ಮಂಗಳೂರು: ಮುಳುಗಿರುವ ಬಾರ್ಜ್ ಕಂಪನಿಗೆ ಪರಿಸರ ಇಲಾಖೆ ನೋಟಿಸ್
ಮಂಗಳೂರು, ಜೂನ್ 12 : ಜಿಲ್ಲೆಯ ಉಳ್ಳಾಲ ಮೊಗವೀರ ಪಟ್ಣ ಸಮುದ್ರ ಕಿನಾರೆಯಲ್ಲಿ ಅಪಘಾತಕ್ಕೀಡಾಗಿ ಬಹುತೇಕ ಮುಳುಗಿರುವ ಬಾರ್ಜಿನ ತೈಲ ಸೋರಿಕೆ ಸಂಬಂಧ ಧರ್ತಿ ಕಂಪನಿಗೆ ಪರಿಸರ ಇಲಾಖೆ ನೋಟಿಸ್ ನೀಡಿದೆ.
ಕಳೆದ 8 ದಿನಗಳಿಂದ ಸಮುದ್ರದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಬಾರ್ಜಿನಿಂದ ತೈಲ ಸೋರಿಕೆ ಭೀತಿಯಲ್ಲಿದೆ. ನಾಲ್ಕು ದಿನಗಳ ಹಿಂದೆ ಡೀಸೆಲ್ ವಾಸನೆ ಬಂದ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಪರಿಸರ ಇಲಾಖೆ ಸಂಬಂಧಿತ ಧರ್ತಿ ಕಂಪನಿಗೆ ನೊಟೀಸ್ ಜಾರಿ ಮಾಡಿದೆ.

ಮುಳುಗಡೆಯಾಗಿರುವ ಬಾರ್ಜಿನೊಳಗಡೆ 2400 ಲೀಟರ್ ಡೀಸೆಲ್ ಇದ್ದು, ಟ್ಯಾಂಕಜಿಗೆ ಯಾವುದೇ ಹಾನಿ ಉಂಟಾಗಿಲ್ಲ. ಸಂಪೂರ್ಣ ಮುಳುಗಡೆಯಾದರೆ ತೈಲ ಸೋರಿಕೆ ಖಚಿತವಾಗಿದೆ.
ತಜ್ಞರ ತಂಡ ಪ್ರತಿದಿನ ಟಗ್ಗಿನಲ್ಲಿ ಹೋಗಿ ಬಾರ್ಜ್ ಪಕ್ಕದಿಂದ ಪ್ರತೀ ದಿನ ನೀರಿನ ಸ್ಯಾಂಪಲ್ ಸಂಗ್ರಹಿಸುತ್ತಿದ್ದು, ಅದರಲ್ಲಿ ತೈಲ ಸೋರಿಕೆ ಕುರಿತ ಯಾವುದೇ ಕುರುಹುಗಳಿಲ್ಲ.
ಬಾರ್ಜಿನಿಂದ ತೈಲವನ್ನು ಹೊರತೆಗೆಯಲು ಗುಜರಾತಿನ ಸ್ಮಿತ್ ಸಾಲ್ವೇಜ್ ಸಂಸ್ಥೆಗೆ ವಹಿಸಲಾಗಿದ್ದು, ಕಳೆದ ಮೂರು ದಿನಗಳಿಂದ ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಕಡಲು ಪ್ರಕ್ಷುಬ್ಧವಾಗಿರುವುದರಿಂದ ಅವರಿಗೆ ಸಾಧ್ಯವಾಗುತ್ತಿಲ್ಲ.
ಈ ಹಿನ್ನಲೆಯಲ್ಲಿ ತೈಲ ದುರಂತ ವಿಪತ್ತು ನಿರ್ವಹಣೆ ಸಂಸ್ಥೆಯಾಗಿರುವ ಮಂಗಳೂರಿನ ಯೋಜಕ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ತೈಲ ಹೊರತೆಗೆಯಲು ನಿಯೋಜಿಸಲಾಗಿದೆ.












Click it and Unblock the Notifications