Get Updates
Get notified of breaking news, exclusive insights, and must-see stories!

ಮಂಗಳೂರು ದಸರಾ ಉದ್ಘಾಟಿಸಲಿದ್ದಾರೆ ಸಿದ್ದರಾಮಯ್ಯ

ಮಂಗಳೂರು, ಆ.22 : ಇತ್ತ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದರೆ, ಅತ್ತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿಯೂ ದಸರಾ ತಯಾರಿ ಭರದಿಂದ ಸಾಗಿದೆ. ಈ ಬಾರಿಯ ದಸರಾ ಮಹೋತ್ಸವವನ್ನು ಸೆ. 27ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ.

ದಸರಾ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು, ಶ್ರೀ ಕ್ಷೇತ್ರದಲ್ಲಿ 2014ರ ಮಂಗಳೂರು ದಸರಾವನ್ನು ಆಕರ್ಷಣೀಯ ಹಾಗೂ ವೈಭವೋಪೇತವಾಗಿ ಆಚರಿಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.27ರಂದು ಸಂಜೆ 6.30ಕ್ಕೆ ದಸರಾವನ್ನು ಉದ್ಘಾಟಿಸಲಿದ್ದಾರೆ.

Kudroli Sri Gokarnanatha

2012ರಲ್ಲಿ ದಸರಾವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ 2013ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ದಸರಾವನ್ನು ಉದ್ಘಾಟಿಸಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಕುದ್ರೋಳಿ ದೇವಾಲಯದ ವಿರುದ್ಧ ಇದೆಂಥ ಅಪಪ್ರಚಾರ]

ಮಂಗಳೂರಿನ ಕುದ್ರೋಳಿಯಲ್ಲಿ ನಡೆಯುವ ದಸರಾ ಹಬ್ಬ ಕರಾವಳಿ ಭಾಗದಲ್ಲಿಯೇ ದೊಡ್ಡ ಹಬ್ಬ. 1990ರಿಂದ ದಸರಾ ಹಬ್ಬದ ಆಚರಣೆ ಆರಂಭವಾಯಿತು. ಸಾವಿರಾರು ಭಕ್ತರು ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ಪುನೀತರಾಗುತ್ತಾರೆ. ವಿದ್ಯುತ್ ದೀಪಗಳಿಂದ ದೇವಸ್ಥಾನವನ್ನು ಅಲಂಕಾರ ಮಾಡಲಾಗುತ್ತದೆ. ದಸರಾ ಸಂದರ್ಭ ದೇವಸ್ಥಾನ ಮಾತ್ರವಲ್ಲ ಮಂಗಳೂರು ನಗರವಿಡೀ ಜಗಮಗಿಸುತ್ತಿರುತ್ತದೆ. [ಮೈಸೂರು ದಸರಾ, ಕಾರ್ನಾಡ್‌ಗೆ ಅಧಿಕೃತ ಆಹ್ವಾನ]

ಎಲ್ಲಾ ಧರ್ಮದವರು ದೇವಾಲಯಕ್ಕೆ ಬರಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಸುಧಾರಣಾವಾದಿ ಶ್ರೀ ನಾರಾಯಣ ಗುರುಗಳು 1912ರಲ್ಲಿ ಪವಿತ್ರ ಶಿವಲಿಂಗವನ್ನು ಕ್ರುದ್ರೋಳಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದರು. ದೇವಸ್ಥಾನದ ಮೂಲ ರಚನೆ ಕೇರಳ ಮಾದರಿಯಲ್ಲಿತ್ತು. 1991ರಲ್ಲಿ ದೇವಸ್ಥಾನವನ್ನು ನವೀಕರಣಗೊಳಿಸಿ ಚೋಳ ಮಾದರಿಯ ರಚನೆಯನ್ನು ನಿರ್ಮಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+