'ಸಾಯಿಬಾಬಾ, ರಾಘವೇಂದ್ರ ಶ್ರೀಗಳು ದೇವರಲ್ಲ'
ಮಂಗಳೂರ, ಜುಲೈ.16 : ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿ ದೇವರಲ್ಲ ಹಾಗೆ ಶಿರಡಿ ಸಾಯಿಬಾಬಾ ಕೂಡಾ ದೇವರಲ್ಲ ಇಬ್ಬರು ಸಂತರು. ಸಂತರಿಗೆ ದೇವ ಪದವಿ ನೀಡುವುದು ಸರಿಯಲ್ಲ. ದೇವರ ಬಗ್ಗೆ ಸಾಮಾನ್ಯ ಜನರಿಗೆ ತಿಳಿ ಹೇಳಲು ಬಂದ ಮಹಾಮಹಿಮರು ಎಂದರು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥರು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀಗಳು. ರಾಘವೇಂದ್ರ ಸ್ವಾಮೀಜಿಗಳ ಹಾಗೆ ಮಧ್ವಾಚಾರ್ಯರು, ಶಿರಡಿ ಸಾಯಿಬಾಬಾ ಕೂಡಾ ಸಂತರು. ಜನರಿಗೆ ಇವರ ಮೇಲೂ ಸಹ ಭಕ್ತಿ ಇದೆ. ಭಕ್ತರು ಇವರಿಗೂ ಸಹ ಪೂಜೆ ಮಾಡುತ್ತಾರೆ. ಹಾಗೆಂದು ಪೂಜೆ ಮಾಡುವುದರಿಂದ ದೇವರಿಗೆ ಹೋಲಿಸುವುದು ಸರಿಯಲ್ಲ. ಅದು ಅಭಿಮಾನದ ಸೂಚಕ ಈ ಮೂಲಕ ದೇವರನ್ನು ಪೂಜಿಸುವ ದಾರಿ ಕಾಣಲಾಗುತ್ತದೆ ಎಂದು ಹೇಳಿದ್ದಾರೆ.

'ಶಿರಡಿ ಸಾಯಿಬಾಬಾ ದೇವರಲ್ಲ, ಅವರೊಬ್ಬ ಮಾನವ ಅವರನ್ನು ಅರಾಧಿಸಬೇಡಿ' ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಅವರು ನೀಡಿದ್ದ ಹೇಳಿಕೆ ವಿವಾದ ಹುಟ್ಟಿಸಿದ್ದನ್ನು ಸ್ಮರಿಸಬಹುದು.
ಸ್ವರೂಪನಂದ ಸರಸ್ವತಿ ಬೆಂಬಲಿಸಿ ಅನೇಕ ಸಾಧು ಸಂತರು ಮೌನ ಪ್ರತಿಭಟನೆ ನಡೆಸಿದ್ದರು. ಇನ್ನೊಂದೆಡೆ ದ್ವಾರಕಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಅವರ ಮೇಲೆ ಎಫ್ ಐಆರ್ ದಾಖಲಾಗಿತ್ತು.[ಸ್ವರೂಪಾನಂದರ ಮೇಲೆ ಎಫ್ಐಆರ್]












Click it and Unblock the Notifications