Mangaluru: ಮಂಗಳೂರು ಮಸಾಜ್ ಸೆಂಟರ್ ಮೇಲೆ ಶ್ರೀ ರಾಮಸೇನೆ ದಾಳಿ
ಮಂಗಳೂರು ಜನವರಿ 23: ಮಸಾಜ್ ಸೆಂಟರ್ ಮೇಲೆ ಶ್ರೀ ರಾಮ ಸೇನೆಯ ಗುಂಪು ದಾಳಿ ಮಾಡಿದ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ. 25 ಜನರ ಗುಂಪು ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಆರೋಪ ಹೋರಿಸಿ ದಾಳಿ ಮಾಡಿದೆ. ದಾಳಿಯಲ್ಲಿ ಮಸಾಜ್ ಸೆಂಟರ್‌ನ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ.
ಮಂಗಳೂರಿನ ಬಿಜೈ ಕೆಎಸ್ಆರ್‌ಟಿಸಿ ನಿಲ್ದಾಣ ಬಳಿ ಇರುವ ಕಲರ್ಸ್ ಮಸಾಜ್ ಸೆಂಟರ್ ಮೇಲೆ ಶ್ರೀ ರಾಮ ಸೇನೆಯ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಮಸಾಜ್ ಸೆಂಟರ್‌ಗೆ ನುಗ್ಗಿ ಪೀಠೋಪಕರಣಗಳನ್ನು ದ್ವಂಸ ಮಾಡಿ ಕಾನೂನು ಕೈಗೆತ್ತುಕೊಂಡಿದ್ದಾರೆ. ಜೊತೆಗೆ ಮಸಾಜ್ ಸೆಂಟರ್‌ನಲ್ಲಿ ಇದ್ದ ಇಬ್ಬರು ಯುವತಿಯರನ್ನು ತರಾಟೆ ತೆಗೆದುಕೊಂಡ ಗುಂಪು ಯುವತಿಯರು ಕೈ ಮುಗಿದು ಬೇಡಿಕೊಂಡರು ಬಿಡದೆ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.

ಈ ಹಿಂದೆ ಇದೇ ರೀತಿ ಪಬ್ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಮಂಗಳೂರಿನ ಮಸಾಜ್ ಸೆಂಟರ್‌ನಲ್ಲಿ ದಾಳಿ ಮಾಡಲಾಗಿದ್ದು ಕಾನೂನು ಕ್ರಮ ಜರಿಗಿಸಲು ಒತ್ತಾಯ ಹೆಚ್ಚಾಗಿದೆ. ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಗೃಹ ಸಚಿವ ಪರಮೇಶ್ವರ್ ಅವರು ಉಡುಪಿಯಲ್ಲಿ ಇರುವಾಗ ಈ ದಾಳಿ ನಡೆದಿದೆ. ಘಟನೆಯ ಬಗ್ಗೆ ಉಡುಪಿಯಲ್ಲಿ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇದನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ ಗೊತ್ತಿಲ್ಲ. ಅವರನ್ನು ಅರೆಸ್ಟ್ ಮಾಡಿ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಅವರವರ ಕೆಲಸ ಮಾಡಲು ಅವರಿಗೆ ಹಕ್ಕಿದೆ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳಬಾರದು. ತಕ್ಷಣ ಅವರನ್ನು ಅರೆಸ್ಟ್ ಮಾಡಿ ಕ್ರಮಕ್ಕೆ ಸೂಚಿಸಿದ್ದೇನೆ' ಎಂದು ಹೇಳಿದರು.












Click it and Unblock the Notifications