ಮಂಗಳೂರು: ಪ್ರತಾಪ್ ಪೂಜಾರಿ ಕೊಲೆ ಆರೋಪಿಗಳು ಸೆರೆ

ಮಂಗಳೂರು, ಫೆಬ್ರವರಿ. 23 : ಸರಪಲ್ಲ ನಿವಾಸಿ ಪ್ರತಾಪ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬುಧವಾರ ಸಂಜೆ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಸಾಗರ್ ಪೂಜಾರಿ, ತಿಲಕ್ ರಾಜ್ ಶೆಟ್ಟಿ, ನಿಖಿಲ್ ಶೆಟ್ಟಿ, ಮನೀಶ್ ಪೂಜಾರಿ, ಶಿವರಾಜ್, ರಾಜೇಶ್, ಮಿಥುನ್, ಕೌಶಿಕ್ ಬಂಧಿತ ಆರೋಪಿಗಳು.[ಮಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಬರ್ಬರ ಹತ್ಯೆ]

ಬಂಧತರಿಂದ ಕೃತ್ಯಕ್ಕೆ ಬಳಸಿದ ತಲವಾರು, ಚೂರಿ, ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Pratap Poojary Murder case Kankanady police Arrest 8 accused in mangaluru

ಘಟನೆ ವಿವರ: ಫೆಬ್ರವರಿ 18 ರಂದು ರಾತ್ರಿ ಹರ್ಷಿತ್ ಶೆಟ್ಟಿ, ತನ್ನ ಸ್ನೇಹಿತರಾದ ವಿತೇಶ್, ಮಣಿಕಂಠ ಅವರೊಂದಿಗೆ ಸೇರಿಕೊಂಡು ತನ್ನ ಮನೆಯ ಅಂಗಳದಲ್ಲಿ ಮದ್ಯಪಾನ ಮಾಡುತ್ತಿರುವ ವೇಳೆ ನಿತೇಶ್ ಎಂಬವರಿಗೆ ಮಣಿಕಂಠ ಹೊಡೆದಿದ್ದ.

ಅದಕ್ಕೆ ರಾಜಿ ಮಾಡಲು ಬಂದ ಸಾಗರ್, ಮಿಥುನ್, ನಿಖಿಲ್ ಶಿವು, ಶರಣ್, ಮನೀಷ್ ಹಾಗೂ ರಾಜೇಶ್ ಅವರೊಂದಿಗೆ ಮಾತಿನ ಚಕಮಕಿ ಉಂಟಾಗಿ ತಲವಾರಿನಿಂದ ಪ್ರತಾಪ್ ಪೂಜಾರಿಗೆ ಕಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದ.

ಘಟನೆಯ ವೇಳೆ ಗಂಭೀರ ಗಾಯಗೊಂಡಿದ್ದ ಮಣಿಕಂಠ ಸದ್ಯ ಚೇತರಿಸಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+