1ಕೋಟಿ ವೆಚ್ಚದಲ್ಲಿ ಶಿರ್ವ ದೇವಾಲಯ ನವೀಕರಣ
ಉಡುಪಿ, ಜೂ.6: ಉಡುಪಿಯ ಸಮೀಪದ ಪ್ರಸಿದ್ಧ ಶಿರ್ವ ಶ್ರೀ ಧರ್ಮ ಜಾರಂದಾಯ ದೇವಾಲಯ ಒಂದು ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಳ್ಳಲಿದೆ.
ಜೂನ್.8 ಭಾನುವಾರ ಬೆಳಗ್ಗೆ 9.15ಕ್ಕೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಗುದ್ದಲಿ ಪೂಜೆ ನೆರವೆರಿಸುವ ಮೂಲಕ ನವೀಕರಣ ಕೆಲಸಕ್ಕೆ ಚಾಲನೆ ನೀಡಲಿದ್ದಾರೆ.[ಕರಾವಳಿ ಕೋಗಿಲೆ ದಿ.ಗುಂಡ್ಮಿ ಕಾಳಿಂಗ ನಾವಡ ನೆನಪು]

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನವೀಕರಣಕ್ಕೆ ಸಂಬಂಧಪಟ್ಟ ಮನವಿ ಪತ್ರವನ್ನು ಬಿಡುಗಡೆ ಮಾಡಲಿದ್ದು, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಹಸನಬ್ಬ ಶೇಖ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದೇವಾಲಯ ನವೀಕರಣ ಸಮಿತಿ ಅಧ್ಯಕ್ಷ ನಡುಬೆಟ್ಟು ನಿತ್ಯಾನಂದ ಹೆಗ್ಡೆ ಮತ್ತು ಕಾರ್ಯದರ್ಶಿ ವಿ ಸುಬ್ಬಯ್ಯ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐತಿಹಾಸಿಕ ಹಿನ್ನಲೆಯಿರುವ ಶಿರ್ವ ಶ್ರೀ ಧರ್ಮ ಜಾರಂದಾಯ ದೇವಾಲಯ ಉಡುಪಿ ನಗರದಿಂದ 20 ಕಿ.ಮೀ ದೂರದಲ್ಲಿದೆ. ಸುಮಾರು 550 ವರ್ಷದ ಹಳೇಯದಾಗಿರುವ ದೇವಾಲಯವನ್ನು 2002ರಲ್ಲಿ ನವೀಕರಣ ಮಾಡಲಾಗಿತ್ತು. ಈಗ ಕೇರಳದ ಜ್ಯೋತಿಷಿ ವಿದ್ವಾನ್ ಎ.ವಿ. ಮಾಧವನ್ ಪೊಕ್ಯುವಲ್ ಸಲಹೆಯಂತೆ ನವೀಕರಣ ಕೆಲಸವನ್ನು ಕೈಗೊಳ್ಳಲಾಗಿದೆ.












Click it and Unblock the Notifications