ಮಂಗಳೂರಿನಲ್ಲಿ ಸೈನಿಕ ಭವನ ಲೋಕಾರ್ಪಣೆ

ಮಂಗಳೂರು, ಜುಲೈ 27 : 'ಪಠ್ಯಪುಸ್ತಕಗಳಲ್ಲಿ ಕಾರ್ಗಿಲ್‌ ಯುದ್ಧ ಸೇರಿದಂತೆ ನಮ್ಮ ದೇಶದ ರಕ್ಷಣೆಗೆ ಸಲ್ಲಿಸಿದ ಸೈನಿಕರ ಸೇವೆ, ತ್ಯಾಗ ಬಲಿದಾನಗಳನ್ನು ಯುವಜನಾಂಗಕ್ಕೆ ಪರಿಚಯಿಸಿ, ಅವರಲ್ಲಿ ದೇಶಪ್ರೇಮ ಜಾಗೃತಗೊಳಿಸುವ ಕಾರ್ಯ ಮಾಡಬೇಕು' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಕಾರ್ಗಿಲ್‌ ದಿನದ ಅಂಗವಾಗಿ ಭಾನುವಾರ ನಗರದ ಕದ್ರಿ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಗೌರವ ಅರ್ಪಿಸಿದ ಬಳಿಕ ಬಾವುಟಗುಡ್ಡೆಯಲ್ಲಿ ನಿರ್ಮಿಸಿರುವ ಸೈನಿಕ್‌ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. [ಚಿತ್ರಗಳಲ್ಲಿ : ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನ]

Veerendra Heggade

'ಗಡಿಪ್ರದೇಶಗಳಲ್ಲಿ ಸಾವಿಗೆ ಅಂಜದೆ ದೇಶ ಕಾಯುವ ಸೈನಿಕರ ತ್ಯಾಗ, ಹೋರಾಟದಿಂದ ದೇಶದೊಳಗೆ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಅವರ ತ್ಯಾಗ ಬಲಿದಾನ ಸದಾ ಸ್ಮರಿಸುವುದು ದೇಶದ ನಾಗರಿಕರ ಕರ್ತವ್ಯ. ಆದರೆ, ದೇಶರಕ್ಷಣೆಯಲ್ಲಿ ಸೈನಿಕರ ಮಹತ್ವ, ತ್ಯಾಗ, ಬಲಿದಾನಗಳ ಬಗ್ಗೆ ಅರಿವು ಮೂಡಿಸುವ ವಿಚಾರ ಇಂದಿನ ಶಿಕ್ಷಣದಲ್ಲಿ ಕಾಣುತ್ತಿಲ್ಲ' ಎಂದು ಅವರು ಹೇಳಿದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎನ್‌. ವಿನಯ ಹೆಗ್ಡೆ ಅವರು ಮಾತನಾಡಿ, ದೇಶಕ್ಕಾಗಿ ತನ್ನ ಸರ್ವಸ್ವವನ್ನು ತ್ಯಾಗಮಾಡುವ ಸೈನಿಕರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಇದನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಡೆಯಬೇಕು ಎಂದರು.

ಸೈನಿಕ್‌ ಭವನ : ಮಂಗಳೂರಿನ ಬಾವುಟಗುಡ್ಡೆಯಲ್ಲಿ 5 ಸೆಂಟ್ಸ್‌ ಸ್ಥಳದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಸೈನಿಕ್‌ ಭವನ ನಿರ್ಮಾಣಗೊಂಡಿದೆ. 4 ಅಂತಸ್ತುಗಳ ಭವನ 5,700 ಚದರ ಅಡಿ ವಿಸ್ತೀರ್ಣ ಹೊಂದಿದೆ. 2007ರ ಜ. 26ರಂದು ನಿಟ್ಟೆ ವಿವಿ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಭವನಕ್ಕೆ ಶಂಕುಸ್ಥಾಪನೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+