ಪೋಷಕರಿಗೆ ಇನ್ಮುಂದೆ ನೋ ಟೆನ್ಷನ್: ಮಕ್ಕಳ ಐಡಿ ಕಾರ್ಡ್‌ಗೆ ಚಿಪ್, ಆಟ-ಪಾಠ ಎಲ್ಲವೂ ರೆಕಾರ್ಡ್
ಮಂಗಳೂರು, ಸೆಪ್ಟಂಬರ್ 02: ಮನೆಯಿಂದ ಶಾಲೆಗೆ ಮಕ್ಕಳನ್ನು ಕಳುಹಿಸಿದ ಪೋಷಕರಿಗೆ ಮಕ್ಕಳ ಬಗ್ಗೆ ದಿನವಿಡೀ ಚಿಂತೆ ಇರುತ್ತದೆ. ಶಾಲೆಯಲ್ಲಿ ಮಕ್ಕಳು ಏನು ಮಾಡ್ತಿದ್ದಾರೆ? ತರಗತಿಗಳಿಗೆ ಚಕ್ಕರ್ ಹೊಡೆದು ಹೊರಗೆ ಹೋಗಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಹೆತ್ತವರ ಮನಸ್ಸಿನ್ನಲ್ಲಿ ಕಾಡುತ್ತದೆ.ಆ ದರೆ ಇದಕ್ಕೆಲ್ಲಾ ಪರಿಹಾರ ವನ್ನು ಮಂಗಳೂರಿನ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಯೊಂದು ಕಂಡುಹುಡುಕಿದೆ
ಮನೆಯಲ್ಲೇ ಕೂತು ಹೆತ್ತವರು ಮಕ್ಕಳ ಶಾಲೆ ಚಟುವಟಿಕೆಗಳನ್ನು ಗಮನಿಸಲು ಈ ನೂತನ ಅವಿಷ್ಕಾರ ಸಹಾಯಕ್ಕೆ ಬಂದಿದೆ. ಮಂಗಳೂರು ನಗರ ಹೊರವಲಯದ ಮುಡಿಪು ಪ್ರದೇಶ ಜ್ಞಾನದೀಪ ಶಾಲೆ ಮತ್ತು ಸೂರಜ್ ಪಿಯು ಕಾಲೇಜಿನಲ್ಲಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಶಾಲೆ-ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಲನವಲನ ಗಮನಿಸಲು ನೂತನ ಆ್ಯಪ್ ರಚಿಸಲಾಗಿದ್ದು, ವಿಎಂಎಸ್ ಟೆಕ್ನಲಾಜಿ ಮೂಲಕ ಮಕ್ಕಳ ಚಲನವಲನ ಸಂಗ್ರಹ ಮಾಡಕೊಳ್ಳಲಾಗುತ್ತಿದೆ. ಮುಂಬೈ ಮೂಲದ ಕಂಪೆನಿ ಸಿದ್ಧಪಡಿಸಿರುವ ಈ ಟೆಕ್ನಾಲಜಿಯನ್ನು ಶಾಲೆಯಲ್ಲಿ ಆರು ತಿಂಗಳು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಈಗ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ವಿದ್ಯಾರ್ಥಿಗಳ ಐಡಿಕಾರ್ಡ್‌ನಲ್ಲಿ ಚಿಪ್ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಐಡಿ ಸ್ಕ್ಯಾನ್ ಮಾಡಬೇಕು. ಆಗ ಕ್ಯಾಮೆರಾದಲ್ಲಿ ಮಕ್ಕಳ ಫೇಸ್ ಸ್ಕ್ಯಾನ್ ಆಗುತ್ತದೆ. ಆ್ಯಪ್ ಮೂಲಕವಾಗಿ ಮಕ್ಕಳ ಶಾಲೆಗೆ ಪ್ರವೇಶಿಸಿರೋದು ಆ್ಯಪ್ ಮೂಲಕ ಮಕ್ಕಳ ಪೋಟೋ ಹೆತ್ತವರಿಗೆ ತಿಳಿಯುತ್ತದೆ. ಮಕ್ಕಳದ ಮುಖದ ಚಿತ್ರವೂ ಆ್ಯಪ್ ನಲ್ಲಿ ಅಪ್ಡೇಟ್ ಆಗುತ್ತದೆ. ಶಾಲೆಯಲ್ಲಿ ನಡೆಯುವ ಪಠ್ಯ, ದಿನದ ಪಾಠ, ಶಿಕ್ಷಕರ ವಿವರ ,ಸ್ಕೂಲ್ ಬಸ್‌ನ ವಿವರ ಎಲ್ಲವೂ ಆ್ಯಪ್ ನಲ್ಲಿ ಲಭ್ಯವಾಗುತ್ತದೆ..

ಜ್ಞಾನದೀಪ ಶಾಲೆ ಮತ್ತು ಸೂರಜ್ ಪಿಯು ಕಾಲೇಜಿನಲ್ಲಿ ಒಟ್ಟು 680 ವಿದ್ಯಾರ್ಥಿಗಳಿದ್ದು,ಶಿಕ್ಷಕರ ಸಹಿತ ಎಲ್ಲರ ದಿನದ ವಿವರ ಈ ಆ್ಯಪ್ ನಲ್ಲಿ ಲಭ್ಯವಾಗುತ್ತದೆ. ವಿದ್ಯಾರ್ಥಿಗಳು ಶಾಲೆಯಿಂದ ನಿರ್ಗಮಿಸಿದ ಮೆಸೇಜ್ ಕೂಡಾ ಹೆತ್ತವರಿಗೆ ಆ್ಯಪ್ ನಲ್ಲಿ ಗೊತ್ತಾಗಲಿದೆ.ಕರ್ನಾಟಕದಲ್ಲಿ ಮೊದಲ ಬಾರಿಗೆ ಮಂಗಳೂರಿನ ಕಾಲೇಜಿನಲ್ಲಿ ನೂತನ ಅವಿಷ್ಕಾರ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಈ ಐಡಿ ಕಾರ್ಡ್ ಬಗ್ಗೆ ಹೆತ್ತವರೂ ಮೆಚ್ಚುಗೆ ಸೂಚಿಸಿದ್ದಾರೆ. ಮಕ್ಕಳ ಪಿನ್ ಟು ಪಿನ್ ಮಾಹಿತಿ ಹೆತ್ತವರಿಗೆ ಲಭ್ಯ ಆಗಲಿದೆ. ಕಾಲೇಜುಗಳಲ್ಲಿ ಈ ಆ್ಯಪ್ ಬಳಕೆ ಪ್ರಯೋಜನಕಾರಿ ಯಾಗಲಿದೆ. ತರಗತಿ ಬಂಕ್ ಮಾಡಿ ಸುತ್ತಾಡುವ ವಿದ್ಯಾರ್ಥಿಗಳ ವಿವರ ಹೆತ್ತವರಿಗೆ ಸಿಗಲಿದೆ. ದೊಡ್ಡ ವಿದ್ಯಾರ್ಥಿ ಸಮೂಹ ಇರುವ ಶಾಲಾ-ಕಾಲೇಜುಗಳಿಗೆ ಈ ಆ್ಯಪ್ ಪ್ರಯೋಜನಕಾರಿ ಎಂದು ಹೆತ್ತವರು ಮೆಚ್ಚುಗೆ ಸೂಚಿಸಿದ್ದಾರೆ.

ತಮ್ಮ ಸಂಸ್ಥೆಯಲ್ಲಿನ ನೂತನ ಆ್ಯಪ್ ಬಳಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ರೇವಣ್ಕರ್, 'ಶಾಲೆಯ ಒಳಭಾಗದಲ್ಲಿ ಇಂಟರ್ನೆಟ್ ಮುಖಾಂತರ ನಡೆಯುವ ಪ್ರಕ್ರಿಯೆ ಇದು. ಮೊದಲು ಆರು ತಿಂಗಳು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮಾಡಿದ್ದೇವೆ. ಈ ಆ್ಯಪ್ ನಮಗೆ ಬಹಳ ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳ ಹಾಜರಾತಿಯೂ ಹೆಚ್ಚಳವಾಗಿದೆ. ಹೆತ್ತವರಿಗೂ ಮಕ್ಕಳ ಅಂಕಪಟ್ಟಿ ಈ ಆ್ಯಪ್ ಮೂಲಕವೇ ಸಿಗುತ್ತದೆ. ಎಲ್ಲಾ ಶಾಲಾ-ಕಾಲೇಜುಗಳಲ್ಲೂ ಈ ಆ್ಯಪ್ ಬಳಸಿದರೆ ಯುವ ಸಮೂಹ ಅನ್ಯ ದಾರಿ ಹಿಡಿಯೋದು ತಪ್ಪುತ್ತದೆ' ಎಂದು ಹೇಳಿದರು.












Click it and Unblock the Notifications