ಸಿದ್ಧಾರ್ಥ ನಾಪತ್ತೆ: ನೀರಿಗೆ ಬಿದ್ದಿದ್ದು ನೋಡಿದ್ದೆ ಎಂದ ಮೀನುಗಾರ

Recommended Video

      V G Siddhartha : ಸಿದ್ದಾರ್ಥ ಬಗ್ಗೆ ಆಘಾತಕಾರಿ ಸುದ್ದಿ ನೀಡಿದ ಮೀನುಗಾರ | V G Siddhartha | Oneiindia Kannada

      ಮಂಗಳೂರು, ಜುಲೈ 30: ಎಸ್.ಎಂ.ಕೃಷ್ಣ ಅವರ ಅಳಿಯ ಖ್ಯಾತ ಉದ್ಯಮಿ ಸಿದ್ಧಾರ್ಥ ನಾಪತ್ತೆ ಪ್ರಕರಣಕ್ಕೆ ಸಣ್ಣ ಟ್ವಿಸ್ಟ್ ದೊರೆತಿದ್ದು, 'ವ್ಯಕ್ತಿಯೊಬ್ಬರು ಸೇತುವೆಯಿಂದ ಬಿದ್ದಿದ್ದು ನಾನು ನೋಡಿದೆ' ಎಂದು ಮೀನುಗಾರರೊಬ್ಬರು ಮಾಹಿತಿ ನೀಡಿದ್ದಾರೆ.

      'ನೇತ್ರಾವತಿ ನದಿ ಸೇತುವೆಯ ಎಂಟನೇ ಕಂಬದ ಬಳಿ ವ್ಯಕ್ತೊಯೊಬ್ಬರು ನದಿಗೆ ಬಿದ್ದಿದ್ದನ್ನು ನೋಡಿದೆ, ಉಳಿಸಲು ಪ್ರಯತ್ನ ಪಟ್ಟೆ ಆದರೆ ನಾನೊಬ್ಬನೇ ಇದ್ದ ಕಾರಣ ಸಾಧ್ಯವಾಗಲಿಲ್ಲ' ಎಂದು ಮೀನುಗಾರನೊಬ್ಬ ಮಾಹಿತಿ ನೀಡಿದ್ದಾನೆ.

      ಸಂಜೆ ವೇಳೆಗೆ ಒಬ್ಬ ವ್ಯಕ್ತಿ ನೀರಿಗೆ ಬಿದ್ದರು, ಉಳಿಸಲೆಂದು ಸ್ವಲ್ಪ ದೂರ ಈಜಿದೆ, ನೀರಿನ ವೇಗ ಹೆಚ್ಚಿದ್ದು, ಬೆಳಕು ಸಹ ಕಡಿಮೆ ಇದ್ದ ಕಾರಣ ಹಾಗೂ ನಾನೊಬ್ಬನೇ ಇದ್ದ ಕಾರಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಶಾಸಕ ಯುಟಿ.ಖಾದರ್ ಅವರು ಸಹ ಈ ಮಾಹಿತಿ ಖಚಿತಪಡಿಸಿದ್ದಾರೆ.

      Siddharth missing case: A fisherman said i saw a man falling from the bridge

      ಮೀನುಗಾರನ ಮಾಹಿತಿ ಮೇರೆಗೆ ಸೇತುವೆಯ ಎಂಟನೇ ಕಂಬದ ಬಳಿ ಶೋಧ ಕಾರ್ಯ ಪ್ರಾರಂಭ ಮಾಡಲಾಗಿದೆ.

      ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು, ಮೀನುಗಾರರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ಹಂತದಲ್ಲಿ ಎಲ್ಲ ಮಾಹಿತಿಗಳನ್ನು ಪೂರ್ಣವಾಗಿ ನಂಬಲಾಗುವುದಿಲ್ಲ ಹಾಗೆಯೇ ನಿರ್ಲಕ್ಷಿಸಲೂ ಆಗುವುದಿಲ್ಲ. ಮೀನುಗಾರ ಮಾಹಿತಿ ಕೊಟ್ಟ ನಂತರ ಶೋಧ ಕಾರ್ಯದ ವಿಧಾನವನ್ನು ಅಲ್ಪ ಬದಲಾವಣೆ ಮಾಡಲಾಗಿದೆ ಎಂದು ಖಾದರ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+