ಮಂಗಳೂರು : ಗೃಹಿಣಿ ಕೊಂದಿದ್ದು ಅಕ್ಕ-ಪಕ್ಕದವರು
ಮಂಗಳೂರು, ಜ.21 : ಬೈಕಂಪಾಡಿಯಲ್ಲಿ ನಡೆದ ವಿವಾಹಿತ ಮಹಿಳೆ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿ ಬಿದಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಇಬ್ಬರು ಯುವಕರು ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಬೈಕಂಪಾಡಿ ಸಮೀಪದ ಮೀನಾಕಳಿಯ ಮನೆಯಲ್ಲಿ ಸೋಮವಾರ ರಾತ್ರಿ ಕಲ್ಪನಾ ಕೊಲೆ ನಡೆದಿತ್ತು. ಕೊಲೆಗೆ ಸಂಬಂಧಿಸಿದಂತೆ ಅಕ್ಕ-ಪಕ್ಕದ ಮನೆಯ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಮಧ್ಯ ಪ್ರದೇಶ ಮೂಲದ ರಾಜೇಶ್ ಎಂಸಿಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪತ್ನಿ ಕಲ್ಪನಾ (25) ಜೊತೆ ವಾಸವಾಗಿದ್ದರು. [ಮಂಗಳೂರು : ಕೇಶವ ಶೆಟ್ಟಿ ಕೊಲೆಗೆ ಹಣವೇ ಕಾರಣ]

ಕಲ್ಪನಾ ಮೇಲೆ ಅತ್ಯಾಚಾರ ನಡೆಸಲು ಇಬ್ಬರು ಯುವಕರು ಪ್ರಯತ್ನ ನಡೆಸಿದ್ದರು. ಆಕೆ ಸಹಕರಿಸದೇ ಇದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಮನೆಗಳಲ್ಲಿ ಕೃತ್ಯ ನಡೆಸುವಾಗ ಹಾಕಿಕೊಂಡಿದ್ದ ಬಟ್ಟೆಗಳು ಪತ್ತೆಯಾಗಿದ್ದು, ಅವುಗಳಲ್ಲಿ ರಕ್ತದ ಕಲೆ ಇತ್ತು, ಅದು ಕಲ್ಪನಾ ರಕ್ತದೊಂದಿಗೆ ಹೊಂದಾಣಿಕೆಯಾಗುತ್ತಿದೆ. [ಮಂಗಳೂರಿನಿಂದ ಅಬುಧಾಬಿಗೆ ನೇರ ವಿಮಾನ]
ಘಟನೆ ವಿವರ : ಕಲ್ಪನಾ ಪತಿ ರಾಜೇಶ್ ಸೋಮವಾರ ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿದ್ದರು. ಆಗ ಮನೆಯಲ್ಲಿ ಕಲ್ಪನಾ ಒಬ್ಬಳೇ ಇದ್ದಳು. ಆಗ ಮನೆಗೆ ನುಗ್ಗಿದ್ದ ಅಕ್ಕ-ಪಕ್ಕದ ಮನೆಯ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪಣಂಬೂರು ಪೊಲೀಸರು ಕೃತ್ಯದ ಹಿಂದೆ ಒಬ್ಬರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತುಗೊಳ್ಳದ ಕಾರಣ ಹತ್ಯೆಗೆ ಕಾರಣ ನಿಗೂಢವಾಗಿತ್ತು.
ಕೃತ್ಯ ಮಾಡಿರುವ ಶಂಕೆ ಇದ್ದ ಯುವಕರ ಕೋಣೆ ಪ್ರವೇಶಿಸಿದ್ದ ಪೊಲೀಸರಿಗೆ ಅಲ್ಲಿ ರಕ್ತ ಸಿಕ್ತವಾದ ಎರಡು ಬಟ್ಟೆಗಳು ಪತ್ತೆಯಾಗಿದ್ದವು. ಅದರಲ್ಲಿದ್ದ ರಕ್ತ ಮೃತ ಕಲ್ಪನಾ ರಕ್ತಕ್ಕೆ ಹೊಂದಿಕೆಯಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications