ಸಲಿಂಗಕಾಮಕ್ಕೆ ಬಳಸಿಕೊಂಡು, ಹಣ ಕೇಳಿದ್ದಕ್ಕೆ ವೃದ್ಧನ ಕೊಲೆಗೈದ ಯುವಕ
ಮಂಗಳೂರು, ಅಕ್ಟೋಬರ್ 12: 'ಸಲಿಂಗ ಕಾಮ'ಕ್ಕೆಂದು ಕರೆದೊಯ್ದು ನಂತರ ಹಣ ಕೇಳಿದ್ದ ವೃದ್ಧರೊಬ್ಬರನ್ನು ಯುವಕನೊರ್ವ ಕೊಲೆ ಮಾಡಿದ ಘಟನೆ ಮಂಗಳೂರಿನ ಹರಿಪದವು ಎಂಬಲ್ಲಿ ನಡೆದಿದೆ.
ಮಂಗಳೂರು ನಗರದ ಮಂದಾರಬೈಲು ಜಯಾನಂದ ಆಚಾರ್ಯ(65) ಕೊಲೆಯಾದ ವ್ಯಕ್ತಿ. ಕುಂಜತ್ ಬೈಲ್, ದೇವಿನಗರ ನಿವಾಸಿ ರಾಜೇಶ್ ಪೂಜಾರಿ(31) ಬಂಧಿತ ಆರೋಪಿ.
ಜಯಾನಂದ ಆಚಾರ್ಯ ಕೂಲಿ ಕೆಲಸ ಮಾಡುತ್ತಿದ್ದು, ದಸರಾ ಸಂದರ್ಭದಲ್ಲಿ ಹೆಣ್ಣು ವೇಷ ಹಾಕುತ್ತಿದ್ದರು. ವಿಪರೀತ ಮದ್ಯದ ಚಟ ಹೊಂದಿದ್ದರು. ರಾಜೇಶ್ ಪೂಜಾರಿ ನಗರದ ಲಾಲ್ ಬಾಗ್‌ನಲ್ಲಿರುವ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ. ಜಯಾನಂದರನ್ನು ಆರೋಪಿ ರಾಜೇಶ್ ಪೂಜಾರಿ ಸಲಿಂಗಕಾಮದ ಉದ್ದೇಶಕ್ಕೆಂದು ಅ.7 ರಿಂದ ಅ.8ರ ನಡುವೆ ಕರೆದೊಯ್ದಿದ್ದಾರೆ.
ಆದರೆ

ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ''ವೃದ್ಧ ಜಯಾನಂದ ಆಚಾರ್ಯರನ್ನು 300 ರೂಪಾಯಿ ಕೊಡೋದಾಗಿ ಹೇಳಿ ಯುವಕನೊಬ್ಬ ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಸಲಿಂಗಕಾಮ ಮಾಡಿದ್ದಾರೆ. ಸಲಿಂಗಕಾಮ ಆದ ಬಳಿಕ ಯುವಕನನ್ನು ಹಣ ಕೇಳಿದಾಗ ಆತ ತಿರಸ್ಕರಿಸಿ ವೃದ್ಧನ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಆರೋಪಿ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 377 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ'' ಎಂದು ಹೇಳಿದ್ದಾರೆ.
ಶಾರದೋತ್ಸವ ಮತ್ತು ಹುಲಿವೇಷದ ಬ್ಯಾನರ್‌ಗಳಿಗೆ ಹಾನಿ: ಮೂವರ ಬಂಧನ
ವಾಮಂಜೂರಿನಲ್ಲಿ ಇತ್ತೀಚೆಗೆ ಶಾರದೋತ್ಸವ ಮತ್ತು ಫ್ರೆಂಡ್ಸ್ ಹುಲಿಯ ಪ್ರಚಾರಾರ್ಥದ ಸಲುವಾಗಿ ಹಾಕಲಾಗಿದ್ದ ಬ್ಯಾನರ್‌ಗಳಿಗೆ ಹಾನಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸುಮಿತ್ ಹೆಗ್ಡೆ (25), ಪ್ರವೀಣ್ ಪೂಜಾರಿ (24), ಯತೀಶ್ ಪೂಜಾರಿ (24) ಬಂಧಿತರು.
ಇವರು ನಗರದ ಹೊರವಲಯದ ವಾಮಂಜೂರಿನಲ್ಲಿ ವಾಮಂಜೂರು ಫ್ರೆಂಡ್ಸ್ ಹುಲಿ ವೇಷ ತಂಡದವರು ದಸರಾ ಸಂದರ್ಭ ಹುಲಿ ವೇಷ ಹಾಕಿದರೆ, ವಾಮಂಜೂರು ಟೈಗರ್ಸ್ ತಂಡದವರು ಗಣೇಶೋತ್ಸವಕ್ಕೆ ಹುಲಿ ವೇಷ ಹಾಕುತ್ತಿದ್ದರು. ಬಂಧಿತ ಆರೋಪಿಗಳು ವಾಮಂಜೂರು ಟೈಗರ್ಸ್ ತಂಡದ ಸದಸ್ಯರು. ಈ ತಂಡಗಳ ಮಧ್ಯೆ ಇರುವ ಅಸಮಾಧಾನದಿಂದ ಮೂವರು ಆರೋಪಿಗಳು ಅಕ್ಟೋಬರ್ 8 ರಂದು ವಾಮಂಜೂರು ಸುತ್ತಮುತ್ತ ಹಾಕಿದ ಶಾರದೋತ್ಸವ ಮತ್ತು ಹುಲಿ ವೇಷದ ಬ್ಯಾನರ್‌ಗೆ ಹಾನಿ ಮಾಡಿದ್ದಾರೆ. ಈ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಸಾಮಾಜಿಕ ಶಾಂತಿ ಕದಡುವ ಹುನ್ನಾರವೂ ಆರೋಪಿಗಳದ್ದಾಗಿತ್ತು ಎಂದು ತಿಳಿದು ಬಂದಿದೆ.
ಮೂವರು ಆರೋಪಿಗಳ ದುಷ್ಕೃತ್ಯ ವಾಮಂಜೂರಿನಲ್ಲಿ ಹಾಕಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೇ ಆಧಾರವಾಗಿಟ್ಟುಕೊಂಡು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications