ಪುತ್ತೂರು: ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟ ಕಾರು ಅಪಘಾತ

ಮಂಗಳೂರು, ಜುಲೈ 31 : ಪುತ್ತೂರು ತಾಲೂಕಿನ ವಿಟ್ಲಾ ಸಮೀಪ ದೆಹಲಿ ನೋಂದಾಣಿ ಕಾರೊಂದು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಕಳೆದ ತಡರಾತ್ರಿ ವಿಟ್ಲ ವೀರಕಂಬ -ಮಜ್ಜೋಣಿ -ಕೋಡಪದವು ಒಳ ರಸ್ತೆಯಲ್ಲಿ ಈ ಅಫಘಾತ ಸಂಭವಿಸಿದೆ. ಕಾರು ಅಪಘಾತಕ್ಕೀಡಾಗುತ್ತಿದ್ದಂತೆಯೇ ಕಾರಿನಲ್ಲಿದ್ದವರು ಕಾರನ್ನು ಬಿಟ್ಟು ಪರಾರಿಯಾಗಿದ್ದು, ಇದೀಗ ಈ ಘಟನೆ ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ

Suspicious Delhi registration car found at Vitla

ಕಾರು ದೆಹಲಿಯಲ್ಲಿ ನೋಂದಾಣಿಯಾಗಿದ್ದು, ಜಸ್ ಜೀತ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ. ಆದರೆ, ದೆಹಲಿ ಮೂಲದ ಕಾರು ವಿಟ್ಲದಲ್ಲಿ ಸಂಚರಿಸುತ್ತಿದ್ದುದು ಯಾಕೆ ? ಕಾರಿನಲ್ಲಿದ್ದವರು ಯಾರು ? ಎಂಬ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೇರಳ ರಾಜ್ಯದ ಗಡಿಭಾಗವಾದ ವಿಟ್ಲ ಪರಿಸರದಲ್ಲಿ ಸಮಾಜ ಘಾತಕ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿತ್ತೇ ಎಂಬ ಸಂಶಯವನ್ನು ಹುಟ್ಟು ಹಾಕಿದೆ.

ಈ ನಿಟ್ಟಿನಲ್ಲಿ ಸ್ಥಳೀಯ ಪೋಲಿಸರು, ಗುಪ್ತಚಾರ ಇಲಾಖೆ ತನಿಖೆ ಆರಂಭಿಸಿದ್ದಾರೆ. ಕಾರಿನ ಅಸಲಿ ವಾರಸುದಾರನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+