ಮಂಗಳೂರಿನಲ್ಲಿ ನೀರುದೋಸೆ, ಉಪ್ಪಿಟ್ಟು ಸವಿದ ಮೋದಿ
Recommended Video

ಮಂಗಳೂರು, ಡಿಸೆಂಬರ್ 19: ಲಕ್ಷದ್ವೀಪಕ್ಕೆ ತೆರಳಲೆಂದು ಸೋಮವಾರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಬೆಳಗ್ಗೆ (ಮಂಗಳವಾರ) ಕರಾವಳಿಯ ತಿಂಡಿ ರುಚಿ ಸವಿದರು.
ಇಂದು ಮುಂಜಾನೆ 3 ಗಂಟೆಗೆ ಎದ್ದು ಯೋಗಭ್ಯಾಸ ಮಾಡಿ ಬಳಿಕ ನೀರುದೋಸೆ,ಮೂಡೆ, ಅವಲಕ್ಕಿ ಉಪ್ಪಿಟ್ಟು ಸವಿದರು. ಮೂಡೆ ಬಗ್ಗೆ ವಿಚಾರಿಸಿ ಅದರ ರುಚಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಮೋದಿ 2 ಬಾರಿ ಮೂಡೆ ಹಾಕಿಸಿಕೊಂಡು ಚಪ್ಪರಿಸಿದರು. ನಂತರ ತಿಂಡಿ ಬಡಿಸಿದವರಿಗೆ ಮೋದಿ ಪ್ರಶಂಸಿದರು.
In Pics : ಗುಜರಾತ್, ಹಿಮಾಚಲ ಪ್ರದೇಶ ಗೆಲುವು: ಮಂಗಳೂರಿನಲ್ಲಿ ಮೋದಿ ವಿಜಯೋತ್ಸವ

I thank the people of Mangaluru for the warm welcome last evening. pic.twitter.com/UvCOdFm1p7
— Narendra Modi (@narendramodi) December 19, 2017
ಇನ್ನು ನಂತರ ತಮಗೆ ಮುಂಜಾನೆಯ ಉಪಹಾರ ನೀಡಿದ ನಗರದ ಓಷಿಯನ್ ಪರ್ಲ್ ಹೋಟೆಲ್ ಸಿಬ್ಬಂದಿ ಜೊತೆ ಪೋಟೋ ತೆಗಿಸಿಕೊಂಡು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಯುಪಡೆಯ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣ ಬೇಳೆಸಿದರು. ಓಖಿ ಚಂಡಮಾರುತದಿಂದ ತತ್ತರಿಸಿರುವ ಲಕ್ಷದ್ವೀಪದ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.
ಗುಜರಾತ್ ಹಾಗು ಹಿಮಾಚಲ ಪ್ರದೇಶದ ಗೆಲುವಿನ ಖುಷಿಯಲ್ಲಿದ್ದ ಮೋದಿ ಅವರನ್ನು ಸೋಮವಾರ ರಾತ್ರಿ ಸುಮಾರು 11:40 ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಸ್ವಾಗತಿಸಿದ್ದರು.
ಅಷ್ಟೋತ್ತಲ್ಲಿ ಜಮಾಯಿಸಿದ್ದ ನೂರಾರು ಜನರು ಮೋದಿ ಆಗಮಿಸುತ್ತದ್ದಂತೆಯೇ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು. ಪ್ರಧಾನಿ ಮೋದಿ ಜನರತ್ತ ಕೈಬೀಸಿ ಮುಗುಳ್ನಗುತ್ತಾ ನಡೆದರು.












Click it and Unblock the Notifications