ಮಂಗಳೂರಿನಲ್ಲಿ ಶೀಘ್ರದಲ್ಲೇ ಸಂಧ್ಯಾ ಪಾಲಿಟೆಕ್ನಿಕ್ ಆರಂಭ

ಮಂಗಳೂರು, ಫೆ. 17 : ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಧ್ಯಾ ಪಾಲಿಟೆಕ್ನಿಕ್ ಆರಂಭಿಸಬೇಕು ಎಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅಕವಾಶ ಕಲ್ಪಿಸುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಂಗಳೂರಿಗೆ ವಿಶೇಷ ಆರ್ಥಿಕ ವಲಯ ಬರುತ್ತಿದ್ದು, ಇಲ್ಲಿ ತಾಂತ್ರಿಕ ತಜ್ಞರ ಅಗತ್ಯವಿದೆ. ಕೆಪಿಟಿಯಲ್ಲಿ ಮ್ಯಾಕಾನಿಕಲ್, ಎಲೆಕ್ಟ್ರಿಕಕಲ್ ಹಾಗೂ ಕಮ್ಯೂನಿಕೇಶನ್‌ನಲ್ಲಿ ಕೋರ್ಸ್ ಆರಂಭಿಸಲು ಮನವಿ ಮಾಡಿದ್ದು, ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು. [ಶಿರಾಡಿ ನಾಲ್ಕು ಪಥದ ರಸ್ತೆಯಾಗುವುದಿಲ್ಲ]

Ivan D'Souza

ಐಟಿಐಯಲ್ಲಿ ಬಡ ವಿದ್ಯಾರ್ಥಿಗಳು ಓದುತ್ತಿದ್ದು, ಸರ್ಕಾರಿ ಶಾಲೆಗಳಿಗೆ ನೀಡುವ ಬಿಸಿಯೂಟ ಯೋಜನೆಯನ್ನು ಐಟಿಐ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ ಎಂದರು. ರಾಜ್ಯದಲ್ಲಿ ಒಟ್ಟು 1 ಲಕ್ಷ ಐಟಿಐ ವಿದ್ಯಾರ್ಥಿಗಳಿದ್ದಾರೆ. 258 ಸರ್ಕಾರಿ, 196 ಅನುದಾನಿತ, 1,144 ಅನುದಾನ ರಹಿತ ಕಾಲೇಜುಗಳಿವೆ ಎಂದು ಐವಾನ್ ಡಿಸೋಜಾ ಮಾಹಿತಿ ನೀಡಿದರು. [ಮಂಗಳೂರಿನಿಂದ ಮಂಗಳನ ಅಂಗಳಕ್ಕೆ ಉಪಗ್ರಹ!]

ಸೂಕ್ಷ್ಮ ಪ್ರದೇಶವಾದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಬಲವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಐದು ಮಂದಿ ಪಿಎಸ್‌ಐ ಮತ್ತು 150 ಮಂದಿ ಪಿಸಿಯವರನ್ನು ಮಂಗಳೂರು ನಗರಕ್ಕೆ ನಿಯೋಜಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಡಿ.ಕೆ. ಅಶೋಕ್ ಕುಮಾರ್, ಪ್ರವೀಣ್‌ಚಂದ್ರ ಆಳ್ವ ಮುಂತಾದವರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+