ಕೊಲೆ ಬೆದರಿಕೆ ಕೇಸ್: ನಟ ವಿನೋದ್ ಆಳ್ವಾಗೆ ಜಾಮೀನು
ಪುತ್ತೂರು, ಡಿ.1: ಕೊಲೆ ಯತ್ನ ಸಂಚು ಆರೋಪ ಹೊತ್ತಿರುವ ಚಿತ್ರ ನಟ ವಿನೋದ್ ಆಳ್ವ ಅವರಿಗೆ ಮಂಗಳವಾರ ಜಾಮೀನು ಸಿಕ್ಕಿದೆ. ಜಾಮೀನು ಅರ್ಜಿ ಹಾಗೂ ಪೊಲೀಸ್ ಕಸ್ಟಡಿ ತೀರ್ಪನ್ನು ನ.30ಕ್ಕೆ ಮುಂದೂಡಿ ಪುತ್ತೂರು ಜಿಲ್ಲಾ ಐದನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಟ ವಿನೋಡ್ ಆಳ್ವಾಗೆ ಜಾಮೀನು ಮಂಜೂರು ಮಾಡಿದೆ.
ಮಾಜಿ ಕೆಲಸಗಾರನ ಕೊಲೆ ಯತ್ನ ಸಂಚು ನಡೆಸಿದ ಆರೋಪದ ಮೇಲೆ ವಿನೋದ್ ಆಳ್ವ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಈಶ್ವರಮಂಗಲದಲ್ಲಿ ಮಾಜಿ ಕೆಲಸಗಾರ ಸಚ್ಚಿದಾನಂದರ ಬೈಕ್‌ಗೆ ಜೀಪ್ ಢಿಕ್ಕಿ ಹೊಡೆಸಿ ಕೊಲೆ ನಡೆಸುವ ಸಂಚು ರೂಪಿಸಿದ ಆರೋಪದಲ್ಲಿ ವಿನೋದ್ ಆಳ್ವ ಅವರ ಬಂಧನವಾಗಿತ್ತು.

ಜಾಮೀನು ಅರ್ಜಿ ಹಾಗೂ ಪೊಲೀಸ್ ಕಸ್ಟಡಿ ಪ್ರಶ್ನಿಸಿ ಸಲ್ಲಿಸಲಾಗಿರುವ ಎರಡು ಅರ್ಜಿಗಳ ಕುರಿತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ಮತ್ತು ಆರೋಪಿ ಪರ ವಾದ ಮಂಡನೆಯಾಗಿತ್ತು. ಬಳಿಕ ಪ್ರಕರಣದ ತೀರ್ಪನ್ನು ಡಿ.1ಕ್ಕೆ ಮುಂದೂಡಲಾಗಿತ್ತು.












Click it and Unblock the Notifications