ಮಂಗಳೂರು: ಪಾರ್ಟ್‌ ಟೈಮ್‌ ಕೆಲಸದ ಆಮೀಷ, ಒಂದಲ್ಲ ಎರಡಲ್ಲ ಬರೋಬ್ಬರಿ 15 ಲಕ್ಷ ಪಂಗನಾಮ..!

ಮಂಗಳೂರು, ನವೆಂಬರ್‌ 23: ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದೀರಾ..? ಸದ್ಯದ ದುಡಿಮೆ ಸಾಲುತ್ತಿಲ್ಲವೇ? ಮತ್ತಷ್ಟು ಸಂಪಾದನೆಗಾಗಿ ಕಾಯುತ್ತೀದ್ದೀರಾ? ಪಾರ್ಟ್‌ಟೈಮ್‌ ಕೆಲಸ ಮಾಡಲು ಸಿದ್ಧರಿದ್ದೀರಾ..? ಕಡಿಮೆ ಸಮಯದಲ್ಲೇ ಪ್ರತಿ ನಿತ್ಯ ಸಾವಿರಾರು ರೂಪಾಯಿ ಗಳಿಸಬಹುದು. ಶ್ರಮ ಕಡಿಮೆ ಆದಾಯ ಅತಿ ಹೆಚ್ಚು ಹೀಗೆ ಹೇಳಿ ಜನರನ್ನು ಮೋಸದ ಬಲೆಗೆ ಬೀಳಿಸಲು ಆನ್‌ಲೈನ್‌ ವಂಚಕರು ಕಾದಿರುತ್ತಾರೆ.

ಇತ್ತೀಚಿಗೆ ಆನ್‌ಲೈನ್‌ ಪಾರ್ಟ್ ಟೈಮ್‌ ಕೆಲಸದ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳೂರಿನಂತಹ ನಗರದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ.

mangaluru-man-lost-15-lakhs

ಸಾಮಾಜಿಕ ಜಾಲತಾಣದಲ್ಲಿ ಬಂದ ಪಾರ್ಟ್ ಟೈಮ್‌ ಕೆಲಸದ ಆಫರ್‌ ನಂಬಿ ವ್ಯಕ್ತಿಯೊಬ್ಬರು 15 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್ ಮೂಲಕ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಮತ್ತು ಇತರ ವಸ್ತುಗಳಿಗೆ ರೇಟಿಂಗ್ ನೀಡಿ ಸುಲಭವಾಗಿ ಕೆಲಸ ಮಾಡಿ ಕಮಿಷನ್ ಹಣವನ್ನು ಪಡೆಯಬಹುದು ಎಂದು ವ್ಯಕ್ತಿಯೊಬ್ಬರಿಗೆ ನವೆಂಬರ್‌ 14ರಂದು ಟೆಲಿಗ್ರಾಂನಲ್ಲಿ ಸಂದೇಶ ಬಂದಿತ್ತು. ವಂಚಕರ ಮಾತು ನಂಬಿದ ವ್ಯಕ್ತಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆದು ಟ್ರಯಲ್ ಜಾಬ್ ಮೂಲಕ 860 ರೂ ಕಮಿಷನ್‌ ಪಡೆದಿದ್ದಾರೆ. ಬಳಿಕ 10 ಸಾವಿರ ರೂಪಾಯಿ ಪಾವತಿಸುವಂತೆ ಸಂದೇಶ ಬಂದಿದ್ದು, ಅದನ್ನು ವರ್ಗಾವಣೆ ಮಾಡಿದ್ದಾರೆ. ಅದರಂತೆ ಕಮಿಷನ್ ರೂಪದಲ್ಲಿ 14,900 ರೂಪಾಯಿ ಮರು ಪಾವತಿ ಮಾಡಿದ್ದಾರೆ.

ಹೀಗೆ ವಂಚಕರು ವ್ಯಕ್ತಿಯನ್ನು ನಂಬಿಸಿದ್ದಾರೆ. ಸೈಬರ್‌ ವಂಚಕರ ಮೋಸದ ಜಾಲ ಅರಿಯದ ವ್ಯಕ್ತಿ ಇನ್ನಷ್ಟು ಹೆಚ್ಚಿನ ಹಣ ದೊರಕಬಹುದು ಎಂದು ನಂಬಿ ತಮ್ಮ ಖಾತೆಯಿಂದ 11,30,510 ರೂಪಾಯಿ ಹಾಗೂ ತಂದೆಯ ಖಾತೆಯಿಂದ 3,74,328 ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಆದರೆ ಯಾವುದೇ ಹಣ ವಾಪಸ್‌ ಬಂದಿಲ್ಲ. ಬಳಿಕ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಇನ್ನಷ್ಟು ವಂಚಕರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

mangaluru-man-lost-15-lakhs

ವಂಚಕರು ತಮ್ಮಿಂದ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡಿದ್ದಾರೆ ಎಂದು ದೂರುದಾರಿಗೆ ಅರಿವಿಗೆ ಬಂದಿದ್ದು, ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ.

ಇನ್ನು ಈ ಬಗ್ಗೆ ಕಳೆದ ಆರು ತಿಂಗಳಿಂದಲೂ ಮಂಗಳೂರು ಪೊಲೀಸರು ಜಾಗೃತಿ ಮೂಡಿಸುತ್ತಿದ್ದು, ಜನ ಎಚ್ಚೆತ್ತುಕೊಳ್ಳದೇ ಮತ್ತಷ್ಟು ಮೋಸ ಹೋಗುತ್ತಿದ್ದಾರೆ. ವಂಚಕರು ಪಾರ್ಟ್ ಟೈಮ್‌ ಕೆಲಸ ಕೊಟ್ಟು ಉತ್ತಮ ಸಂಬಳ ನೀಡುವುದಾಗಿ ನಂಬಿಸಿ, ಬಳಿಕ ಈ ವೆಬ್‌ಸೈಟ್‌ ಅಥವಾ ಲಿಂಕ್‌ ಅನ್ನು ಕ್ಲಿಕ್‌ ಮಾಡಿ, ಅಥವಾ ಮೊದಲು ಅಲ್ಪ ಮೊತ್ತ ಪಾವತಿಸಿ ಎನ್ನುವ ಮೂಲಕ ವಂಚನೆ ಮಾಡುತ್ತಾರೆ.

ವಂಚಕರು ಮೊದಲು ಸಂತ್ರಸ್ತರ ನಂಬಿಕೆ ಗಿಟ್ಟಿಸಿಕೊಳ್ಳಲು ಮೊದಲು ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆ. ಆ ಬಳಿಕ ಸಂತ್ರಸ್ತನಿಂದ ದೊಡ್ಡ ಮೊತ್ತ ಪಾವತಿಸಿಕೊಂಡು. ಆತನಿಗೆ ಕೆಲಸವೂ ನೀಡದೇ, ಹಣವೂ ನೀಡದೇ ವಂಚನೆ ಮಾಡಿ ಕಣ್ಮರೆಯಾಗುತ್ತಾರೆ. ಕೆಲವರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ, ಇನ್ನೂ ಕೆಲವರು ದೂರು ನೀಡಲು ಹಿಂಜರಿಯುತ್ತಾರೆ. ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುವ ಸೈಬರ್‌ ವಂಚಕರ ಆಟಕ್ಕೆ ಬ್ರೇಕ್‌ ಬೀಳ ಬೇಕಿದೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+