ಮಗುವಿನ ಫೋಟೋ ಮುಂದಿಟ್ಟು ಕಿರುಕುಳ: ಲೋನ್ ಆ್ಯಪ್ ಕಾಟಕ್ಕೆ ರಾಜ್ಯ ಮಟ್ಟದ ಕಬ್ಬಡಿ ಆಟಗಾರ ಬಲಿ
ಮಂಗಳೂರು, ಸೆಪ್ಟೆಂಬರ್ 01: ಲೋನ್ ಆ್ಯಪ್ ಕಿರುಕುಳಕ್ಕೆ ರಾಜ್ಯ ಮಟ್ಟದ ಪ್ರತಿಭಾನ್ವಿತ ಕಬ್ಬಡಿ ಆಟಗಾರ ಬಲಿಯಾಗಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಲೋನ್ ಆ್ಯಪ್ ಸಿಬ್ಬಂದಿಯ ನಿರಂತರ ಕಿರುಕುಳ ಮತ್ತು ಬೆದರಿಕೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ನಿವಾಸಿ ಸ್ವರಾಜ್(24) ಸಾವಿಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.
ಸ್ವರಾಜ್ ಲೋನ್ ಆ್ಯಪ್ ನಿಂದ ಮೂವತ್ತು ಸಾವಿರ ರೂಪಾಯಿ ಲೋನ್ ಪಡೆದುಕೊಂಡಿದ್ದು, ಆಗಸ್ಟ್ 30ರಂದು ಮೂವತ್ತು ಸಾವಿರ ರೂಪಾಯಿ ಮರು ಪಾವತಿ ಮಾಡಿದ್ದರು. ಆದರೆ ಮತ್ತೂ ಲೋನ್ ಹಣ ಬಾಕಿ ಎಂದು ಸಿಬ್ಬಂದಿ ನಿರಂತರ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ.

ಸ್ವರಾಜದ ವಾಟ್ಸಾಪ್‌ನಲ್ಲಿ ಅಕ್ಕನ ಮಗಳ ಫೋಟೊ ಹಾಕಿದ್ದು, ಈ ಫೋಟೋವನ್ನು 'Baby for sale' ಅಂತಾ ಎಡಿಟ್ ಮಾಡಿ ಲೋನ್ ಆ್ಯಪ್ ಸಿಬ್ಬಂದಿ ಸ್ವರಾಜ್‌ನ ಸ್ನೇಹಿತರು, ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಿದ್ದಾರೆ. ಸ್ವರಾಜ್‌ನ ಕಾಂಟಾಕ್ಟ್ ಲಿಸ್ಟ್ ವೀವ್ ಮಾಡುತ್ತಿದ್ದ ಆಪ್ ಮಾಡಿರುವ ಆ್ಯಪ್ ಸಿಬ್ಬಂದಿ ಸ್ವರಾಜ್‌ನ ಸಾಲ ಬಾಕಿ ಇದೆ ಎಂದೂ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ್ದಾರೆ.
ಲೋನ್ ಆ್ಯಪ್ ಸಿಬ್ಬಂದಿಯ ನಿರಂತರ ಕಿರುಕುಳ ಬೆದರಿಕೆ ತಾಳಲಾರದೆ ಸ್ವರಾಜ್ ಆಗಸ್ಟ್ 31 ರಂದು ತಮ್ಮ ಹಳೆಯ ಮನೆಯ ಬಚ್ಚಲು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೋನ್ ಆ್ಯಪ್ ಸಿಬ್ಬಂದಿ ಆಗಸ್ಟ್ 31ರ ಮಧ್ಯಾಹ್ನ 2 ಗಂಟೆಗೆ ಡೆಡ್ ಲೈನ್ ನೀಡಿದ್ದು. ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications