ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಬೆಂಬಲವಿಲ್ಲ

|
Google Oneindia Kannada News

Recommended Video

Bharat Bandh: ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಬೆಂಬಲವಿಲ್ಲ | Oneindia Kannada

ಮಂಗಳೂರು, ಜನವರಿ 07: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್ ನ ಬಿಸಿ ಕರಾವಳಿಗೆ ತಟ್ಟುವ ಲಕ್ಷಣಗಳು ಕಂಡು ಬರುತ್ತಿಲ್ಲ. ನಾಳೆ ಜನವರಿ 8 ಮತ್ತು 9 ರಂದು ಕರೆ ನೀಡಲಾಗಿರುವ ಭಾರತ್ ಬಂದ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ಆದರೆ ನಾಳಿನ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಿಕ್ಷಾ ಚಾಲಕರ ಸಂಘ, ಅಸಂಘಟಿತ ಸಾರಿಗೆ ಕಾರ್ಮಿಕರ ಸಂಘಟನೆ ಈಗಾಗಲೇ ಬೆಂಬಲ ಸೂಚಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ನಾಳೆ ನಾಡಿದ್ದು ಮುಷ್ಕರ: ಖಾಸಗಿ ಶಾಲೆಗಳಿಗೆ ರಜೆ, ಬ್ಯಾಂಕ್ ಕೂಡ ಬಂದ್?ನಾಳೆ ನಾಡಿದ್ದು ಮುಷ್ಕರ: ಖಾಸಗಿ ಶಾಲೆಗಳಿಗೆ ರಜೆ, ಬ್ಯಾಂಕ್ ಕೂಡ ಬಂದ್?

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರು ಬೆಂಬಲ ನೀಡದಿರಲು ತೀರ್ಮಾನಿಸಿದ್ದಾರೆ. ಈ ಕುರಿತು ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮತ್ತು ನಾಡಿದ್ದು ಮಂಗಳೂರು ಸೇರಿದಂತೆ ಜಿಲ್ಲೆಯ ಇತರೆಡೆ ಎಂದಿನಂತೆ ಖಾಸಗಿ ಬಸ್ ಸಂಚಾರ ಇರಲಿದೆ.

Private Bus owners association decided not support to the bundh in Dakshina Kannada

ನಾಳಿನ ಮುಷ್ಕರಕ್ಕೆ ಕಮ್ಯುನಿಸ್ಟ್ ಬೆಂಬಲಿತ ಕಾರ್ಮಿಕ ಸಂಘಟನೆಗಳು ಮಾತ್ರ ಬೆಂಬಲ ಸೂಚಿಸಿವೆ. ಅದಲ್ಲದೇ ಬೀದಿ ಬದಿ ವ್ಯಾಪಾರಸ್ಥರ ಸಂಘ ಬಂದ್ ಗೆ ಬೆಂಬಲ ಸೂಚಿಸಿದೆ. ಕೆ ಎಸ್ ಆರ್ ಟಿಸಿ ಬಸ್ ಸಂಚಾರ ವಿರಳವಾಗುವ ಸಾಧ್ಯತೆ ಇದೆ.

 ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ? ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ?

ನಾಳೆ ಹಾಗೂ ನಾಡಿದ್ದು ಪರಿಸ್ಥಿತಿಯನ್ನು ಅವಲೋಕಿಸಿ ಮಂಗಳೂರು ಕೆ ಎಸ್ ಆರ್ ಟಿ ಸಿ ವಿಭಾಗದಿಂದ ಬಸ್ ಗಳು ರಸ್ತೆಗೆ ಇಳಿಯಲಿವೆ ಎಂದು ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಅಂದಹಾಗೆ ನಾಳಿನ ಮುಷ್ಕರಕ್ಕೆ ಜಿಲ್ಲಾ ರಿಕ್ಷಾ ಚಾಲಕರ ಸಂಘ ಸಿಪಿಐ(ಎಂ), ಭಾತರ ಕಮ್ಯುಸಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಸಿಪಿಐ ಬೆಂಬಲ ಸೂಚಿಸಿದೆ.

 ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ? ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?

ಮೋಟರ್ ಟ್ರಾನ್ಸ್ ಪೋರ್ಟ್ ಆಂಡ್ ಎಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ಬೆಂಬಲಿತ ಕಾರ್ಮಿಕ ಸಂಘಟನೆ, ದಕ್ಷಿಣ ಕನ್ನಡ ಜಿಲ್ಲಾ ಡಿ ವೈ ಎಫ್ ಐ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ( ಹಸಿರು ಸೇನೆ), ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ( ಜೆ ಸಿ ಟಿ ಯು) , ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪಿಂಚಣಿದಾರರ ಸಂಘ, ಅಖಿಲ ಭಾರತ ಬೀಡಿ ಫೆಡರೇಶನ್ (ಸಿ ಐ ಟಿ ಯು ) ಸೇರಿದಂತೆ ವಿವಿಧ ಸಂಘಟನೆಗಳು ನಾಳಿನ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

English summary
Private Bus owners association decided not support to the bundh in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X