ಶಬರಿಮಲೆ ತೀರ್ಪಿನ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು, ಅಕ್ಟೋಬರ್. 10: ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲೂ ವಿರೋಧದ ಕೂಗು ಬಲಪಡೆಯುತ್ತಿದೆ. ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ಮತ್ತು ಹಿಂದೂ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಸಂಜೆ (ಅ.09) ಮಂಗಳೂರಿನ ಕದ್ರಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆದಿದೆ.

ಸಭೆಯಲ್ಲಿ ನೂರಾರು ಮಂದಿ ಮಹಿಳೆಯರು, ಅಯ್ಯಪ್ಪ ಸ್ವಾಮಿ ಭಕ್ತರು ಭಾಗವಹಿಸಿ ಸುಪ್ರೀಂ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿ ಪ್ಲೆಕ್ ಕಾರ್ಡ್ ಗಳನ್ನು ಹಿಡಿದು ಸೇವ್ ಶಬರಿಮಲೆ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಅಯ್ಯಪ್ಪ ಸ್ವಾಮಿಯ ಶರಣು ಘೋಷ, ಭಕ್ತಿಗೀತೆಗಳನ್ನು ಹಾಡಲಾಯಿತು.

Protest against Sabarimala verdict held on Tuesday

ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಹಿಂದೂ‌ ಸಂಘಟನೆ ಗಳ ಮುಖಂಡರು ಶಬರಿ ಮಲೆ ಅತ್ಯಂತ ಪರಿಶುದ್ಧ ಕ್ಷೇತ್ರವಾಗಿದೆ. ಮಹಿಳೆಯರ ಪ್ರವೇಶ ವಿಚಾರವನ್ನಿಟ್ಟುಕೊಂಡು ಹಿಂದೂ ಧರ್ಮ ಒಡೆಯುವ ಕೆಲಸವಾಗುತ್ತಿದೆ. ಕೇರಳ ಜನ ಈಗಾಗಲೇ ಆಂದೋಲನ ನಡೆಸುತ್ತಿದ್ದು, ಕೇರಳದ ಜನರ ಜೊತೆ ಮಂಗಳೂರಿಗರು ಕೈಜೋಡಿಸುವುದಾಗಿ ತಿಳಿಸಿದ್ದಾರೆ.

Protest against Sabarimala verdict held on Tuesday

ಸುಪ್ರೀಂ ಕೋರ್ಟ್ ಆದೇಶದ ಕುರಿತು ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿ ಮಧ್ಯ ಪ್ರವೇಶಿಸಿ ಜನರ ನಂಬಿಕೆಯನ್ನು ಉಳಿಸಬೇಕಾಗಿ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+