'ಪಿಣರಾಯಿ ಬಂದರೆ ತೊಂದರೆ ಗ್ಯಾರಂಟಿ' ಜಗದೀಶ್ ಶೇಣವ ಎಚ್ಚರಿಕೆ
ಫೆಬ್ರವರಿ 25 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ 'ಸೌಹಾರ್ದ ಐಕ್ಯತಾ ರ್ಯಾಲಿ 'ಗೆ ಪಿಣರಾಯಿ ವಿಜಯನ್ ಬಂದರೆ 'ತೊಂದರೆಯಾಗುವುದು ಗ್ಯಾರೆಂಟಿ' ಅಂತ ವಿಎಚ್‍ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಎಚ್ಚರಿಸಿದ್ದಾರೆ.
ಮಂಗಳೂರು, ಫೆಬ್ರವರಿ 23: ಫೆಬ್ರವರಿ 25 ರಂದು ಸಿಪಿಎಂ ಪಕ್ಷದ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ 'ಸೌಹಾರ್ದ ಐಕ್ಯತಾ ರ್ಯಾಲಿ ' ನಡೆಯಲಿದೆ. ಈ ಸಮಾವೇಶಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಬಂದರೆ 'ತೊಂದರೆಯಾಗುವುದು ಗ್ಯಾರೆಂಟಿ' ಅಂತ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಎಚ್ಚರಿಕೆ ನೀಡಿದ್ದಾರೆ.
ಪಿಣರಾಯಿ ಮಂಗಳೂರು ಭೇಟಿ ವಿರೋಧಿಸಿ ಫೆಬ್ರವರಿ 24 ರ ಶುಕ್ರವಾರ ವಿವಿಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಜೊತೆಗೆ ಹರತಾಳ ನಡೆಸಲಿವೆ. ಈ ಕುರಿತು ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ' ಒನ್ ಇಂಡಿಯಾ' ಜೊತೆ ಮಾತನಾಡಿದ್ದಾರೆ.[ದಕ್ಷಿಣ ಕನ್ನಡ ಬಂದ್ ಬಿಸಿ ಹೆಚ್ಚಳ : ಮದ್ಯ ಮಾರಾಟ ನಿಷೇಧ]

ಒನ್ ಇಂಡಿಯಾ: ಪಿಣರಾಯಿ ಭೇಟಿಗೆ ನೀವು ವಿರೋಧ ವ್ಯಕ್ತಪಡಿಸುವುದ್ಯಾಕೆ..?
ಜಗದೀಶ್ : ಕೇರಳ ಸಿಎಂ ಪಿಣರಾಯಿ ವಿಜಯನ್ 11 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅವರು ಓರ್ವ ಕೊಲೆಗಾರ. ಕೇರಳದಲ್ಲಿ ಸಂಘ ಪರಿವಾರದವರಿಗೆ ರಕ್ಷಣೆ ನೀಡಲು ಅವರಿಂದಾಗುತ್ತಿಲ್ಲ. ಸರಣಿ ರೂಪದಲ್ಲಿ ನಮ್ಮವರ ಕೊಲೆ ನಡೆಯುತ್ತಿದೆ. ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವವರಿಂದ ಸೌಹಾರ್ದದ ಪಾಠ ಕಲಿಯುವ ಅಗತ್ಯವಿಲ್ಲ.[ಉಳ್ಳಾಲ ವಲಯದ ಸಿಪಿಐಂ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ]
ಒನ್ ಇಂಡಿಯಾ: ಕೇರಳ ಪೊಲೀಸ್ ವ್ಯವಸ್ಥೆ ಸರಿ ಇಲ್ವಾ..?
ಜಗದೀಶ್: ಹೌದು. ಕೇರಳದಲ್ಲಿ ಪೊಲೀಸ್ ವ್ಯವಸ್ಥೆ ಸರಿ ಇಲ್ಲ. ಕೇರಳದಲ್ಲಿ ಗೂಂಡಾ ರಾಜಕೀಯ ಹೆಚ್ಚಾಗುತ್ತಿದೆ. ತರಗತಿಯಲ್ಲಿರುವಾಗಲೇ ಜಯಕೃಷ್ಣ ಮಾಸ್ಟರ್ ಎಂಬವರನ್ನು ವಿದ್ಯಾರ್ಥಿಗಳ ಎದುರೇ ಕೊಲೆ ಮಾಡಲಾಯಿತು. ಅಷ್ಟೇ ಅಲ್ಲ, ಸಿಪಿಎಂನವರು ತಂದೆ, ಮಗ ಹೀಗೆ ಅನೇಕರನ್ನು ಕೊಂದಿದ್ದಾರೆ. ಒಂದು ರೀತಿಯಲ್ಲಿ ಕೇರಳದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ.
ಒನ್ ಇಂಡಿಯಾ: ಕೊಲೆ, ಗೂಂಡಾಗಿರಿ ಹಿಂದೆ ಪಿಣರಾಯಿ ಕೈವಾಡ ಇದೆ ಅಂತೀರಾ..?
ಜಗದೀಶ್: ಹೌದು. ಕೇರಳದಲ್ಲಿ ಕೊಲೆ, ಸಂಘ ಪರಿವಾರದವರ ಮೇಲೆ ಆಗುತ್ತಿರುವ ಹಲ್ಲೆ, ದೌರ್ಜನ್ಯದ ಹಿಂದೆ ಪಿಣರಾಯಿ ಕೈವಾಡ ಇದೆ. ಅವರ ಆದೇಶದಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ.
ಒನ್ ಇಂಡಿಯಾ: ನಿಮ್ಮ ವಿರೋಧದ ಮಧ್ಯೆಯೂ ಪಿಣರಾಯಿ ಮಂಗಳೂರಿಗೆ ಬಂದರೆ ಏನಾಗಬಹುದು..?
ಜಗದೀಶ್: ಖಂಡಿತಾ ತೊಂದರೆಯಾಗುತ್ತದೆ. ನಮ್ಮ ಆಕ್ರೋಶ ಮತ್ತಷ್ಟು ತೀವ್ರಗೊಳ್ಳುತ್ತದೆ. ನೋಡಿ, ಸೈದ್ದಾಂತಿಕವಾಗಿ ಕೇರಳದಲ್ಲಿ ಸಿಪಿಎಂನವರು ಕಾಂಗ್ರೆಸ್, ಮುಸ್ಲಿಂ ಲೀಗ್ ನವರನ್ನು ಕೊಲೆ ಮಾಡಿದರೆ, ಪಿಣರಾಯಿ ರಾಜಕೀಯವಾಗಿ ಸಂಘ ಪರಿವಾರದವರನ್ನು ಕೊಲೆ ಮಾಡಿಸಿದ್ದಾರೆ. ಕೇರಳದಲ್ಲಿ ಈಗ ಏನ್ ನಡೆಯುತ್ತಿದೆಯೋ ಅದರ ಹಿಂದೆ ಪಿಣರಾಯಿ ' ಆದೇಶ' ವಿರುತ್ತೆ. ಕೊಲೆ, ಹಲ್ಲೆ ಹಿಂದಿರುವ ಪಿಣರಾಯಿ ಭೇಟಿಗೆ ನಮ್ಮ ವಿರೋಧವಿದೆ.












Click it and Unblock the Notifications