ಪಿಯು ಟಾಪರ್ ಕುಡ್ಲದ ರಶ್ಮಿತಾ ಜೊತೆ ಚಿಟ್ ಚಾಟ್
ಮೆರಿಟ್ ವಿದ್ಯಾರ್ಥಿಗಳ ತವರೆನಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ತನ್ನ ಗರಿಮೆಯನ್ನು ಉಳಿಸಿಕೊಂಡಿದೆ. ಈ ಬಾರಿ ಕೂಡಾ ದಕ್ಷಿಣ ಕನ್ನಡ ಶೇ.93.09 ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಅವಿಭಜಿತ ಕನ್ನಡ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಮೊದಲ ಮೂರು ಸ್ಥಾನ ಪಡೆದಿರುವುದು ಈ ಬಾರಿಯ ವಿಶೇಷ.
ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ (ನೋಂದಣಿ ಸಂಖ್ಯೆ 255607) ಕಾಮರ್ಸ್ ವಿಭಾಗದಲ್ಲಿ ಟಾಪರ್ ಆಗಿದ್ದಾರೆ. ಭಾಷಾ ವಿಷಯಗಳನ್ನು ಬಿಟ್ಟರೆ ಮಿಕ್ಕ ನಾಲ್ಕು ಸಬ್ಜೆಕ್ಟ್ ನಲ್ಲೂ ನೂರಕ್ಕೆ ನೂರು ಗಳಿಸಿದ ಸಾಧನೆ ಮೆರೆದಿದ್ದಾರೆ. 600ಕ್ಕೆ 593 ಗಳಿಸಿದ್ದಾರೆ.[ಪಿಯು ಜಿಲ್ಲಾವಾರು ರಿಸಲ್ಟ್: ದಕ್ಷಿಣ ಕನ್ನಡ 1, ಗದಗ 21]
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯವರು ಟಾಪರ್ ಏಕೆ? ಎಂಬ ಪ್ರಶ್ನೆಗೆ ಕಳೆದ ಬಾರಿ ವಿಜ್ಞಾನ ವಿಭಾಗದ ಟಾಪರ್ ಪೂಜಾ ಬಾಳಿಗ ಅವರು ಕೊಟ್ಟ ಉತ್ತರ ಇಲ್ಲಿ ಉಲ್ಲೇಖನೀಯ.
"ಇದಕ್ಕೆ ಇಲ್ಲಿನ ಶಿಕ್ಷಕ ವೃಂದವೇ ಕಾರಣ ಎನ್ನಬಹುದು. ಜತೆಗೆ ವಿದ್ಯಾರ್ಥಿ ಸಮೂಹ ಕೂಡಾ ಶಿಕ್ಷಕರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ವ್ಯಾಸಂಗದಲ್ಲಿ ಈ ಪರಿ ಏಳಿಗೆ ಕಾಣಲು ಕಾರಣವಾಗಿದೆ ಎಂದಿದ್ದರು". ಅದು ರಶ್ಮಿತಾ ವಿಷಯದಲ್ಲೂ ನಿಜವಾಗಿದೆ.
ಮನೆಯಲ್ಲಿ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದ ರಶ್ಮಿತಾ ಜಿಲ್ಲೆಗೆ ಟಾಪರ್ ಆಗಿ ಕಾಮರ್ಸ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದು ಪೋಷಕರಿಗೆ ಅಚ್ಚರಿ ಮೂಡಿಸಿದರೂ ಮಗಳ ಪ್ರತಿಭೆ ಬಗ್ಗೆ ನಂಬಿಕೆ ಇತ್ತು ಎಂದಿದ್ದಾರೆ. ಒನ್ ಇಂಡಿಯಾ ಪ್ರತಿನಿಧಿ ನಡೆಸಿರುವ ಚುಟುಕು ಸಂದರ್ಶನ ಮುಂದೆ ಓದಿ....[ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ]

ರಶ್ಮಿತಾ ಪುರುಷೋತ್ತಮ್ ಮಾರ್ಕ್ಸ್ ಶೀಟ್
ರಿಜಿಸ್ಟರ್ ನಂಬರ್: 255607
ಕಾಲೇಜು: ಶಾರದಾ ಪಿಯು ಕಾಲೇಜು, ಕೊಡಿಯಾಲ್ ಬೈಲು, ಮಂಗಳೂರು
* ಇಂಗ್ಲೀಷ್ : 94/100
* ಸಂಸ್ಕೃತ : 99/100
* ಬಿಸಿನೆಸ್ ಸ್ಟಡೀಸ್ : 100/100
* ಅಕೌಂಕ್ಟೆನ್ಸಿ : 100/100
* ಸ್ಟಾಟಿಸ್ಟಿಕ್ಸ್ : 100/100
* ಗಣಿತ: 100/100
ಒಟ್ಟಾರೆ: 593/600

ಇಷ್ಟೊಂದು ಅಂಕ ಗಳಿಸಲು ಹೇಗೆ ಸಾಧ್ಯವಾಯ್ತು?
ಶಾರದಾ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಮೂಹ ಕೂಡಾ ಶಿಕ್ಷಕರೊಡನೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 'ಟೀಚಿಂಗ್ ವಿಥ್ ಡಿಸಿಪ್ಲೀನ್' ನಮ್ಮ ಉದ್ದೇಶ. ಅಂದಿನ ಪಾಠ ಅಂದೇ ಓದುವ ಅಭ್ಯಾಸ ಎಲ್ಲರಲ್ಲೂ ಮೂಡಿದೆ.
ಹೀಗಾಗಿ ರಶ್ಮಿತಾ ಈ ರೀತಿ ಅಂಕ ಗಳಿಸಲು ಸಾಧ್ಯವಾಗಿದೆ ಎಂದು ಕಾಲೇಜಿನ ಶಿಕ್ಷಕ ವೃಂದ ಹೇಳಿದೆ. ಶ್ರೀಪತಿ ರಾವ್ ಪ್ರಿನ್ಸಿಪಾಲ್ ಮಾತನಾಡಿ, ರಶ್ಮಿತಾ ನಮ್ಮ ಕಾಲೇಜಿನ ಹೆಮ್ಮೆ ಎಂದು ಕೊಂಡಾಡಿದ್ದಾರೆ.

ರಶ್ಮಿತಾ ಪೋಷಕರ ಹಿನ್ನೆಲೆ
ತಂದೆ ಪುರುಷೋತ್ತಮ್ ಬಿ. ತಾಯಿ ಶಶಿಕಲಾ. ಪುರುಷೋತ್ತಮ್ ಅವರು ರಥಬೀದಿಯಲ್ಲಿ ನವೀನ್ ಇಂಜಿನಿಯರಿಂಗ್ ವರ್ಕ್ಸ್ ಎಂದು ಬಿಸಿನೆಸ್ ನಡೆಸುತ್ತಿದ್ದಾರೆ. ಹೆಚ್ಚಾಗಿ ಕಾಲೇಜಿನಲ್ಲಿ ಓದಿಕೊಂಡು ಬರುತ್ತಿದ್ದಳು. ಮನೆಯಲ್ಲಿ ಹೆಚ್ಚು ಕಾಲ ಟಿವಿ ನೋಡುವುದರಲ್ಲೇ ಕಾಲ ಕಳೆಯುತ್ತಿದ್ದಳು. ಆದರೆ, ಉನ್ನತ ಅಂಕ ಗಳಿಸುತ್ತಾಳೆ ಎಂಬ ನಿರೀಕ್ಷೆಯಿತ್ತು ಎಂದು ಪೋಷಕರು ಹೇಳಿದ್ದಾರೆ.

ರಶ್ಮಿತಾ ಮುಂದಿನ ಗುರಿ
ಸಿಎ (chartered accountant) ಆಗಲಿಕ್ಕೆ ರಶ್ಮಿತಾ ಇಚ್ಛೆ ಪಟ್ಟಿದ್ದಾರೆ. ಜೂನ್ ನಲ್ಲಿ ಸಿಪಿಟಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಶಿಕ್ಷಕರು ಹಾಗೂ ಪೋಷಕರ ನೆರವಿನಿಂದ ಈ ಯಶಸ್ಸು ಗಳಿಸಲು ಸಾಧ್ಯವಾಗಿದೆ. ನನಗೆ ಯಾವುದೇ ರೀತಿಯಲ್ಲಿ ಕಷ್ಟ ಎನಿಸಲಿಲ್ಲ. ಪ್ರತಿ ದಿನದ ಓದು ನನಗೆ ನೆರವಾಗಿದೆ ಎಂದು ರಶ್ಮಿತಾ ಹೇಳಿದ್ದಾರೆ.
ಇದೇ ಕಾಲೇಜಿನ ಆರ್ಯ ಎಂಬ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ 590/600 ಪಡೆದುಕೊಂಡಿದ್ದಾರೆ











Click it and Unblock the Notifications