ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್ ಎಂ. ಆರ್. ಅಧಿಕಾರ ಸ್ವೀಕಾರ

ಮಂಗಳೂರು, ಸೆಪ್ಟೆಂಬರ್‌, 02; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ. ಆರ್. ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲೆಯ 131ನೇಯ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್ ವಹಿಸಿಕೊಂಡಿದ್ದಾರೆ.

ಡಾ. ರಾಜೇಂದ್ರ ಕೆ. ವಿ. ವರ್ಗಾವಣೆಯಿಂದ ಜಿಲ್ಲಾಧಿಕಾರಿ ಸ್ಥಾನ ತೆರವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ. ಆರ್. ರವಿಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ರವಿಕುಮಾರ್ 2012ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ. ವಿ. ಡಾ. ರಾಜೇಂದ್ರ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಥಾನವನ್ನು ಡಾ. ಕೆ. ವಿ. ರಾಜೇಂದ್ರ ಅವರು ತುಂಬಿದ್ದಾರೆ.

ಡಾ. ಕೆ.ವಿ.ರಾಜೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ 130ನೇ ಜಿಲ್ಲಾಧಿಕಾರಿಯಾಗಿ ಜುಲೈ 30, 2020ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಕೋವಿಡ್ ಸಂಕಷ್ಟ, ಜಲಪ್ರಳಯ, ಗಲಭೆಯಂತಹ ಸಂದಿಗ್ಧ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದರು. ಇದೀಗ ಜಿಲ್ಲೆಯ 131ನೇ ಜಿಲ್ಲಾಧಿಕಾರಿಯಾಗಿ ಎಂ. ಆರ್. ರವಿಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

ಐವರಿಗೆ ಹೆಚ್ಚುವರಿ ಹೊಣೆ

ಐವರಿಗೆ ಹೆಚ್ಚುವರಿ ಹೊಣೆ

ಆಡಳಿತ ಯಂತ್ರ ಚುರುಕುಗೊಳಿಸಲು ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರವು ಅಕ್ಟೋಬರ್‌ 21ರಂದು ಆದೇಶ ಹೊರಡಿಸಿತ್ತು. ಅದರಲ್ಲಿ ಐವರಿಗೆ ಹೆಚ್ಚುವರಿ ಹೊಣೆ ನೀಡಲಾಗಿತ್ತು. ಮುಖ್ಯವಾಗಿ ಮಂಡ್ಯ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಮೈಸೂರು ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಅನಿಲ್ ಕುಮಾರ್ ಟಿ.ಕೆ, ಡಾ. ಪ್ರಸಾದ್ ಎನ್.ವಿ, ಜಯರಾಂ ಎನ್, ಡಾ‌. ಕುಮಾರ್‌ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿತ್ತು.

ದ.ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಕೆ.ವಿ ರಾಜೇಂದ್ರ

ದ.ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಕೆ.ವಿ ರಾಜೇಂದ್ರ

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ವರ್ಗಾವಣೆಯಾಗಿದ್ದು, ಡಾ. ರಾಜೇಂದ್ರ ಕೆ. ವಿ. ಹೊಸ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದರು. ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ಕ್ರೀಡಾ ಇಲಾಖೆಗೆ ವರ್ಗಾವಣೆ ಆಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ ಆಗಿರುವ ಡಾ‌. ಕುಮಾರ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿತ್ತು.

ಯಾವ ಅಧಿಕಾರಿಗಳು ಎಲ್ಲಿಗೆ ವರ್ಗಾವಣೆ?

ಯಾವ ಅಧಿಕಾರಿಗಳು ಎಲ್ಲಿಗೆ ವರ್ಗಾವಣೆ?

ಡಾ. ಬಗಾದಿ ಗೌತಮ್-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಶ್ರೀವಿದ್ಯಾ ಪಿ.ಐ - ಸಿಇಓ,ಇ-ಆಡಳಿತ ಕೇಂದ್ರ ಬೆಂಗಳೂರು
ರಮೇಶ್ ಡಿ.ಎಸ್- ಜಿಲ್ಲಾಧಿಕಾರಿ, ಚಾಮರಾಜನಗರ
ಡಾ. ಗೋಪಾಲಕೃಷ್ಣ ಹೆಚ್.ಎನ್- ಜಿಲ್ಲಾಧಿಕಾರಿ, ಮಂಡ್ಯ
ಜಾನಕಿ ಕೆ.ಎಂ- ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ
ಡಾ. ರಾಜೇಂದ್ರ ಕೆ.ವಿ- ದಕ್ಷಿಣ ಕನ್ನಡದಿಂದ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಟ್ರಾನ್ಸ್​ಫರ್ ಮಾಡಲಾಗಿದೆ.
ಅಶ್ವಥಿ ಎಸ್- ಆಯುಕ್ತೆ, ಪಶು ಸಂಗೋಪನಾ ಇಲಾಖೆ
ಮುಲ್ಲೈ ಮುಹಿಲನ್ - ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಇವರು ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆಯಾಗಿದ್ದಾರೆ.
ಪ್ರಭುಲಿಂಗ್ ಕವಳಿಕಟ್ಟಿ-ಜಿಲ್ಲಾಧಿಕಾರಿ, ಉತ್ತರ ಕನ್ನಡ
ಎಂ.ಎಸ್. ದಿವಾಕರ-ಜಿ.ಪಂ. ಸಿಇಒ, ಚಿತ್ರದುರ್ಗ
ದಿವ್ಯಪ್ರಭು ಜಿ.ಆರ್.ಜೆ.- ಜಿಲ್ಲಾಧಿಕಾರಿ, ಚಿತ್ರದುರ್ಗ
ನಳಿನಿ ಅತುಲ್- ಅಧ್ಯಕ್ಷ, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ
ರಘುನಂದನ್ ಮೂರ್ತಿ- ಜಿಲ್ಲಾಧಿಕಾರಿ, ಹಾವೇರಿ
ಭನ್ವರ್ ಸಿಂಗ್ ಮೀನಾ- ನಿಯಂತ್ರಕ, ಕೆಪಿಎಸ್ ಸಿ
ಪ್ರಕಾಶ್ ಜಿ.ಟಿ.- ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಡಾ. ಆಕಾಶ್ ಎಸ್.- ಸಿಇಓ, ಜಿ.ಪಂ. ಕೊಡಗು
ಕಪಿಲ್ ಮೋಹನ್- ಎಸಿಎಸ್, ಪ್ರವಾಸೋದ್ಯಮ ಇಲಾಖೆ

ಹೆಚ್ಚುವರಿ ಹೊಣೆ ಹೊತ್ತ ಅಧಿಕಾರಿಗಳ ವಿವರ

ಹೆಚ್ಚುವರಿ ಹೊಣೆ ಹೊತ್ತ ಅಧಿಕಾರಿಗಳ ವಿವರ

ಅನಿಲ್ ಕುಮಾರ್ ಟಿ.ಕೆ.- ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ( ಹೆಚ್ಚುವರಿ ಹೊಣೆ) ಅನಿಲ್ ಕುಮಾರ್ ಹಾಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇನ್ನು ಡಾ. ಪ್ರಸಾದ್ ಎನ್.ವಿ.- ಕಾರ್ಯದರ್ಶಿ, ಕಾರ್ಮಿಕ ಇಲಾಖೆ (ಹೆಚ್ಚುವರಿ ಹೊಣೆ) ಪ್ರಸಾದ್​ ಹಾಲಿ ಸಾರಿಗೆ ಇಲಾಖೆ ಕಾರ್ಯದರ್ಶಿಯಾಗಿದ್ದಾರೆ. ಜಯರಾಂ ಎನ್. - ಕಾರ್ಯದರ್ಶಿ, ಕಂದಾಯ ಇಲಾಖೆ (ಹೆಚ್ಚುವರಿ ಹೊಣೆ) ಜಯರಾಂ ಹಾಲಿ ಜಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷರಾಗಿದ್ದಾರೆ. ಡಾ‌. ಕುಮಾರ- ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ( ಹೆಚ್ಚುವರಿ ಹೊಣೆ) ಡಾ‌. ಕುಮಾರ ಹಾಲಿ ದಕ್ಷಿಣ ಕನ್ನಡ ಜಿ.ಪಂ. ಸಿಇಒ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+