ಜಲಕ್ರೀಡೆಯ ತಾಣವಾಗಲಿದೆ ಮಂಗಳೂರು ಸಸಿ ಹಿತ್ಲು ಬೀಚ್
ಮಂಗಳೂರು ಜಿಲ್ಲಾಡಳಿತವು ಸಸಿಹಿತ್ಲು ಬೀಚನ್ನು ಜಲಕ್ರೀಡೆಯ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದ, ಸರ್ಫಿಂಗ್ ಹಾಗೂ ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗಿಗೆ ಒತ್ತು ನೀಡಲಿದೆ.
ಮಂಗಳೂರು, ಏಪ್ರಿಲ್ 29 : ಮಂಗಳೂರು ಜಿಲ್ಲಾಡಳಿತವು ಸಸಿಹಿತ್ಲು ಬೀಚನ್ನು ಜಲಕ್ರೀಡೆಯ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದ, ಸರ್ಫಿಂಗ್ ಹಾಗೂ ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗಿಗೆ ಒತ್ತು ನೀಡಲಿದೆ.
ಕಳೆದ ವರ್ಷ ಇಲ್ಲಿ ಪ್ರಥಮ ಬಾರಿಗೆ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನಶಿಪ್ ಆಯೋಜಿಸಲ್ಪಟ್ಟಂದಿನಿಂದ ಈ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ. ಕೆನರಾ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಮುತುವರ್ಜಿಯಿಂದ ಸ್ಥಾಪಿಸಲ್ಪಟ್ಟಿರುವ ಕೆನರಾ ಸರ್ಫಿಂಗ್ ಅಂಡ್ ವಾಟರ್ ಸ್ಪೋಟ್ಸ್ ಪ್ರಮೋಶನ್ ಕೌನ್ಸಿಲ್ ಜಲ ಕ್ರೀಡೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಕಾರ್ಯಯೋಜನೆಗಳನ್ನು ಈಗಾಗಲೇ ಜಿಲ್ಲಾಧಿಕಾರಿ ಕೆ. ಜಿ. ಜಗದೀಶ ಅವರ ಮುಂದೆ ಪ್ರಸ್ತುತಪಡಿಸಲಾಗಿದೆ.[ಬಿಸಿಲ ಬೇಗೆಯಿಂದ ಹೊರಬರಲು ಮಂಗಳೂರಿಗರ ಬಗೆ ಬಗೆ ತಂತ್ರ]

ಇವುಗಳಲ್ಲಿ ಒಂದನ್ನು ಜಿಲ್ಲಾಧಿಕಾರಿಗಳು ಆಯ್ಕೆ ಮಾಡಿ ಅದನ್ನು ಸರಕಾರದ ಮುಂದಿಡಲು ಸಂಬಂಧಿತ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಕೌನ್ಸಿಲ್ ಕಾರ್ಯದರ್ಶಿ ಗೌರವ್ ಹೆಗ್ಡೆ ಹೇಳಿದ್ದಾರೆ. ಸುಮಾರು 33 ಎಕರೆ ಪ್ರದೇಶದಲ್ಲಿ ಬೀಚನ್ನು ಅಭಿವೃದ್ಧಿಪಡಿಸುವ ಕಾರ್ಯಯೋಜನೆಯನ್ನು ಕೌನ್ಸಿಲ್ ಮತ್ತು ಮಂತ್ರ ಸರ್ಫ್ ಕ್ಲಬ್ ಜಂಟಿಯಾಗಿ ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸುತ್ತಿವೆ. ಸರ್ಫಿಂಗ್ ಕ್ರೀಡೆಯಲ್ಲಿ ಆಸಕ್ತಿಯಿರುವವರಿಗೆ ತರಬೇತಿ ನೀಡುವ ಪ್ರಸ್ತಾಪವೂ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಸಿಗರನ್ನು ಆಕರ್ಷಿಸಲು ಹೋಂಸ್ಟೇಗಳನ್ನು ಸ್ಥಾಪಿಸಲೂ ಜಿಲ್ಲಾಡಳಿತ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ 15 ದಿನಗಳಲ್ಲಿ ಕಾರ್ಯಾಗಾರವೊಂದನ್ನು ನಡೆಸಲಿದೆ ಎಂದು ತಿಳಿದುಬಂದಿದೆ.












Click it and Unblock the Notifications