Get Updates
Get notified of breaking news, exclusive insights, and must-see stories!

ಇನ್ನು ಮುಂದೆ ಕಡಲಿನ ಅಬ್ಬರಕ್ಕೆ ಸಿಲುಕಿದವರ ರಕ್ಷಣೆಗೆ ಬರಲಿದೆ ರೋಬೋ

ಮಂಗಳೂರು, ಜುಲೈ 24: ಕಡಲಿನ ಸೆಳೆತಕ್ಕೆ ಒಳಗಾಗಿ ಅಪಾಯದಲ್ಲಿರುವವರನ್ನು ಎಳೆತರಲು ರೋಬೋಟ್ ಒಂದನ್ನು ಸಿದ್ಧಪಡಿಸಲಾಗಿದೆ. ಮಂಗಳೂರಿನ ಕಡಲ ಕಿನಾರೆಯಲ್ಲಿ ಇದರ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ.

ಬೆಂಗಳೂರಿನ ಸಿಟಿ ಕಂಟ್ರೋಲ್ ಟೆಕ್ನಾಲಜಿ ಸಂಸ್ಥೆ ಈ ರೋಬೋಟನ್ನು ಬಳಕೆಗೆ ತರಲು ಪ್ರಯೋಗ ನಡೆಸಿದೆ. ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಒಷನ್ ಟೆಕ್ನಾಲಜಿ ಸಂಸ್ಥೆ ಈ ರೋಬೋಟನ್ನು ಸಿದ್ದಪಡಿಸಿದೆ.

ಮಳೆಗಾಲ ಆರಂಭವಾಯಿತೆಂದರೆ ಸಾಕು ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುತ್ತದೆ . ಈ ಸಂದರ್ಭದಲ್ಲಿ ಎಚ್ಚರಿಕೆ ನಿರ್ಲಕ್ಷಿಸಿ ನೀರಿಗಿಳಿಯುವ ಹಲವಾರು ಮಂದಿ ಅಪಾಯಕ್ಕೆ ಸಿಲುಕುತ್ತಾರೆ. ಸೂಕ್ತ ಸಮಯದಲ್ಲಿ ರಕ್ಷಣೆ ಸಿಗದೆ ಕಡಲ ಆರ್ಭಟಕ್ಕೆ ಹಲವಾರು ಪ್ರಾಣಗಳೂ ಬಲಿಯಾಗುತ್ತದೆ. ಇಂತಹ ಸಂದರ್ಭಲ್ಲಿ ಅವರ ರಕ್ಷಣೆಗೆಂದೇ ರೋಬೋಟೊಂದನ್ನು ಸಿದ್ಧಪಡಿಸಲಾಗಿದೆ .

Robo life saver test success in Mangaluru

ರಾಜ್ಯದ ಕರಾವಳಿಯ ಕಡಲ ತೀರ ಇಂದು ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ನೀರಿನಲ್ಲಿ ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸುವ ಹೊಸ ಉಪಕರಣ ನೀರಿಗಿಳಿದಿದೆ. ಬೆಂಗಳೂರಿನ ಸಿಟಿ ಕಂಟ್ರೋಲ್ ಟೆಕ್ನಾಲಜಿ ಸಂಸ್ಥೆ ಈ ಉಪಕರಣವನ್ನು ತಯಾರಿಸಿದ್ದು ರಿಮೋಟ್ ಕಂಟ್ರೋಲ್ ಮುಖಾಂತರ ಅಪಾಯದಲ್ಲಿದ್ದ ಜನರ ಬಳಿ ಈ ರೋಬೋ ಚಲಿಸುತ್ತದೆ.

Robo coastal observer ಹೆಸರಿನ ಈ ಯಂತ್ರ ಸಂಪೂರ್ಣ ಬ್ಯಾಟರಿ ಚಾಲಿತವಾಗಿದ್ದು, ರಿಮೋಟ್ ಕಂಟ್ರೋಲರ್ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ.

ಮಂಗಳೂರಿನ‌ ಸುಲ್ತಾನ್ ಬತ್ತೇರಿ ಎಂಬಲ್ಲಿ ಸಮುದ್ರ ಹಾಗು ನದಿ ಸಂಗಮದ ಸ್ಥಳದಲ್ಲಿ ಇದರ ಯಶಸ್ವಿ ಪ್ರಯೋಗ ನಡೆಸಲಾಗಿದೆ. ನದಿ, ಸರೋವರ, ಕೊಳ ಮತ್ತು ಸಮುದ್ರದ ನೀರಿನಲ್ಲಿ ಈ ರೋಬೋ ಕೊಸ್ಟಲ್ ಒಬ್ಸರ್ವರ್ ಯಂತ್ರವನ್ನು ಬಳಸಬಹುದಾಗಿದೆ.

Robo life saver test success in Mangaluru

ಈ ರೋಬೋಟ್ ಸಂಗ್ರಹಿಸಿದ ಡೇಟಾವನ್ನು ಸ್ಯಾಟಲೈಟ್ ಟೆಲಿಮೆಟ್ರಿ ಮೂಲಕ ಪ್ರಸಾರ ಮಾಡೋ ಸಾಮರ್ಥ್ಯ ಕೂಡ ಹೊಂದಿದೆ. ಕರಾವಳಿಯಲ್ಲಿ ಆಗುವ ಮಾಲಿನ್ಯ, ಕಡಲಲ್ಲಾಗುವ ಉಪ್ಪಿನಂಶದ ವ್ಯತ್ಯಾಸ ಸೇರಿದಂತೆ ಇತರ ಬೆಳವಣಿಗೆಗಳ ಬಗ್ಗೆಯೂ ಮಾಹಿತಿಯನ್ನೂ ಈ ಯಂತ್ರ ನೀಡುತ್ತದೆ.

ಅಲ್ಲದೆ ಕ್ಯಾಮರಾವನ್ನು ಅಳವಡಿಸಿರುವ ಕಾರಣ ಕರಾವಳಿ ಕಣ್ಗಾವಲಾಗಿ ಈ ಉಪಕರಣವನ್ನು ಬಳಸಬಹುದಾಗಿದೆ. ಇಡೀ ವ್ಯಕ್ತಿಯ ದೇಹದ ತೂಕವನ್ನು ಹೊರುವ ಸಾಮರ್ಥ್ಯ ಈ ಯಂತ್ರ ಹೊಂದಿದ್ದು, ಅಪಾಯದಲ್ಲಿ ಸಿಲುಕಿದ ವ್ಯಕ್ತಿಯನ್ನು ದಡಕ್ಕೆ ಹೊತ್ತು ತರುವ ಸಾಮರ್ಥ್ಯ ಈ ರೋಬೋಟ್ ಹೊಂದಿದೆ.

Robo life saver test success in Mangaluru

ಈ ರೀತಿಯ ರೋಬೋಟ್ ಗಳನ್ನು ಇತರ ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿವೆ . ಆದರೆ ನಮ್ಮ ಕರಾವಳಿಯ ಕಡಲಿನ ಆಳೆತ್ತರದ ಅಲೆಗಳ ಮೇಲೆ ಇದರ ಪ್ರಯೋಗ ಯಶಸ್ವಿಯಾಗ ಬೇಕಿದೆ. ಮಳೆಗಾಲದಲ್ಲಿ ಕಡಲ ಪ್ರಕ್ಷುಬ್ದ ವಾತಾವರಣದಲ್ಲಿ ಇದರ ಪ್ರಯೋಗ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಈ ರೋಬೋಟ್ ತುರ್ತು ಸಂದರ್ಭದಲ್ಲಿ ಬಳಕೆಗೆ ಬರಲಿದೆ.

ಪ್ರಯೋಗ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಭಾರತೀಯ ತಟರಕ್ಷಣಾ ಪಡೆ ಈ ರೋಬೋಟನ್ನು ಬಳಕೆಗೆ ತರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+