ಜನಾರ್ದನ ಪೂಜಾರಿ ಆತ್ಮಕಥೆ 'ಸಾಲಮೇಳದ ಸಂಗ್ರಾಮ' ಬಿಡುಗಡೆ
ಮಂಗಳೂರು, ಜನವರಿ 27: ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಆತ್ಮಕಥೆ 'ಸಾಲಮೇಳದ ಸಂಗ್ರಾಮ' ಶುಕ್ರವಾರ ಲೋಕಾರ್ಪಣೆಗೊಂಡಿತು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.
ತಮ್ಮ ಸುದೀರ್ಘ 45 ವರ್ಷಗಳ ರಾಜಕೀಯ ಜೀವನವನ್ನು ತಮ್ಮ ಈ ಆತ್ಮಕಥೆಯಲ್ಲಿ ಪೂಜಾರಿ ದಾಖಲಿಸಿದ್ದಾರೆ.

ಬಿಡುಗಡೆ ದಿನದ ಪ್ರಯುಕ್ತ 300 ರೂ. ಪುಸ್ತಕ 50 ರೂ.ಗೆ ವಿತರಣೆ ಮಾಡಲಾಯಿತು. ಪುಸ್ತಕ ಕೊಳ್ಳಲು ಜನಾರ್ದನ ಪೂಜಾರಿಯವರ ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಬಿಜೆಪಿ, ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದು ಹಿರಿಯ ಕಾಂಗ್ರೆಸ್ ನಾಯಕರ ಆತ್ಮಕಥೆ ಬಿಡುಗಡೆಗೆ ಸಾಕ್ಷಿಯಾದರು.













Click it and Unblock the Notifications