ಸಚಿವ ಖಾದರ್ ಗೆ ಮತ್ತೆ ಉಲ್ಬಣಿಸಿದ ಕಾಲು ನೋವು: ಆಸ್ಪತ್ರೆಗೆ ದಾಖಲು
Recommended Video

ಮಂಗಳೂರು, ಅಕ್ಟೋಬರ್. 11: ಕಾಲಿನ ನೋವು ಮತ್ತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಂದು ಗುರುವಾರ (ಅ.11) ಚಿಕಿತ್ಸೆ ಪಡೆದಿದ್ದಾರೆ. ಖಾದರ್ ಅವರ ಬಲಗಾಲಿನಲ್ಲಿ ಮತ್ತೆ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ.
ಕಳೆದ ತಿಂಗಳು ತೀವ್ರ ಕಾಲುನೋವಿನಿಂದ ಬಳಲಿದ ಖಾದರ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಿಂದಾಲ್ ಆಸ್ಪತ್ರೆಗೆ ಒಂದು ವಾರ ದಾಖಲಾಗಿದ್ದರು. ಈಗ ಮತ್ತೆ ಕಾಲು ನೋವು ಉಲ್ಬಣವಾದ ಕಾರಣ ಇಂದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ವೈದ್ಯರ ಸಲಹೆ ಯಂತೆ ಎಂಆರ್ಐ ಪರೀಕ್ಷೆಯ ಬಳಿಕ ಖಾದರ್ ಅವರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಶಸ್ತ್ರಚಿಕಿತ್ಸೆಗೆ ಒಳಗಾದರೆ ಹಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ. ಆದ ಕಾರಣ ಖಾದರ್ ಕಾಲು ನೋವಿಗೆ ಮಾತ್ರ ಚಿಕಿತ್ಸೆ ಪಡೆದುಕೊಂಡು ತಮ್ಮ ಕೆಲಸ

ಕಾರ್ಯಗಳಿಂದ ಸ್ವಲ್ಪ ವಿರಾಮ ಪಡೆದು, ಬೆಂಗಳೂರಿನ ತಮ್ಮ ಸ್ನೇಹಿತನೋರ್ವನ ಮನೆಯಲ್ಲಿ ವಿಶ್ರಾತಿ ಪಡೆಯಲಿದ್ದಾರೆ.
ಒಂದೆರಡು ದಿನಗಳಲ್ಲಿ ನೋವು ಕಡಿಮೆಯಾಗದಿದ್ದಲ್ಲಿ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.












Click it and Unblock the Notifications