ್ಜಿ ಇತ್ಯಾದಿ ಚರ್ಮ ರೋಗಗಳಿಗೂ ರಾಮಬಾಣ
ಗುಜರಾತ್ ಮತ್ತು ಆಂಧ್ರಪ್ರದೇಶದಿಂದ 20 ಕತ್ತೆಗಳನ್ನು ತಂದು ಅದೇ ಎರಡೂವರೆ ಎಕರೆ ಜಾಗದಲ್ಲಿ ಪ್ರತ್ಯೇಕ ಕೊಟ್ಟಿಗೆ ಮಾಡಿದ್ದಾರೆ. ಅವರು ಹೇಳುವ ಪ್ರಕಾರ, ಕತ್ತೆ ಹಾಲಿನಲ್ಲಿ ಅತಿ ಹೆಚ್ಚು ಪ್ರೋಟೀನ್ ಇದ್ದು, ಮಕ್ಕಳಲ್ಲಿ ಬುದ್ಧಿಶಕ್ತಿ ಬೆಳೆಯಲು, ಅಪೌಷ್ಟಿಕತೆಯಿಂದ ನರಳುವ ಮಕ್ಕಳಿಗೆ ಇದನ್ನು ಕುಡಿದರೆ ಅತ್ಯಂತ ಸಹಕಾರಿಯಂತೆ. ಮಧುಮೇಹ, ರಕ್ತಹೀನತೆ, ಅಲರ್ಜಿ ಇತ್ಯಾದಿ ಚರ್ಮ ರೋಗಗಳಿಗೂ ರಾಮಬಾಣವಂತೆ. ಹಾಲಿನಲ್ಲಿ ಅತಿ ಹೆಚ್ಚು ರೋಗ ನಿರೋಧಕ ಗುಣಗಳಿರುವುದರಿಂದ ಇದನ್ನು ವಾರಕ್ಕೊಮ್ಮೆ ಹತ್ತು ಎಂ.ಎಲ್ ನಷ್ಟು ಕುಡಿಯಲು ಬಳಸಿದರೆ, ಮೂರು ತಿಂಗಳಲ್ಲಿ ದೇಹದಲ್ಲಿರುವ ಸಾಮಾನ್ಯ ರೋಗಗಳು ವಾಸಿಯಾಗುವುದಂತೆ.
ಸೋಮಾರಿಗಳನ್ನು ಕತ್ತೆಗಳಿಗೆ ಹೋಲಿಕೆ ಮಾಡುವುದು ಸಾಮಾನ್ಯ. ಆದರೆ, ಕತ್ತೆಗಳ ಪ್ರಯೋಜನಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಈ ಹಿಂದೆ ಭಾರದ ವಸ್ತುಗಳು, ಬಟ್ಟೆಗಳ ಹೊರಲು ಮಾತ್ರವೇ ಕತ್ತೆಗಳನ್ನು ಬಳಕೆ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಟೆಕ್ನಾಲಜಿ, ವಾಷಿಂಗ್ ಮಷಿನ್ ಗಳು ಬಂದ ಹಿನ್ನೆಲೆಯಲ್ಲಿ ಕತ್ತೆಗಳಿಗೆ ಬೆಲೆಯಿಲ್ಲದಂತಾಗಿತ್ತು. ಇದೀಗ ಮತ್ತೆ ಕತ್ತೆಗಳಿಗೂ ಉತ್ತಮ ಕಾಲ ಬಂದಿದೆ.

ಪ್ಯಾಕೆಟಿಗೆ 150 ರೂಪಾಯಿ ದರ ನಿಗದಿ
ಭರಪೂರ ಪ್ರಯೋಜನೆಗಳನ್ನು ಜನರು ತಿಳ್ಕೋಬೇಕು ಅನ್ನುವ ಉದ್ದೇಶದಿಂದ ಕೃಷಿ ವಿವಿಯ ಡಾ.ಶ್ರೀನಿವಾಸ ಗೌಡ ಅವರ ಗರಡಿಯಲ್ಲಿ ಐದು ಮಂದಿ ಉತ್ಸಾಹಿ ಐಟಿ ಉದ್ಯೋಗಿಗಳು ಕೊಣಾಜೆ ಬಳಿಯ ಇರಾದಲ್ಲಿ ಕತ್ತೆ ಫಾರ್ಮ್ ರೆಡಿ ಮಾಡಿದ್ದಾರೆ.
ಕತ್ತೆ ಹಾಲು, ಕತ್ತೆ ಹಾಲು ಮನುಷ್ಯನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತಿದ್ದು, ಕತ್ತೆಯ ಹಾಲಿಗೆ ದೇಶ ಹಾಗೂ ವಿದೇಶಗಳಿಂದ ಬೇಡಿಕೆಗಳು ಹೆಚ್ಚಾಗತೊಡಗಿವೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡಿರುವ ಡಾ.ಶ್ರೀನಿವಾಸ ಗೌಡರ ಮಾರ್ಗದರ್ಶನದಲ್ಲಿ ಹಾಲನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡಿ ಮಂಗಳೂರಿನಲ್ಲಿ ಸ್ಥಳೀಯವಾಗಿ ಮಾರಲು ರೆಡಿ ಮಾಡುತ್ತಿದ್ದಾರೆ. ಅಂದಹಾಗೆ, ವಿದೇಶಿ ಮಾರುಕಟ್ಟೆಯಲ್ಲಿ ಕತ್ತೆ ಹಾಲಿಗೆ 5ರಿಂದ 7 ಸಾವಿರ ರೂ. ದರವಿದ್ದು, ಇಲ್ಲಿನ ಐಸಿರಿ ಫಾರ್ಮ್ ನಿಂದ ಸಣ್ಣ ಪ್ಯಾಕೆಟ್ ರೂಪದಲ್ಲಿ ಕೊಡಲಾಗುತ್ತಿದೆ. 30 ಎಂ.ಎಲ್, 50 ಎಂ.ಎಲ್, 100, 200 ಎಂಎಲ್ ಹೀಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಪ್ಯಾಕೆಟ್ ಮಾಡಲಾಗಿದೆ. 30 ಎಂ.ಎಲ್. ಪ್ಯಾಕೆಟಿಗೆ 150 ರೂಪಾಯಿ ದರ ವಿಧಿಸಲಾಗಿದೆ.

ಕತ್ತೆ ಮಾಂಸಕ್ಕಾಗಿ ಕಳ್ಳಸಾಗಣೆಗೆ ಕ್ರಮ ಅಗತ್ಯ
ಶ್ರೀನಿವಾಸ ಗೌಡರ ಕತ್ತೆ ಸಾಕಾಣೆ ಕೇಂದ್ರ ಭಾರತ ದೇಶದ ಎರಡನೇಯ ಕೇಂದ್ರವಾಗಿದ್ದು, ಮೊದಲನೇಯದ್ದು ಕೇರಳದ ಎರ್ನಾಕುಲಂನಲ್ಲಿದೆ. ಕತ್ತೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಯಾಗಿದ್ದು, ಮುಂದಿನ ಜನಾಂಗ ನೋಡಲೂ ಸಿಗುವುದು ಅಪರೂಪ. ಅದನ್ನು ಉಳಿಸುವ ಪ್ರಯತ್ನ ಮಾಡುತ್ತೇವೆ. 2012ರ ಗಣಿಯು ಪ್ರಕಾರ ದೇಶದಲ್ಲಿ ಕತ್ತೆ ಸಂತತಿ ಮೂರು ಲಕ್ಷಗಳಷ್ಟು ಇದ್ದವು. ಆದರೆ 2019 ರ ಗಣತಿಯ ಪ್ರಕಾರ ಆ ಸಂಖ್ಯೆ 1.26ಲಕ್ಷಕ್ಕೆ ಇಳಿಕೆಯಾಗಿದೆ. ಕತ್ತೆ ಮಾಂಸಕ್ಕಾಗಿ ಕಳ್ಳಸಾಗಣೆಯಾಗುತ್ತಿದೆ.ಇದನ್ನು ಸರ್ಕಾರ ತಡೆಯಬೇಕು ಅಂತಾ ಶ್ರೀನಿವಾಸ ಗೌಡ ಹೇಳಿದ್ದಾರೆ.
ಕತ್ತೆಗಳಿಗೂ ಜೀವನವಿದೆ. ಕತ್ತೆ ಸಾಕಾಣಿಕೆಯಿಂದ ಜನರಿಗೆ ಕತ್ತೆ ಹಾಲು ವಿತರಣೆ ಮಾಡುವ ಉದ್ದೇಶವನನ್ನು ಹೊಂದಿದ್ದೇವೆ. ಕತ್ತೆ ಹಾಲಿನಲ್ಲಿ ಔಷಧೀಯ ಗುಣಗಳಿವೆ, ಸೌಂದರ್ಯವರ್ಧಕ ವಸ್ತುಗಳಿಗೂ ಕತ್ತೆ ಹಾಲನ್ನು ಬಳಕೆ ಮಾಡಲಾಗುತ್ತಿದ್ದು, ಈಗಾಗಲೇ ಇದಕ್ಕಾಗಿ ರೂ ಲಕ್ಷದಷ್ಟು ಆರ್ಡರ್ ಗಳು ಬಂದಿದೆ ಎಂದು ಶ್ರೀನಿವಾಸ್ ಗೌಡ ಹೇಳಿದ್ದಾರೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications