ಜೂನ್ 30ರವರೆಗೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳದಲ್ಲಿ ನಿಷೇಧಾಜ್ಞೆ ಮುಂದುವರಿಕೆ
ಮಂಗಳೂರು, ಜೂನ್ 27: ದಕ್ಷಿಣ ಕನ್ನಡದ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತು ಸುಳ್ಯದಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜೂನ್ 30ರವರೆಗೆ ಈ ನಾಲ್ಕೂ ತಾಲೂಕುಗಳಲ್ಲಿ ವಿಸ್ತರಿಸಲಾಗಿದೆ.
ಕಲ್ಲಡ್ಕ ಗಲಭೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ನಿಷೇದಾಜ್ಞೆ ಹಾಕಲಾಗಿತ್ತು. ಹೀಗಿದ್ದೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಹೀಗಾಗಿ ನಿಷೇಧಾಜ್ಞೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸಲಾಗಿತ್ತು.

ನಿಷೇಧಾಜ್ಞೆಯ ಮಧ್ಯೆಯೂ ಬೆಂಜರಪದವಿನ ಅಶ್ರಫ್ ಕುಲಾಯಿ ಹತ್ಯೆ ನಡೆದಿತ್ತು. ಹೀಗಾಗಿ ಮತ್ತೆ ನಿಷೇಧಾಜ್ಞೆಯನ್ನು 30ರವರೆಗೆ ವಿಸ್ತರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆಜಿ ಜಗದೀಶ್ ಆದೇಶ ನೀಡಿದ್ದಾರೆ.
ಮಂಗಳೂರು ನಗರ ಹಾಗೂ ಮಂಗಳೂರು ತಾಲೂಕಿನಲ್ಲಿ ಯಾವುದೇ ನಿಷೇದಾಜ್ಞೆ ಇರುವುದಿಲ್ಲ. ಇವತ್ತು ರಾತ್ರಿಗೆ ಮಂಗಳೂರಿನಲ್ಲಿ ನಿಷೇದಾಜ್ಞೆ ಅಂತ್ಯವಾಗಲಿದೆ.












Click it and Unblock the Notifications