ಕರಾವಳಿಯಲ್ಲಿ 'ಗಾಂಧಿ ಬಂದ' ಯಶಸ್ವಿ ಶೋ
ಮಂಗಳೂರು, ಏ.28: ಡಾ.ಎಚ್.ನಾಗವೇಣಿ ಬರೆದಿರುವ 'ಗಾಂಧಿ ಬಂದ' ಕಾದಂಬರಿ ಆಧಾರಿತ ನಾಟಕವನ್ನು ಬೆಂಗಳೂರಿನ ರಂಗಮಂಟಪ ತಂಡ ಮಂಗಳೂರಿನ ಬಂಟ್ಸ್ ಹಾಸ್ಟೇಲಿನ ಎ.ಬಿ ಶೆಟ್ಟಿ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದರು. ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಈ ನಾಟಕ ಪ್ರದರ್ಶನಗೊಂಡಿದ್ದು ಮೊದಲ ಯತ್ನದಲ್ಲೇ ಜನ ಮೆಚ್ಚುಗೆಗಳಿಸಿದೆ.
ಡಾ.ಎಚ್.ನಾಗವೇಣಿಯವರ ಕಾದಂಬರಿ ಗಾಂಧಿ ಬಂದ ಮಹಾನ್ ಕೃತಿಯಾಗಿ ಸಾಹಿತ್ಯವಲಯದಲ್ಲಿ ಭಾರಿ ಚರ್ಚೆಗೊಳಗಾಗಿದೆ. ಆದರೆ, ಮಂಗಳೂರು ವಿವಿಯಲ್ಲಿ ಪಠ್ಯವಾಗುವ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದವರು ಕೃತಿಯ ನಿಷೇಧಕ್ಕೆ ಆಗ್ರಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವರಾಯರ ಹೆಸರು ವಿವಾದದಲ್ಲಿ ಕೇಳಿ ಬಂದಿತ್ತು. ಜಿಲ್ಲೆಯಲ್ಲಿರುವ ಜಾತಿಭೇದ, ಮಠಗಳಲ್ಲಿನ ಪಂಕ್ತಿಭೇದದ ಬಗ್ಗೆ ಉಲ್ಲೇಖವಿದೆ. ವಿಶ್ವಕರ್ಮ ಸಮುದಾಯದವರು ಮೇಲ್ವರ್ಗದ ಜತೆ ಪಂಕ್ತಿಯಲ್ಲಿ ಊಟಕ್ಕೆ ಕೂರಲು ಆಕ್ಷೇಪ ವ್ಯಕ್ತಪಡಿಸುವ ಸನ್ನಿವೇಶವೂ ಇದೆ. ಹಲವಾರು ಪ್ರಶ್ನೆಗಳಿಗೆ ಉತ್ತರವೂ ಇದೆ.
ಚಂಪಾಶೆಟ್ಟಿ ನಿರ್ದೇಶನ ಮತ್ತು ಪ್ರಕಾಶ್ ಶೆಟ್ಟಿ ಸುರತ್ಕಲ್ ಇವರ ಸಾರಥ್ಯದಲ್ಲಿ 'ಗಾಂಧಿಬಂದ' ಈಗ ಜಿಲ್ಲೆ, ರಾಜ್ಯ ಹೊರರಾಜ್ಯಗಳಲ್ಲಿ ಪ್ರದರ್ಶನಗೊಂಡು ಸುದ್ದಿ ಮಾಡಿದೆ. 'ಗಾಂಧಿಬಂದ' ನಾಟಕ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಕಳೆದ ವಾರಾಂತ್ಯದಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಎ.ಬಿ.ಶೆಟ್ಟಿ ಆಡಿಟೋರಿಯಂನಲ್ಲಿ ಪ್ರದರ್ಶನಗೊಂಡಿದೆ. ಗಾಂಧಿ ಬಂದ ನಾಟಕದ ಚಿತ್ರಗಳು ಹಾಗೂ ನಾಟಕದ ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ಲೇಖಕಿ ನಾಗವೇಣಿ ಅವರನ್ನು ಸನ್ಮಾನಿಸಿದ ಚಿತ್ರಗಳು ಮುಂದಿವೆ ನೋಡಿ...

ನಿರ್ದೇಶಕಿ ಚಂಪಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
ಬಂಟರ ಯಾನೆ ನಾಡವರ ಮಾತೃಸಂಘದ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಬಂಟ್ಸ್ ಹಾಸ್ಟೆಲಿನ ಎ.ಬಿ.ಶೆಟ್ಟಿ ಹಾಲ್‍ನಲ್ಲಿ ನಡೆದ ಗಾಂಧಿಬಂದ ನಾಟಕದ ಪ್ರದರ್ಶನದ ಸಂದರ್ಭದಲ್ಲಿ ನಿರ್ದೇಶಕಿ ಚಂಪಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮೂಲ ಕಾದಂಬರಿ ಲೇಖಕಿ ಡಾ.ಎಚ್.ನಾಗವೇಣಿ ಸಂಚಾಲಕ ಜಯರಾಮ ಸಾಂತ, ವಿಜಯಕುಮಾರ್ ಕೊಡಿಯಾಲ್ ಬೈಲ್, ಚಂಪಾ ಶೆಟ್ಟಿ, ಉಮೇಶ್ ರೈ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.

ಡಾ.ಎಚ್.ನಾಗವೇಣಿ ಅವರನ್ನು ಸನ್ಮಾನಿಸಲಾಯಿತು
ಬಂಟರ ಯಾನೆ ನಾಡವರ ಮಾತೃಸಂಘದ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಬಂಟ್ಸ್ ಹಾಸ್ಟೆಲಿನ ಎ.ಬಿ.ಶೆಟ್ಟಿ ಹಾಲ್ ನಲ್ಲಿ ನಡೆದ ಗಾಂಧಿಬಂದ ನಾಟಕದ ಪ್ರದರ್ಶನದ ಸಂದರ್ಭದಲ್ಲಿ ಮೂಲ ಕಾದಂಬರಿ ಲೇಖಕಿ ಡಾ.ಎಚ್.ನಾಗವೇಣಿ ಅವರನ್ನು ಸನ್ಮಾನಿಸಲಾಯಿತು. ಸಂಚಾಲಕ ಜಯರಾಮ ಸಾಂತ, ವಿಜಯಕುಮಾರ್ ಕೊಡಿಯಾಲ್ ಬೈಲ್, ಚಂಪಾ ಶೆಟ್ಟಿ, ಉಮೇಶ್ ರೈ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.

‘ಗಾಂಧಿ ಬಂದ' ಕಾದಂಬರಿ ಆಧಾರಿತ ನಾಟಕ
ಡಾ. ಎಚ್. ನಾಗವೇಣಿ ಅವರ 'ಗಾಂಧಿ ಬಂದ' ಕಾದಂಬರಿ ಆಧಾರಿತ ನಾಟಕವನ್ನು ಬೆಂಗಳೂರಿನ 'ರಂಗಮಂಟಪ' ತಂಡದವರು ಮಂಗಳೂರಿನ ಬಂಟ್ಸ್ ಹಾಸ್ಟೇಲಿನ ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಪ್ರದರ್ಶಿಸಿದರು.

ಹಲವೆಡೆ ಯಶಸ್ವಿ ಪ್ರದರ್ಶನ ಕಂಡಿದೆ
ಚಂಪಾಶೆಟ್ಟಿ ನಿರ್ದೇಶನ ಮತ್ತು ಪ್ರಕಾಶ್ ಶೆಟ್ಟಿ ಸುರತ್ಕಲ್ ಇವರ ಸಾರಥ್ಯದಲ್ಲಿ ಮೊದಲ ಬಾರಿಗೆ ತುಳುನಾಡನ್ನು ಈ ನಾಟಕ ಪ್ರವೇಶಿಸಿದೆ. ಬೆಂಗಳೂರು, ಮುಂಬೈ, ದೆಹಲಿ, ಒರಿಸ್ಸಾಗಳಲ್ಲಿ ಈ ನಾಟಕ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡಿದೆ.

ನಾಗವೇಣಿಯವರ ಕಾದಂಬರಿ ಗಾಂಧಿ ಬಂದ
ತುಳು ಜಿಲ್ಲೆಗೆ ಗಾಂಧಿ ಬಂದ ವಿಷಯವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಈ ನಾಟಕ ನಮ್ಮ ಸಾಮಾಜಿಕ ಸಾಂಸ್ಕೃತಿಕ ಲೋಕವನ್ನು ನಮ್ಮೆದುರು ತೆರೆದಿಟ್ಟಿರುವ ಪರಿ ಅಗಾಧವಾಗಿದೆ. ಎಂಭತ್ತು ವರ್ಷಗಳ ಹಿಂದಿನ ತುಳು ಸಮಾಜದ ಸಂಸ್ಕೃತಿಯನ್ನು, ಜಾತಿ ತಾರತಮ್ಯವನ್ನು, ವರ್ಗ ಬೇಧವನ್ನು, ಬಡತನವನ್ನು ಸಾಮಾನ್ಯ ಪ್ರೇಕ್ಷಕನು ಅರ್ಥೈಸುವಂತೆ ನಿರ್ದೇಶಕಿ ಚಂಪಾಶೆಟ್ಟಿಯವರು ನಿರೂಪಿಸಿದ್ದಾರೆ. ಕೋಲ, ಕಂಬಳ, ಕಂಗಿಲೂಗಳನ್ನೂ ಈ ನಾಟಕದಲ್ಲಿ ಸಂಯೋಜಿಸಿದ್ದಾರೆ.

ಗಾಂಧೀಜಿಯವರ ಬದುಕು, ಆದರ್ಶ, ತತ್ವ
ಎಂದಿಗಿಂತ ಇಂದು ಗಾಂಧೀಜಿಯವರ ಬದುಕು, ಆದರ್ಶ, ತತ್ವ, ಚಿಂತನೆಗಳು ನಮ್ಮ ಸಮಾಜ ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳಿಗೆ ಉತ್ತರದಾಯಿಯಾಗಬಹುದು. ಸ್ತ್ರೀ ಸ್ವಾತಂತ್ರ್ಯ, ಆಕೆಯ ಬೇಕು ಬೇಡಗಳ ಬಗ್ಗೆ, ಅದು ಬದಲಾಗಬೇಕಾದ ಅಗತ್ಯಗಳ ಬಗ್ಗೆ ನಾಟಕ ಚರ್ಚಿಸುತ್ತದೆ. ಸಮಾಜದ ಕೆಳಸ್ತರದ ಜನರಲ್ಲಿ ಗಾಂಧೀಜಿಯವರು ಮೂಡಿಸಿದ ಸಂಚಲನ ನಾಟಕದ ಗಾಂಭಿರ್ಯವನ್ನು ಹೆಚ್ಚಿಸಿದೆ.

ನಮ್ಮನ್ನೆ ನಾವು ಹುಡುಕುವಂತೆ ಮಾಡುತ್ತದೆ
ಈ ರಂಗಕೃತಿ ಒಂದು ನಿರ್ದಿಷ್ಟ ಅಂಶವನ್ನು ಪ್ರತಿಪಾದಿಸುತ್ತಲೇ, ಸಾಮಾಜಿಕ ಪರಿವರ್ತನೆಯತ್ತ ತನ್ನನ್ನು ಒಡ್ಡಿಕೊಂಡಿದೆ.ನಾಟಕದ ಮೊದಲಿನಿಂದ ಕೊನೆಯವರೆಗೂ ನೇಪತ್ಯದಲ್ಲೇ ಇದ್ದು ಪ್ರೇಕ್ಷಕರ ಕಣ್ಣಿಗೆ ಕಾಣಸಿಗದೆ ಜುಮಾದಿ ಭೂತದ ರೂಪದಲ್ಲೂ, ಕಂಗಿಲೂ ರೂಪದಲ್ಲೂ, ಜೋಗಿ ಪುರುಷನಂತೆ ರಂಗಕ್ಕೆ ಬಂದು ಮಾಯವಾಗುವ ಗಾಂಧಿಯನ್ನು ಚಂಪಾಶೆಟ್ಟಿ ಉತ್ತಮವಾಗಿ ಕಲ್ಪಿಸಿದ್ದಾರೆ. ಪ್ರತಿ ಪಾತ್ರದಲ್ಲೂ ನಮ್ಮನ್ನೆ ನಾವು ಹುಡುಕುವಂತೆ ಪ್ರೇರೇಪಿಸಿದ್ದಾರೆ.












Click it and Unblock the Notifications