ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಪುರೋಹಿತರ ಹನಿಟ್ರ್ಯಾಪ್; 49 ಲಕ್ಷ ರೂಪಾಯಿ ಲೂಟಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 21; ಚಿಕ್ಕಮಗಳೂರಿನ ಪ್ರಖ್ಯಾತ ಪುರೋಹಿತರೊಬ್ಬರನ್ನು ಜೋಡಿಯೊಂದು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿ ಬರೊಬ್ಬರಿ 49 ಲಕ್ಷ ರೂಪಾಯಿ ಪೀಕಿಸಿದ ಘಟನೆ ನಡೆದಿದೆ. ಮಂಗಳೂರಿನ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪುರೋಹಿತರು ದೂರು ನೀಡಿದ್ದು, ತನಿಖೆಯನ್ನು ಕೈಗೆತ್ತಿಕೊಂಡ ಮಂಗಳೂರು ಸಿಸಿಬಿ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ವಿವರ ನೀಡಿದ್ದಾರೆ. ಸಂತ್ರಸ್ತ ಪುರೋಹಿತ ಚಿಕ್ಕಮಗಳೂರಿನಲ್ಲಿ ಪೌರೋಹಿತ್ಯದ ಜೊತೆಗೆ ಜ್ಯೋತಿಷ್ಯವನ್ನು ಹೇಳುವವನಾಗಿದ್ದು, ಆರೋಪಿಗಳಾದ ಭವ್ಯ ಮತ್ತು ಕುಮಾರ್ ಕಳೆದ ಆಗಸ್ಟ್‌ನಿಂದ ಪುರೋಹಿತನಿಂದ ಹಣ ಪಡೆದುಕೊಳ್ಳುತ್ತಿದ್ದಾರೆ.

ಲವ್ ಸೋಗಿನಲ್ಲಿ 'ಹನಿ ಟ್ರ್ಯಾಪ್' ಜಾಲ ರಹಸ್ಯ ಕಾರ್ಯಾಚರಣೆ!ಲವ್ ಸೋಗಿನಲ್ಲಿ 'ಹನಿ ಟ್ರ್ಯಾಪ್' ಜಾಲ ರಹಸ್ಯ ಕಾರ್ಯಾಚರಣೆ!

ಆರೋಪಿಗಳಾದ ಭವ್ಯ (30) ಸೋಮವಾರಪೇಟೆಯ ಶನಿವಾರ ಸಂತೆ ನಿವಾಸಿಯಾಗಿದ್ದು, ಕುಮಾರ್ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಯಾಗಿದ್ದಾನೆ. ಭವ್ಯಳಿಗೆ ಈ ಹಿಂದೆಯೇ ಮದುವೆಯಾಗಿದ್ದು, ಗಂಡನನ್ನು ಬಿಟ್ಟು ಕಳೆದ ಎರಡು ವರ್ಷಗಳಿಂದ ಕುಮಾರ್ ಜೊತೆ ವಾಸವಾಗಿದ್ದಾಳೆ.

ಅಪಹರಣ ಪ್ರಯತ್ನದಲ್ಲಿ ಬಯಲಾಯ್ತು ರೋಚಕ ಹನಿ ಟ್ರ್ಯಾಪ್ ಕಥೆಅಪಹರಣ ಪ್ರಯತ್ನದಲ್ಲಿ ಬಯಲಾಯ್ತು ರೋಚಕ ಹನಿ ಟ್ರ್ಯಾಪ್ ಕಥೆ

Priest Honey Trapped Loses 49 Lakh Rs

ಆರೋಪಿ ಕುಮಾರ್ ಮತ್ತು ಸಂತ್ರಸ್ತ ಪುರೋಹಿತನಿಗೆ ಕಳೆದ ಕೆಲ ವರ್ಷಗಳಿಂದ ಪರಿಚಯವಾಗಿತ್ತು. ಈ ನಡುವೆ ಆರೋಪಿ ಕುಮಾರ್ ಭವ್ಯಳ ಜೊತೆ ಚಿಕ್ಕಮಗಳೂರಿನ ಪುರೋಹಿತನ ಬಳಿ ಹೋಗಿ, ಈಕೆ ನನ್ನ ಹೆಂಡತಿ, ಕೌಟುಂಬಿಕ ಸಮಸ್ಯೆ ಇದೆ. ಮನಸ್ತಾಪವೂ ಇದೆ, ಜ್ಯೋತಿಷ್ಯದ ಮೂಲಕ ಪರಿಹಾರ ಕಂಡುಹುಡುಕಿ ಎಂಬುವುದಾಗಿ ಪುರೋಹಿತನಿಗೆ ಭವ್ಯಳನ್ನು ಪರಿಚಯ ಮಾಡಿಕೊಟ್ಟಿದ್ದಾನೆ.

ಹನಿ ಟ್ರಾಪ್ : ಸಿಸಿಬಿ ಇನ್ ಸ್ಪೆಕ್ಟರ್ ಹೆಸರಿನಲ್ಲಿ ಸುಲಿಗೆ ಹನಿ ಟ್ರಾಪ್ : ಸಿಸಿಬಿ ಇನ್ ಸ್ಪೆಕ್ಟರ್ ಹೆಸರಿನಲ್ಲಿ ಸುಲಿಗೆ

ಆ‌ ಬಳಿಕ ಭವ್ಯ, ಪುರೋಹಿತನನ್ನು ಹಂತ ಹಂತವಾಗಿ ಖೆಡ್ಡಾಗಿ ಬೀಳಿಸಿ ಸಲುಗೆಯಿಂದ ಇದ್ದ ಫೋಟೋ, ವಿಡಿಯೋವನ್ನು ಪಡೆದುಕೊಂಡಿದ್ದಾಳೆ. ಕಳೆದ ಆಗಸ್ಟ್‌ನಿಂದ ಪುರೋಹಿತನನ್ನು ಕುಮಾರ್ ಮತ್ತು‌ ಭವ್ಯ ಜೋಡಿ ಹನಿಟ್ರ್ಯಾಪ್ ಮಾಡಿದೆ. ಹಂತ ಹಂತವಾಗಿ ಹಣ ಪೀಕಿಸಿದ್ದಾರೆ.

ಸುಮಾರು 15 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ಪಡೆದುಕೊಂಡರೆ, ಇನ್ನುಳಿದ 34 ಲಕ್ಷ ರೂಪಾಯಿ ಹಣವನ್ನು ಬೇರೆ-ಬೇರೆ ಬ್ಯಾಂಕ್ ಅಕೌಂಟ್‌ಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ಕೊಡಲು ತಡ ಮಾಡಿದ ಸಂದರ್ಭದಲ್ಲಿ ಫೋಟೋ, ವಿಡಿಯೋ, ವಾಯ್ಸ್ ಮೆಸೇಜ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿ ಮಾನಹರಾಜು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

ನಂತರ ಪತ್ರಕರ್ತರ ಹೆಸರಿನಲ್ಲಿ, ಮಹಿಳಾ ಸಂಘಟನೆಗಳ ಮುಖಂಡರ ಹೆಸರಿನಲ್ಲಿ, ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಂತ್ರಸ್ತ ಪುರೋಹಿತನಿಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಲಾಗಿದೆ. ಕೊನೆಗೆ ಪುರೋಹಿತ ಆತ್ಮಹತ್ಯೆ ಮಾಡಲು ನಿರ್ಧಾರ ಮಾಡಿದ್ದು, ಇದಕ್ಕೂ ಮುನ್ನ ಪೊಲೀಸರ ಮೊರೆ ಹೋಗಲು ನಿರ್ಧರಿಸಿ ಪೊಲೀಸ್ ದೂರು ನೀಡಿದ್ದಾನೆ.

ಸಂತ್ರಸ್ತ ಪುರೋಹಿತ ಸ್ನೇಹಿತರಿಂದ, ಸಂಬಂಧಿಕರಿಂದ ಹಣ ಸಾಲ ಪಡೆದು ಆರೋಪಿಗಳಿಗೆ ನೀಡಿರೋದಾಗಿ ತಿಳಿದುಬಂದಿದೆ. ಈ ಹಣದಲ್ಲಿ ಆರೋಪಿಗಳು ಮಂಗಳೂರಿನಲ್ಲಿ 10 ಲಕ್ಷ ರೂಪಾಯಿಯನ್ನು ನೀಡಿ ಲೀಸ್‌ಗೆ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ.

ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಗೆ ಬೇಕಾದ ಪೀಠೋಪಕರಣವನ್ನು ಖರೀದಿಸಿದ್ದಾರೆ. ಇತ್ತೇಚೆಗೆ ಹೊಸ ದ್ವಿಚಕ್ರ ವಾಹನವನ್ನು ಈ ಜೋಡಿ ಖರೀದಿಸಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಹನಿಟ್ಯ್ರಾಪ್ ಹಿಂದೆ ಬೇರೆಯವರೂ ಶಾಮೀಲಾಗಿರುವ ಸಾಧ್ಯತೆಗಳಿದ್ದು,ಆರೋಪಿಗಳನ್ನು ಐದು ದಿನ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ.

English summary
The Mangaluru police arrested Two persons including a woman allegedly involved in honey trapping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X