ಪೌರೋಹಿತ್ಯದಲ್ಲಿ ಯಶಸ್ಸು ಸಾಧಿಸಿದ ಬಂಟ್ವಾಳದ ಪಿಯು ವಿದ್ಯಾರ್ಥಿನಿ!
ಮಂಗಳೂರು, ಜೂನ್ 28; ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಾಟಿಯಾಗಿ ಸಾಧನೆ ಮಾಡುತ್ತಿದ್ದಾರೆ. ಆದರೆ ವೇದ, ಶಾಸ್ತ್ರ, ಸಂಸ್ಕೃತ, ಪೌರೋಹಿತ್ಯ ಪುರುಷರಿಗೆ ಮಾತ್ರ ಸೂಕ್ತ ಎಂದು ನಾವು ನಂಬಿದ್ದೇವೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಸುಲಲಿತವಾಗಿ ವೇದ, ಮಂತ್ರೋಚ್ಛಾರಗಳನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಬಂಟ್ವಾಳದ ಕಶೆಕೋಡಿ ನಿವಾಸಿ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್ ಪುತ್ರಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನಘಾ ವೇದಾಧ್ಯಯನ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯಲ್ಲಿ ಪ್ರತಿದಿನ ನಡೆಯುವ ಸಂಗೀತ ಪಾಠ, ಗೀತಾಧ್ಯಯನದಿಂದ ಆಕರ್ಷಿತರಾದ ಅನಘಾ ವೇದಾಧ್ಯಯನದಲ್ಲಿ ಕೂಡಾ ಮಹಿಳೆಯರು ಸಾಧನೆ ಮಾಡಬಹುದು ಎಂದು ನಿರೂಪಿಸಿದ್ದಾರೆ.

ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿರುವ ಅನಘಾ ಪೌರೋಹಿತ್ಯವನ್ನು ಮಾಡುತ್ತಿದ್ದಾರೆ. ಮನೆಯಲ್ಲಿನಿತ್ಯ ನಡೆಯುವ ಪೂಜೆ, ಹೋಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಚಿಕ್ಕಂದಿನಿಂದಲೇ ಪೌರೋಹಿತ್ಯ, ವೇದಾಧ್ಯಯನ, ವೈದಿಕ ಕಾರ್ಯಕ್ರಮಗಳಲ್ಲಿ ವಿಶೇಷ ಅಸಕ್ತಿ ಹೊಂದಿರುವ ಅನಘಾಗೆ ಮನೆಯ ವೈದಿಕ ಪರಿಸರವೇ ಮುಖ್ಯ ಪ್ರೇರಣೆಯಾಗಿದೆ. ಸಂಸ್ಕೃತ ದಲ್ಲಿ ವ್ಯಾಸಾಂಗ ಮಾಡಬೇಕೆಂಬ ಆಸೆಯನ್ನು ಅನಘಾ ಹೊಂದಿದ್ದಾರೆ.












Click it and Unblock the Notifications