ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿಗಳ ದಾಳಿಗೆ ಹತ್ತು ಬಾರ್ಕಿಂಗ್ ಡೀರ್ ಸಾವು
ಮಂಗಳೂರು, ಜೂನ್ 26: ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 10 ಬಾರ್ಕಿಂಗ್ ಡೀರ್ (ಕಾಡುಕುರಿ) ಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
Recommended Video
ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಉದ್ಯಾನ ವನದ ಬೇಲಿ ಹಾರಿ ಕಾಡುಕುರಿ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ. ಈ ದಾಳಿಯಿಂದ ಹತ್ತು ಕಾಡುಕುರಿಗಳು ಸಾವನ್ನಪ್ಪಿ, 5ಕ್ಕೂ ಹೆಚ್ಚಿನ ಕಾಡುಕುರಿಗಳು ಗಂಭೀರವಾಗಿ ಗಾಯಗೊಂಡಿವೆ.
ಕೆಲವು ದಿನಗಳ ಹಿಂದೆ ಸುರಿದ ಗಾಳಿ ಮಳೆಯಿಂದಾಗಿ ನಿಸರ್ಗ ಧಾಮದ ಆವರಣದ ಗೋಡೆ ಕುಸಿದಿದೆ. ಈ ಗೋಡೆಗಳನ್ನು ಹಾರಿ ನಾಯಿಗಳು ದಾಳಿ ನಡೆಸಿವೆ. ಆದರೆ ನಿಸರ್ಗ ಧಾಮದಲ್ಲೇ ಪ್ರಾಣಿಗಳಿಗೆ ರಕ್ಷಣೆ ಇಲ್ಲವಾದರೆ ಹೇಗೆ? ಪಿಲಿಕುಳ ದಕ್ಷಿಣ ಜಿಲ್ಲೆಯಲ್ಲೇ ಏಕೈಕ ನಿಸರ್ಗಧಾಮವಾಗಿದೆ. ಇಲ್ಲೇ ಜಿಂಕೆಗಳ ಮೇಲೆ ದಾಳಿ ನಡೆದಿದ್ದು, ಇದರ ರಕ್ಷಣೆ ಕಡೆಗೆ ನಿಗಾವಹಿಸದ್ದಕ್ಕೆ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

"ಇಲ್ಲಿ ನಲವತ್ತು ಕಾಡುಕುರಿಗಳು ಇದ್ದವು. ಹತ್ತು ಕುರಿಗಳು ಸಾವನ್ನಪ್ಪಿವೆ. ಗಾಯಗೊಂಡಿರುವ ಕಾಡುಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಈ ಹಿಂದೆಯೇ ಬಾರ್ಕಿಂಗ್ ಡೀರ್ ಗಳನ್ನು ಕಾಡಿಗೆ ಬಿಡಲು ಚಿಂತನೆ ನಡೆಸಿದ್ದೆವು. ಆದರೆ ನಿನ್ನೆ ರಾತ್ರಿ ಬೀದಿನಾಯಿಗಳ ದಾಳಿಗೆ ಜಿಂಕೆಗಳು ಬಲಿಯಾಗಿವೆ" ಎಂದು ಪ್ರತಿಕ್ರಿಯಿಸಿದ್ದಾರೆ ಪಿಲಿಕುಳ ಜೈವಿಕ ಉದ್ಯಾನ ವನದ ನಿರ್ದೇಶಕ ಜಯಪ್ರಕಾಶ್.












Click it and Unblock the Notifications