ಮಂಗಳೂರು: ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಪೂರ್ಣ, ಉದ್ಘಾಟನೆ ಯಾವಾಗ?
ಮಂಗಳೂರು, ಜನವರಿ, 18: ಬಹುನಿರೀಕ್ಷಿತ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಈ ಫ್ಲ್ಯಾಟ್‌ಫಾರಗಳನ್ನು ಮೇಲ್ಸೇತುವೆ ಪೂರ್ಣಗೊಂಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ 4 ಮತ್ತು 5ನೆ ಫ್ಲ್ಯಾಟ್ ಫಾರಂಗಳು ಸಿದ್ಧಗೊಂಡಿದ್ದು, ಅವುಗಳನ್ನು ಸಂಪರ್ಕಿಸುವ ಪಾದಾಚಾರಿ ಮೇಲ್ಸೇತುವೆಯೂ ಪೂರ್ಣಗೊಂಡಿವೆ. ಸೆಂಟ್ರಲ್ ನಿಲ್ದಾಣದ ಬಹು ನಿರೀಕ್ಷೆಯ ಫ್ಲಾಟ್ ಫಾರಂ 4 ಮತ್ತು 5ರ ಕಾಮಗಾರಿ ಕಳೆದ ನವೆಂಬರ್‌ನಲ್ಲಿ ಪೂರ್ಣಗೊಂಡು ಬಳಕೆಯಲ್ಲಿದೆ.

ಆರಂಭದಲ್ಲಿ ಈ ನೂತನ ಫ್ಲಾಟ್ ಫಾರಂಗಳನ್ನು ಮಂಗಳೂರು ಸೆಂಟ್ರಲ್‌ಗೆ ಬರುವ ರೈಲುಗಳ ನಿಲುಗಡೆಗಾಗಿ ಬಳಕೆ ಮಾಡುತ್ತಿದ್ದರೆ, ಇದೀಗ ಈ ಫ್ಲಾಟ್ ಫಾರಂಗಳ ಮೂಲಕ ರೈಲುಗಳ ಸಂಚಾರವನ್ನೂ ನಿಧಾನಗತಿಯಲ್ಲಿ ಆರಂಭಿಸಲಾಗಿದೆ. ಈ ನೂತನ ಫ್ಲಾಟ್ ಫಾರಂಗಳು ಬಳಕೆಯಾಗುತ್ತಿವೆ. ಆದರೂ, ಮೇಲ್ಸೇತುವೆಯ ಕೊರತೆಯಿಂದಾಗಿ ಈ ಫ್ಲಾಟ್ ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಫ್ಲಾಟ್‌ಫಾರಂನಿಂದ ನಿಲ್ದಾಣದ ಹಿಂದಿನ ರಸ್ತೆಗೆ ಹೋಗಿ ಮುಖ್ಯ ದ್ವಾರ ಅಥವಾ ಅವರ ಮುಂದಿನ ಪ್ರಯಾಣ ಬೆಳೆಸಲು ತುಂಬಾ ದೂರದವರೆಗೂ ನಡೆದುಕೊಂಡೇ ಹೋಗಬೇಕಿತ್ತು.
ಕೆಲವರು ಫ್ಲಾಟ್‌ಫಾರಂನಿಂದ ಇಳಿದು ಹಳಿಗಳನ್ನು ದಾಟಿ 3ನೇ ಫ್ಲಾಟ್‌ಫಾರಂಗೆ ಹತ್ತಿ ಅಲ್ಲಿಂದ ಮೇಲ್ಸೇತುವೆ ಮೂಲಕ ಮುಖ್ಯ ದ್ವಾರ ತಲುಪಬೇಕಾಗಿತ್ತು. ಆದರೆ ಇದೀಗ ಮೇಲ್ಸೇತುವೆ ನಿರ್ಮಾಣ ಆಗಿರುವುದರಿಂದ ಈ ನೂತನ ಫ್ಲಾಟ್‌ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಮೇಲ್ಸೇತುವೆ ಮೂಲಕ ಮುಖ್ಯದ್ವಾರಕ್ಕೆ ಕಲವೇ ಕ್ಷಣಗಳಲ್ಲು ಹೋಗಬಹುದಾಗಿದೆ.
ಫ್ಲಾಟ್ ಫಾರಂಗಳು ರೈಲು ಸಂಚಾರಕ್ಕೆ ಬಳಕೆ ಆಗುತ್ತಿದ್ದರೂ, ಇನ್ನೂ ಅಧಿಕೃತವಾಗಿ ಫ್ಲಾಟ್ ಫಾರಂಗಳು ಉದ್ಘಾಟನೆ ಆಗಿಲ್ಲ. ಹಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಫ್ಲಾಟ್ ಫಾರಂಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೆ, ಪಾದಾಚಾರಿ ಮೇಲ್ಸೇತುವೆಯೂ ಪ್ರಯಾಣಿಕರ ಬಳಕೆಗೆ ಲಭ್ಯ ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಇನ್ನೂ ಒಂದು ಪಾದಾಚಾರಿ ಮೇಲ್ಸೇತುವೆ ಹಾಗೂ ಫ್ಲಾಟ್‌ಫಾರಂ ಶೆಲ್ಟರ್ ಕಾಮಗಾರಿ, ಲಿಫ್ಟ್, ಎಕ್ಸಲೇಟರ್ ನಿರ್ಮಾಣ ಆಗಬೇಕಿದೆ ಅಷ್ಟೇ.












Click it and Unblock the Notifications