ಆಗಸ್ಟ್‌ 1ರಿಂದ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತ

ಮಂಗಳೂರು, ಜುಲೈ 23 : ಇದು ಅಧಿಕೃತ ಪ್ರಕಟಣೆ...ಹಲವಾರು ಅಂತಿಮ ಗಡುವುಗಳು ಮುಗಿದಿದ್ದು, ಆಗಸ್ಟ್‌ 1ರಿಂದ ಶಿರಾಡಿಘಾಟ್‌ ನಲ್ಲಿ ಲಘು ವಾಹನಗಳ ಸಂಚಾರ ಆರಂಭವಾಗಲಿದೆ. ಆ.15ರ ನಂತರ ದೊಡ್ಡ ವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗುತ್ತದೆ.

ಕೆಂಪುಹೊಳೆ ಚೆಕ್‌ಪೋಸ್ಟ್‌ನಿಂದ ಮಾರನಹಳ್ಳಿವರೆಗಿನ 13 ಕಿ.ಮೀ ದೂರದ ರಸ್ತೆಯ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು, ಈಗ ರಸ್ತೆಯ ಅಂಚಿಗೆ ಮಣ್ಣು ಹಾಗೂ ಸಿಮೆಂಟ್‌ ಮಿಶ್ರಣ ಹಾಕುವ ಕಾರ್ಯ ನಡೆಯುತ್ತಿದೆ. ಅದು ಮುಗಿಯುತ್ತಿದ್ದಂತೆ ವಾಹನಗಳ ಸಂಚಾರಕ್ಕೆ ರಸ್ತೆ ಮುಕ್ತವಾಗಲಿದೆ. [ಶಿರಾಡಿ ಘಾಟ್ : ಜನಪ್ರತಿನಿಧಿಗಳಿದ್ದರೂ ಏನು ಪ್ರಯೋಜನ?]

ಒಟ್ಟು 119 ತಿರುವುಗಳ ಶಿರಾಡಿ ಘಾಟ್‌ನಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಸುವುದು ಸುಲಭವಾಗಿರಲಿಲ್ಲ. ಇಳಿಜಾರಿನಲ್ಲಿ ಮತ್ತು ತಿರುವುಗಳಲ್ಲಿ ಕಾಂಕ್ರಿಟ್ ಹಾಕುವುದು ಸವಾಲಿನ ಕೆಲಸವಾಗಿತ್ತು ಎಂದು ಈ ಕಾಮಗಾರಿಯ ಕುರಿತು ಸಾಕ್ಷ್ಯಚಿತ್ರ ಮಾಡಿರುವ ಇಂಡಿಯನ್‌ ರೋಡ್‌ ಕಾಂಗ್ರೆಸ್‌ನ ಸದಸ್ಯರು ಹೇಳಿದ್ದಾರೆ. [ಶಿರಾಡಿ ಕಾಂಕ್ರಿಟ್ ರಸ್ತೆ ಕಾಮಗಾರಿ ಚಿತ್ರಗಳು]

ಎರಡನೇ ಹಂತದಲ್ಲಿ 13 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಹೈದ್ರಾಬಾದ್‌ನ ಜಿವಿಆರ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಕೇಂದ್ರ ಹಣಕಾಸು ಇಲಾಖೆ ಇನ್ನೂ ಈ ಯೋಜನೆಗೆ ಅಂತಿಮ ಒಪ್ಪಿಗೆ ನೀಡಿಲ್ಲ. ಶಿರಾಡಿ ಘಾಟ್ ಅಭಿವೃದ್ಧಿಗೆ ಈ ಸಂಸ್ಥೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಚಿತ್ರಗಳಲ್ಲಿ ನೋಡಿ ಘಾಟ್ ಕಾಮಗಾರಿ.....

13 ಕಿ.ಮೀ.ಉದ್ದದ ಕಾಂಕ್ರಿಟ್ ಕಾಮಗಾರಿ

13 ಕಿ.ಮೀ.ಉದ್ದದ ಕಾಂಕ್ರಿಟ್ ಕಾಮಗಾರಿ

ಶಿರಾಡಿ ಘಾಟ್‌ನ 26 ಕಿ.ಮೀ.ಉದ್ದ ರಸ್ತೆಯನ್ನು ಎರಡು ಭಾಗವಾಗಿ ಮಾಡಿಕೊಂಡು ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. 2015ರ ಜನವರಿ 2ರಿಂದ ವಾಹನ ಸಂಚಾರವನ್ನು ಶಿರಾಡಿಯಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. 2015ರ ಮೇ 15ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಗುತ್ತಿಗೆದಾರರಿಗೆ ಸಮಯ ಸಿಗಲಿಲ್ಲ

ಗುತ್ತಿಗೆದಾರರಿಗೆ ಸಮಯ ಸಿಗಲಿಲ್ಲ

ಶಿರಾಡಿ ರಸ್ತೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಕನಿಷ್ಠ 18 ತಿಂಗಳ ಅವಧಿ ಬೇಕಾಗಿತ್ತು. ಆದರೆ, 6 ತಿಂಗಳಲ್ಲಿ ಬಿಟ್ಟುಕೊಡಿ ಎಂಬ ಒತ್ತಾಯ ಕೇಳಿಬಂತು ಏಕೆಂದರೆ, ಮಂಗಳೂರು, ಹಾಸನ, ಬೆಂಗಳೂರು, ತುಮಕೂರು, ಕೋಲಾರ ಮೊದಲಾದ ಕಡೆಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.

ಹಲವಾರು ಅಡೆ-ತಡೆಗಳು ಎದುರಾದವು

ಹಲವಾರು ಅಡೆ-ತಡೆಗಳು ಎದುರಾದವು

ಕಾಮಗಾರಿ ಆರಂಭವಾದಾಗಲೇ ಹಲವಾರು ಅಡೆ-ತಡೆಗಳು ಎದುರಾದವು.ಎಪ್ರಿಲ್‌ನಲ್ಲಿ ಅಕಾಲಿಕ ಮಳೆ ಬಂತು, ಸ್ಥಳೀಯರು ಪ್ರತಿಭಟನೆ ನಡೆಸಿದರು, ಕೆಲಸಗಾರರ ಮೇಲೆ ಹಲ್ಲೆ ನಡೆಯಿತು. ರಾತ್ರಿ ವೇಳೆ ವಿಪರೀತ ಚಳಿಇದ್ದ ಕಾರಣ ಕೆಲಸಗಾರರು ಸಿಗಲಿಲ್ಲ. ಕಾಡು ಪ್ರಾಣಿಗಳ ಹಾವಳಿಯಿಂದ ಕೆಲಸಗಾರರು ಭಯಗೊಂಡರು. ಆದರೆ ಕಾಮಗಾರಿಯ ಗುಣಮಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಸಂಸದರು, ಸಚಿವರು, ಅಧಿಕಾರಿಗಳು, ತಜ್ಞರು ಆಗಾಗ ಕಾಮಗಾರಿಯನ್ನು ವೀಕ್ಷಿಸಿದ್ದಾರೆ.

4 ಲಕ್ಷ ಚೀಲ ಸಿಮೆಂಟ್‌ ತಿಂದ ಘಾಟ್ ರಸ್ತೆ

4 ಲಕ್ಷ ಚೀಲ ಸಿಮೆಂಟ್‌ ತಿಂದ ಘಾಟ್ ರಸ್ತೆ

13 ಕಿ.ಮೀ. ಉದ್ದದ ಮಾರ್ಗದ ಕಾಮಗಾರಿಗೆ 4 ಲಕ್ಷ ಚೀಲ ಸಿಮೆಂಟ್‌, 50 ಸಾವಿರ ಕ್ಯುಬಿಕ್‌ ಮೀ. ಜಲ್ಲಿ, 30 ಸಾವಿರ ಕ್ಯು.ಮೀ. ಮರಳು, 35 ಸಾವಿರ ಕ್ಯು.ಮೀ. ಜಲ್ಲಿಹುಡಿ ಮಿಕ್ಸ್‌ ಬಳಸಲಾಗಿದೆ. 13 ಕಿ.ಮೀ.ಗೂ ಜಿಯೋ ಟೆಕ್ಸ್‌ಟೈಲ್‌ ಶೀಟ್‌ ಹಾಸಲಾಗಿದೆ. ಘಾಟಿಯ ಮಣ್ಣು ಜೇಡಿಯಂತಿರುವ ಕಾರಣ 50 ಕಿ.ಮೀ. ದೂರದಿಂದ ಮಣ್ಣನ್ನು ತಂದು ಸಿಮೆಂಟ್‌ ಮಿಶ್ರಣ ಮಾಡಿ ರಸ್ತೆ ಬದಿಗೆ ಹಾಕಲಾಗುತ್ತಿದೆ.

2ನೇ ಹಂತದ ಕಾಮಗಾರಿ

2ನೇ ಹಂತದ ಕಾಮಗಾರಿ

ಎರಡನೇ ಹಂತದಲ್ಲಿ 13 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಹೈದ್ರಾಬಾದ್‌ನ ಜಿವಿಆರ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಕೇಂದ್ರ ಹಣಕಾಸು ಇಲಾಖೆ ಇನ್ನೂ ಈ ಯೋಜನೆಗೆ ಅಂತಿಮ ಒಪ್ಪಿಗೆ ನೀಡಿಲ್ಲ. ಈ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಸದ್ಯಕ್ಕೆ ನಿಖರವಾದ ಮಾಹಿತಿ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+