ಯಕ್ಷಗಾನ ಭಾಗವತ ದಿ.ಬಲಿಪ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿವರು ಈ ಪತ್ರವನ್ನು ದಿ.ಬಲಿಪ ಭಾಗವತರ ಪುತ್ರ ಬಲಿಪ ಶಿವಶಂಕರ ಭಾಗವತರಿಗೆ ಬರೆದಿದ್ದಾರೆ. ಫೆಬ್ರವರಿ 21ರಂದು ಬರೆದಿರುವ ಈ ಪತ್ರ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ.

ಮಂಗಳೂರು, ಮಾರ್ಚ್ 2: ಇತ್ತೀಚಿಗೆ ಇಹಲೋಕ ತ್ಯಜಿಸಿರುವ ತೆಂಕುತಿಟ್ಟು ಯಕ್ಷಗಾನದ ದಂತಕತೆ, ಬಲಿಪ ಪರಂಪರೆಯ ಮೇರು ಶಿಖರ ದಿ.ಬಲಿಪ ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಅರ್ಪಿಸಿ ಪ್ರಧಾನಿ ಮೋದಿಯವರು ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿವರು ಈ ಪತ್ರವನ್ನು ದಿ.ಬಲಿಪ ಭಾಗವತರ ಪುತ್ರ ಬಲಿಪ ಶಿವಶಂಕರ ಭಾಗವತರಿಗೆ ಬರೆದಿದ್ದಾರೆ. ಫೆಬ್ರವರಿ 21ರಂದು ಬರೆದಿರುವ ಈ ಪತ್ರ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ. "ಶ್ರೀ ಬಲಿಪ ಭಾಗವತರ ನಿಧನವು ನನಗೆ ಅತೀವ ನೋವನ್ನುಂಟು ಮಾಡಿದೆ. ಅವರ ಕುಟುಂಬದವರಿಗೆ ಅತೀವ ಸಂತಾಪ ಸೂಚಿಸುತ್ತಿದ್ದೇನೆ" ಎಂದು ಮೋದಿಯವರು ಪತ್ರದಲ್ಲಿ ಬರೆದಿದ್ದಾರೆ.

PM Narendra Modi Wrote A Letter Paying Tribute To Balipa Narayana Bhagavatha

"ಬಲಿಪ ಭಾಗವತರು ಅವರ ಇಡೀ ಜೀವನವನ್ನೇ ಯಕ್ಷಗಾನ ಕಲೆಗೆ ಮುಡಿಪಾಗಿಟ್ಟವರು. ಬಲಿಪ ಶೈಲಿಯ ಭಾಗವತಿಕೆಯಿಂದಲೇ ಅವರು ಜನಮನ್ನಣೆ ಪಡೆದು ಕಲಾ ರಸಿಕರ ಮೆಚ್ಚುಗೆ ಗಳಿಸಿದ್ದರು. ಯಕ್ಷಗಾನ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು. ಆದ್ದರಿಂದ ಕಲಾ ರಸಿಕರ ಅತೀವ ದುಃಖವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈಗ ಭಾಗವತರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಮೌಲ್ಯ, ಆದರ್ಶ ನಮಗೆ ದಾರಿದೀಪವಾಗಲಿದೆ. ಅವರ ಅಗಲುವಿಕೆಯಿಂದ ದುಃಖ ತಪ್ತರಾಗಿರುವ ಕುಟುಂಬ ಸದಸ್ಯ ರಿಗೆ,ಸ್ನೇಹಿತರಿಗೆ ಹಾಗೂ ಯಕ್ಷಗಾನ ಕಲಾ ರಸಿಕರಿಗೆ ದೇವರು ಶಕ್ತಿ ನೀಡಲಿ" ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

ಯಕ್ಷಗಾನದ ಮೇರುಶಿಖರ, ಬಲಿಪ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿ ಇಹಲೋಕದ ಯಾತ್ರೆ ಮುಗಿಸಿದ ಬಲಿಪ ನಾರಾಯಣ ಭಾಗವತರಿಗೆ ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು.

PM Narendra Modi Wrote A Letter Paying Tribute To Balipa Narayana Bhagavatha

'ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಯಕ್ಷಗಾನ ಭಾಗವತಿಕೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ಶೈಲಿಯಿಂದಲೇ ಕಲಾರಸಿಕರ ಮೆಚ್ಚುಗೆ ಪಡೆದರು. ಅವರು ಯಕ್ಷಗಾನದಲ್ಲಿ ಮಾಡಿರು ಕಾರ್ಯ ಮುಂದಿನ ಪೀಳಿಗೆಯವರಿಗೆ ದಾರಿದೀಪವಾಗಿದೆ. ಇಂತಹ ಬಲಿಪ ಭಾಗವತರ ನಿಧನದಿಂದ ನೋವು ತಂದಿದೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ' ಎಂದು ಪ್ರಧಾನಿ‌ಮೋದಿಯವರು ಬಲಿಪ ನಾರಾಯಣರು ಮೃತರಾದ ದಿನ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+