ಕಾರ್ತಿಕ್‍ರಾಜ್ ಕೊಲೆ ಪ್ರಕರಣ: ಇನ್ಸ್ ಪೆಕ್ಟರ್ ಅಮಾನತಿಗೆ ಆಗ್ರಹ

ಕಾರ್ತಿಕ್‍ರಾಜ್ ಕೊಲೆ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ತೋರಿ ತನ್ನ ಕುಟುಂಬ ವರ್ಗದವರನ್ನು ರಕ್ಷಿಸಲು ಅಶೋಕ್ ಮುಂದಾಗಿದ್ದರು. ಈ ಕಾರಣಕ್ಕೆ ಅಶೋಕ್ ರನ್ನು ತಕ್ಷಣ ಅಮಾನತು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಮಂಗಳೂರು, ಮೇ 3: ಅಮಾಯಕ ಕಾರ್ತಿಕ್‍ರಾಜ್ ರನ್ನು ತನ್ನ ಸಂಬಂಧಿ ಕುಟುಂಬ ವರ್ಗದವರೇ ಕೊಲೆ ಮಾಡಿದ್ದ ಸತ್ಯ ಗೊತ್ತಿದ್ದರೂ ಅಮಾಯಕರನ್ನು ಹಿಂಸಿಸಿ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ ಕೊಣಾಜೆ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಅಶೋಕ್ ವಜಾಗೊಳಿಸುವಂತೆ ಆಗ್ರಹ ಕೇಳಿ ಬಂದಿದೆ.

ಕಾರ್ತಿಕ್‍ರಾಜ್ ಕೊಲೆ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ತೋರಿ ತನ್ನ ಕುಟುಂಬ ವರ್ಗದವರನ್ನು ರಕ್ಷಿಸಲು ಅಶೋಕ್ ಮುಂದಾಗಿದ್ದರು. ಈ ಕಾರಣಕ್ಕೆ ಅಮಾಯಕರನ್ನು ಜೈಲಿಗೆ ಹಾಕಿ ಹಿಂಸಿಸಿದ್ದಾರೆ. ಇದರಿಂದ ಅಶೋಕ್ ರನ್ನು ತಕ್ಷಣ ಅಮಾನತು ಮಾಡಬೇಕೆಂದು ಒತ್ತಾಯಿಸಿ ಕೊಣಾಜೆ ನಾಗರಿಕ ಸಮಿತಿ ಸದಸ್ಯರು ಬುಧವಾರದಂದು ಕೊಣಾಜೆ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Social organizations protest in front of Konaje police station to suspend Inspector Ashok

ಕೊಣಾಜೆಯ ಸಾಮಾನ್ಯ ರಿಕ್ಷಾ ಚಾಲಕರಿಗೂ ಕಾರ್ತಿಕ್‍ರಾಜ್ ಕೊಲೆಯಾದ ಒಂದು ವಾರದಲ್ಲೇ ಕೊಲೆಗಾರರು ಅವರ ಕುಟುಂಬ ವರ್ಗದವರೇ ಎಂದು ತಿಳಿದಿದ್ದರೂ ಸಹ ಇನ್ ಸ್ಪೆಕ್ಟರ್ ಅಶೋಕ್ ಮಾತ್ರ ಕೊಲೆಯಾದ ಕಾರ್ತಿಕ್ ಕುಟುಂಬದವರು ತನ್ನ ಸಂಬಂಧಿಗಳಾದ ಕಾರಣ ಸ್ವಜನ ಪಕ್ಷಪಾತ ತೋರಿದ್ದಾರೆ. ನೈಜ ಆರೋಪಿಗಳನ್ನು ರಕ್ಷಿಸಲು ಹೋಗಿ ಸುಮಾರು ನೂರರಷ್ಟು ಅಮಾಯಕರನ್ನು ಜೈಲಿಗೆ ಹಾಕಿ ಹಿಂಸೆ ನೀಡಿದ್ದಾರೆ. ಬಹುತೇಕ ಮುಸ್ಲಿಮರನ್ನೇ ಟಾರ್ಗೆಟ್ ಮಾಡಿದ್ದು ಖಂಡನಾರ್ಹ ಎಂದು ಕೋಮು ಸೌಹಾರ್ದ ವೇದಿಕೆ ಮುಖಂಡರಾದ ಇಸ್ಮತ್ ಪಜೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಶ್ವಾನ ದಳದ ನಾಯಿಗಳಿಗಿರುವ ನಿಯತ್ತೂ ಅವರಿಗಿಲ್ಲ ಎಂದು ಅಶೋಕ್ ರನ್ನು ಇಸ್ಮತ್ ಇದೇ ಸಂದರ್ಭದಲ್ಲಿ ಮೂದಲಿಸಿದರು.

ಪರಿಸ್ಥಿತಿಯ ಲಾಭ ಪಡೆಯಲು ಹೊರಟ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ತಿಕ್‍ರಾಜ್ ಕೊಲೆಯನ್ನು ಬೆಂಗಳೂರಿನ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಹೋಲಿಸಿ ಇದೂ ಜಿಹಾದಿಗಳು ನಡೆಸಿದ ಕೊಲೆ ಎಂದು ಆರೋಪಿಸಿದ್ದರು. ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವಂತಹ ಉಗ್ರ ಭಾಷಣ ಮಾಡಿದ್ದರು. ಇಂತವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪಿಎಫ್‍ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸಂಜೀವ್ ಪಾಟೀಲ್ ಅವರಿಗೆ ಪ್ರತಿಭಟನಾಕಾರರು ಇನ್ಸ್‍ಪೆಕ್ಟರ್ ಅಶೋಕ್ ಅವರನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸುವಂತೆ ಆಗ್ರಹಿಸಿ ಮನವಿ ನೀಡಿದರು.

ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ,ಪಿಎಫ್‍ಐ ಮುಖಂಡರಾದ ಹಾರಿಸ್ ಮಲಾರ್, ನವಾಝ್ ಉಳ್ಳಾಲ್, ಅತ್ತಾವುಳ್ಳ ಜೋಕಟ್ಟೆ, ಅಶ್ರಫ್ ಎ.ಕೆ, ಮಹಮ್ಮದ್ ಬದ್ರಿಯಾ ನಗರ, ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಶಿಹಾಬ್, ಸಲಾಫಿ ಮೂವ್‍ಮೆಂಟ್ ಮುಖಂಡ ಇಸ್ಮಾಯಿಲ್ ಶಾಫಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+